“ಮುಂದೈತೆ ಮಾರಿಹಬ್ಬ; ನಮ್ಮ ಬುರುಡೆಯೊಳಗೂ ಮೆದುಳಿದೆ” ಮಹೇಶ್‌ ಶೆಟ್ಟಿ ತಿಮರೋಡಿ ಸ್ಪೋಟಕ ಪ್ರತಿಕ್ರಿಯೆ!

ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರು ತನಿಖೆ ನಡೆಸುವಂತೆ ಸೂಚಿಸಿ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ಹೊರಡಿಸಿದ್ದು. ನ್ಯಾಯಮೂರ್ತಿ ಸಂಜಯ್‌ಕುಮಾರ್ ಪೀಠ ಮರು ತನಿಖೆಗೆ ಆದೇಶಿಸಿದ್ದು, ಹೊಸ ಎಸ್‌ಐಟಿ ರಚಿಸಿ ಮೂರು ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಲು ಸೂಚನೆ ನೀಡಿದೆ. ಈ ಹಿಂದೆ ಪ್ರಕರಣದ ತನಿಖೆ ನಡೆಸಿದ್ದ ಅಧಿಕಾರಿಗಳನ್ನು ಹೊಸ ತನಿಖೆಯಲ್ಲಿ ಸೇರಿಸದಂತೆ ಸುಪ್ರೀಂ ಕೋರ್ಟ್ ಹೇಳಿದೆ.

Advertisement

ಈ ಕುರಿತು ಪ್ರತಿಕ್ರಿಯೆ ನೀಡಿದ ಮಹೇಶ್‌ ಶೆಟ್ಟಿ ತಿಮರೋಡಿ, ಇದನ್ನು ಜಯ ಎಂದು ಭಾವಿಸುವುದಿಲ್ಲ. ಇನ್ನು ಮುಂದೆ ಇರುವಂತದ್ದು, ಅ ಮಗು ಸತ್ತಿದೆ ಅದಿಕ್ಕೆ ನ್ಯಾಯ ಸಿಗಬೇಕು, ತನಿಖೆಗೆ ಆದೇಶ ಆಗಿದೆ. 14 ವರ್ಷದಿಂದ ಆ ಧರ್ಮಸ್ಥಳ ಗ್ರಾಮದಲ್ಲಿ ಸೌಜನ್ಯಳಿಗೆ ನ್ಯಾಯ ಸಿಗಬೇಕು ಎಂದು ಅಂದೇ ಪ್ರತಿಜ್ಞೆ ಮಾಡಿದ್ದೇವೆ, 14 ವರ್ಷದ ಹಿಂದೆ ಆ ಪ್ರತಿಜ್ಞೆ ಇಂದು ಸತ್ಯವಾಗಿದೆ ಇದು ನಮಗೆ ತುಂಬಾ ಸಂತೋಷ ತಂದಿದೆ. ಆ ಸಂತೋಷವನ್ನು ನಾವು ಪಟಾಕಿ ಹೊಡೆದು ಸಂಭ್ರಮ ಮಾಡುವುದಿಲ್ಲ, ಮುಂದಿನ ದಾರಿ ಇನ್ನೂ ಇದೆ. ಎಸ್‌ಐಟಿ ರಚನೆ ಆಗುವಾಗಲೇ ನಮಗೆ ಒಂದು ರೀತಿಯ ಕನಸಿತ್ತು. ಆ ಕನಸು ಮಧ್ಯದಲ್ಲಿ ಸ್ವಲ್ಪ ಭಗ್ನವಾಯ್ತು. ದಯವಿಟ್ಟು ನಮ್ಮನ್ನು ಬುರುಡೆ ಗ್ಯಾಂಗ್‌ ಎನ್ನುತ್ತಾ ತೇಜೋವಧೆ ಮಾಡದಿರಿ ಎಂದು ವಿನಂತಿಸಿದರು.

Advertisement
Advertisement

ಮಾಧ್ಯಮಗಳು ದಯವಿಟ್ಟು ಸತ್ಯದ ಕಣ್ಣು ತೆರೆಸಬೇಕು. ಈ ಘಟನೆ ಪವಿತ್ರ ಕ್ಷೇತ್ರವಿರುವ ಧರ್ಮಸ್ಥಳ ಗ್ರಾಮದಲ್ಲಿ ಆದ ಘಟನೆ, ಇದರಲ್ಲಿ ದೈವಿಕ ರಹಸ್ಯಗಳಿವೆ. ನಮ್ಮನ್ನು ಈ ಹೋರಟಕ್ಕೆ ಇಳಿಸಿದ್ದು ಅಣ್ಣಪ್ಪ ಮತ್ತು ಮಂಜುನಾಥ ಸ್ವಾಮಿ. ಸೌಜನ್ಯ ಒಂದು ಶಕ್ತಿ. ಅವಳು ಎಲ್ಲಾ ಆತ್ಮಗಳಿಗೆ ನ್ಯಾಯ ಕೊಡಿಸಲು ಹುಟ್ಟಿದ ಮಗು. ನಿಮಗೆಲ್ಲರಿಗೂ ಗೊತ್ತಿರುವಂತೆ ಅವಳು ಸತ್ತ ದಿವಸ ಪೂರ್ತಿ ಉಪವಾಸದಲ್ಲಿದ್ದಳು. ಹಾಗಾಗಿ ಅವಳ ಎಲ್ಲಾ ಸಾಕ್ಷಿಗಳನ್ನು ನಾಶ ಮಾಡಿದ್ದಾರೆ. ಇವತ್ತು ಈ ದೇಶದ ಸರ್ವೋಚ್ಚ ನ್ಯಾಯಲಯ ಆದೇಶ ಮಾಡಿದೆ. ಇದು ಭಾರತ ದೇಶದ ನ್ಯಾಯಂಗದ ಒಳಗಡೆ 14 ವರ್ಷದ ಮೇಲೆ ಮರುತನಿಖೆಗೆ ಆದೇಶ ಮಾಡಿದಂತ ಲ್ಯಾಂಡ್‌ಮಾರ್ಕ್‌ ಜಡ್ಜ್ಮೆಂಟ್‌ ಇದು. ಅದರಲ್ಲಿ ಕೇಲವು ವಿಷಯಗಳನ್ನು ಬರೆದಿದ್ದಾರೆ ಆ ವಿಷಯಗಳನ್ನು ಕೇಳುವಾಗ ನಮಗೆ ನೋವಾಗುತ್ತದೆ ಜಡ್ಜ್ಗ್‌ಳಿಗೆ ಗೊತ್ತಿದೆ ಯಾರ್ಯಾರು ತಪ್ಪು ಮಾಡಿದ್ದಾರೆ ಎಂದು. ಜನಸಮಾನ್ಯರಿಗೆ ಮಾಧ್ಯಮದವರಿಗೆ ಪೋಲಿಸ್‌ ಇಲಾಖೆಗೆ ಹಾಗೂ ಎಲ್ಲಾ ರಾಜಕೀಯ ಪಕ್ಷದ ನಾಯಕರಿಗೂ ಗೊತ್ತಿದೆ, ಆದರೆ ಯಾರು ಮಾತನಾಡುವುದಿಲ್ಲ ಎಂದರು.

ನೂರಾರು ಸಾಕ್ಷ್ಯಗಳು ಕಣ್ಣಮುಂದೆ ಇದೆ. ತಪ್ಪು ಮಾಡಿದ ಅಧಿಕಾರಿಗಳಿದ್ದಾರೆ. ಆತ್ಯಾಚಾರಿಗಳನ್ನು ರಕ್ಷಣೆ ಮಾಡಿದ ರಾಜಕೀಯ ವ್ಯಕ್ತಿಗಳು ಇದ್ದಾರೆ. ಹೆಸರು ಈಗ ಹೇಳುವುದಿಲ್ಲ. ವಿಡಿಯೋದಲ್ಲಿ ಒಬ್ಬಾತ ನಾನು ಅವತ್ತೇ ಗೃಹ ಮಂತ್ರಿಗೆ ಫೋನ್‌ ಮಾಡಿದ್ದೇನೆ ಎನ್ನುತ್ತಾನೆ. ಆ ಗೃಹ ಮಂತ್ರಿ ಮೊನ್ನೆ ಮಾಧ್ಯಮವೊಂದರಲ್ಲಿ ನನಗೆ ಫೋನೇ ಮಾಡಲಿಲ್ಲ ಅಂತ ಹೇಳ್ತಾರೆ. ಅಂದು ಸಾಕ್ಷಿ ನಾಶಮಾಡಿದ್ದು ಪೋಲಿಸ್‌ ಇಲಾಖೆ ಮತ್ತು ಆಗಿನ ಗೃಹಮಂತ್ರಿ. ಅವರನ್ನು ಕೂಡ ತನಿಖೆಗೆ ಒಳಪಡಿಸಲಿ. ಜೊತೆಗೆ ಎಸ್‌ಪಿ ಅಭಿಷೇಕ್‌ ಗೋಯಲ್‌ ಪಬ್ಲಿಕ್‌ ಸಭೆಯಲ್ಲಿ ಎರಡು ಸಿಸಿ ಫುಟೆಜ್‌ ಸಿಕ್ಕಿದೆ ಎಂದಿದ್ದಾರೆ. ಹಾಗಾದ್ರೆ ಅದು ಎಲ್ಲಿಗೆ ಹೋಯಿತು ಎಂದು ಪ್ರಶ್ನಿಸಿದರು.

ಈ ಕೇಸ್‌ನಲ್ಲಿ ಸಾಕ್ಷಿಗಳಾಗಿದ್ದ 8 ಜನ ಕೊಲೆಯಾಗಿದ್ದಾರೆ. ಅದರಲ್ಲಿ 4 ಜನ ಸಾಕ್ಷಿ ರೆಕಾರ್ಡ್‌ ನಲ್ಲಿದ್ದವರು ಮತ್ತು ಬಾಕಿ 4 ಜನರ ಕೊಲೆಯಾಗಿದೆ. ದಕ್ಷ ಅಧಿಕಾರಿಗಳನ್ನು ನೇಮಕ ಮಾಡ್ಲೇಬೇಕು. ಯಾಕಂದ್ರೆ ಸುಪ್ರೀಂ ಕೋರ್ಟ್ ನ ಸುಪಾರ್ದಿಯಲ್ಲಿ ಆಗುವಂತಹ ತನಿಖೆ ಇದು. ನಾವು 14 ವರ್ಷದಿಂದ ಇದನ್ನೇ ಹೇಳುತ್ತಾ ಬಂದಿದ್ದೇವೆ. ಯಾವುದೇ ಕಾರಣಕ್ಕೂ ಈ ಹೋರಾಟ ನಿಲ್ಲಿಸುವುದಿಲ್ಲ. ಸುಪ್ರೀಂ ಕೋರ್ಟ್‌ ಹಿಂದೆ ಮಾಡಿದಂತ ತನಿಖಾ ತಂಡಗಳಿಗೆ ಚಾಟಿ ಬೀಸಿಯಾಗಿದೆ. ಸರ್ಕಾರಕ್ಕೂ ಚಾಟಿ ಬೀಸಿಯಾಗಿದೆ. ಒಟ್ಟಿನಲ್ಲಿ ನಮ್ಮನ್ನು ಬುರುಡೆ ಅಂತ ಹೇಳಿ ಇನ್ನು ಟೀಕೆ ಮಾಡಬೇಡಿ, ಬುರುಡೆ ಅಲ್ಲ ಬುರುಡೆಯ ಒಳಗೆ ಮೆದುಲು ಕೂಡ ಇದೆ. 14 ವರ್ಷದಿಂದ ಓಡಿ ಓಡಿ ಇವತ್ತು ಅದು ಸುಪ್ರೀಂ ಕೋರ್ಟ್‌ನ ಒಳಗಡೆ ಮುಟ್ಟಿದೆ. ಅದಕ್ಕೋಸ್ಕರ ಯಾರು ದಯವಿಟ್ಟು ಟೀಕೆ ಮಾಡಾಬೇಡಿ. ನಾನು ನ್ಯಾಯ ಸಿಗುವವರೆಗೆ ಹೋರಾಟ ಮಾಡುತ್ತೇನೆ. ಮುಂದಿನ ದಿನಗಳಲ್ಲಿ ಮಾರಿಹಬ್ಬ ಕಾದಿದೆ. ಈ ಸಲ ಹೋರಾಟ ಲಕ್ಷಾಂತರ ಜನರನ್ನು ಸೇರಿಸಿ ಮಂಗಳೂರಿನ ನೆಹರು ಮೈದಾನದಲ್ಲಿಯೇ ಮಾಡುತ್ತೇವೆ ಎಂದು ಗುಡುಗಿದರು.

ಒಟ್ಟಿನಲ್ಲಿ ಇದೀಗ ತನಿಖೆ ಮತ್ತೆ ಮರುಜೀವ ಪಡೆದುಕೊಂಡಿದ್ದು, ಸೌಜನ್ಯಳ ಕೇಸ್‌ನಲ್ಲಿ ಸುಪ್ರೀಂ ಕೋರ್ಟ್‌ ತೆಗೆದುಕೊಂಡ ನಿರ್ಧಾರಕ್ಕೆ ಅನುಗುಣವಾಗಿ ಸರಿಯಾಗಿ ತನಿಖೆ ನಡೆದು ನ್ಯಾಯ ದಕ್ಕುವುದೇ ಎಂಬುದನ್ನು ಇನ್ನಷ್ಟೇ ಕಾದು ನೋಡಬೇಕಾಗಿದೆ.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page