ಒಕ್ಕಲಿಗ ಗೌಡ ಸಮುದಾಯದಿಂದ ಡಿ.ಕೆ.‌ ಶಿವಕುಮಾರ್ ಭೇಟಿ

ಕರ್ನಾಟಕ ರಾಜ್ಯದ ಗೌರವಾನ್ವಿತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಕರಾವಳಿ ಭಾಗದ ಒಕ್ಕಲಿಗ ಗೌಡ ಸಮುದಾಯದ ಪ್ರಮುಖರು ಭೇಟಿ ಮಾಡಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಪುತ್ತೂರಿನ ಮಾಜಿ ಶಾಸಕ ಹಾಗೂ ಪುತ್ತೂರಿನ ಒಕ್ಕಲಿಗ ಗೌಡ ಸೇವಾ ಸಂಘ (ರಿ.) ಇದರ ಸಲಹಾ ಸಮಿತಿ ಅಧ್ಯಕ್ಷ ಸಂಜೀವ ಮಠಂದೂರು, ಪುತ್ತೂರಿನ ಒಕ್ಕಲಿಗ ಗೌಡ ಸೇವಾ ಸಂಘ (ರಿ.) ಇದರ ಅಧ್ಯಕ್ಷ ಸುಂದರ ಗೌಡ ನಡುಬೈಲು, ಜೊತೆ ಕಾರ್ಯದರ್ಶಿ ಯತೀಶ್ ದೇವ ಸಂಟ್ಯಾರು , ಜಿಲ್ಲಾ ಸಿಸಿಪಿ ಸಂಯೋಜಕ ಪ್ರಸನ್ನ ಕುಮಾರ್ ಡಿ. ಆರ್., ಯುವ ಒಕ್ಕಲಿಗ ಸೇವಾ ಸಂಘ, ಪುತ್ತೂರು ಇದರ ಗೌರವಾಧ್ಯಕ್ಷ ಅಮರನಾಥ್ ಬಪ್ಪಳಿಗೆ, ಪುತ್ತೂರು ವಲಯದ ಮಾಜಿ ಯುವ ಘಟಕ ಅಧ್ಯಕ್ಷ ಧೀರಜ್ ಹಿರ್ಕುಡೇಲು ಹಾಗೂ ಮಂಗಳೂರು ತಾಲೂಕು ಸಮಿತಿಯ ಅಧ್ಯಕ್ಷ ಮತ್ತು ಪದಾಧಿಕಾರಿಗಳು, ಬೆಳ್ತಂಗಡಿ ತಾಲೂಕು ಸಮಿತಿಯ ಅಧ್ಯಕ್ಷ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

Advertisement

ಸಮುದಾಯದ ಒಗ್ಗಟ್ಟು, ಸಂಘಟನೆ ಮತ್ತು ಅಭಿವೃದ್ಧಿಯ ಸಂಕಲ್ಪಕ್ಕೆ ಈ ಭೇಟಿ ಮತ್ತಷ್ಟು ಬಲ ತುಂಬಿದೆ ಎಂದು ಈ ಸಂದರ್ಭದಲ್ಲಿ ಸಮುದಾಯದ ಪ್ರಮುಖರು ತಿಳಿಸಿದರು

Advertisement
Advertisement

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page