ಏಕ ಪಕ್ಷ ಧೋರಣೆಯ ಮೂಲಕ ಮೆಡಿಕಲ್‌ ಆಸ್ಪತ್ರೆಗೆ ಭೂಮಿ ಪೂಜೆ ; ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಿರೋಧ!! ದಿನೇಶ್‌ ಜೈನ್‌ ಕೊಟ್ಟ ಕಾರಣಗಳೇನು?? ಮುಂದಿನ ಚುನಾವಣೆಗೆ ಟ್ರಂಪ್‌ ಕಾರ್ಡ್‌ ಆಗಿ ಬದಲಾಗುತ್ತಿದ್ದೆಯೇ ಪುತ್ತೂರಿನ ಮೆಡಿಕಲ್‌ ಕಾಲೇಜು??!

ಪುತ್ತೂರು : ಪುತ್ತೂರಿನ ಬಹುಕಾಲದ ಬೇಡಿಕೆಯಾಗಿರುವ ಸರ್ಕಾರಿ ಮೆಡಿಕಲ್‌ ಕಾಲೇಜಿನ ಆರಂಭಿಕ ಹಂತದಲ್ಲಿ 300 ಹಾಸಿಗೆಗಳ ಮೆಡಿಕಲ್‌ ಕಾಲೇಜು ಆಸ್ಪತ್ರೆ ನಿರ್ಮಾಣಕ್ಕೆ ಬನ್ನೂರು ಗ್ರಾ.ಪಂ. ವ್ಯಾಪ್ತಿಯ ಸೇಡಿಯಾಪಿನಲ್ಲಿ ಸೆ.25ರಂದು ಭೂಮಿ ಪೂಜೆ ನೆರವೇರಿದ ನಂತರ ಮಹತ್ತರ ಬೆಳವಣಿಗೆಗಳು ಪುತ್ತೂರು ರಾಜಕೀಯ ವಲಯದಲ್ಲಿ ನಡೆದಿದೆ.

Advertisement

ಇದರ ಕುರಿತು ಸಾಮಾಜಿಕ ಕಾರ್ಯಕರ್ತ ದಿನೇಶ್‌ ಜೈನ್‌ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹೀಗೆ ಬರೆದಿದ್ದಾರೆ :

Advertisement
Advertisement

2021 ರಲ್ಲಿ ಪುತ್ತೂರಿನ ಶಾಸಕ ಸಂಜೀವ ಮಠಂದೂರು ಮೆಡಿಕಲ್‌ ಆಸ್ಪತ್ರೆಯ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದಾಗ ಮತ್ತು ವೈದ್ಯಕೀಯ ಕಾಲೇಜು ಸ್ಥಾಪಿಸಲು ಪೂರ್ವಾಪೇಕ್ಷಿತವಾದ ಪುತ್ತೂರಿನಲ್ಲಿ ಅಸ್ತಿತ್ವದಲ್ಲಿರುವ ಹೆರಿಗೆ ಆಸ್ಪತ್ರೆಯನ್ನು 150 ಹಾಸಿಗೆಗಳ ಸರ್ಕಾರಿ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸುವ ಅನುಮೋದನೆಗಾಗಿ ಕಾಯುತ್ತಿದ್ದಾಗ ಕಾಲೇಜಿಗೆ ಬೇಡಿಕೆ ಪ್ರಾರಂಭವಾಯಿತು.
ಹೀಗಾಗಿ ಮೊದಲು ಇದನ್ನು ಮೇಲ್ದರ್ಜೆಗೇರಿಸಿದ್ದು ಅಂದಿನ ಪುತ್ತೂರು ಶಾಸಕ ಸಂಜೀವ ಮಠಂದೂರು ಎಂಬ ಮಾತು ಇದೀಗ ಕೆಲವು ವಲಯಗಳಿಂದ ಕೇಳಿ ಬರುತ್ತಿದೆ. ಜೊತೆಗೆ ಶಕುಂತಲಾ ಶೆಟ್ಟಿಯವರ ಅವಧಿಯಲ್ಲಿಯೂ ಇದರ ಕುರಿತು ಮಾತುಕತೆ ನಡೆದಿತ್ತು ಎಂಬುದು ಕೆಲವೊಂದು ವರದಿಗಳಿಂದ ತಿಳಿದು ಬಂದಿದೆ.

ಪುತ್ತೂರು ಸರಕಾರಿ ಮೆಡಿಕಲ್ ಕಾಲೇಜು ಬರ್ತದೆ ಸರಕಾರ ಹಣ ಬಿಡುಗಡೆ ಮಾಡಿದೆ ಎಂದು ಅನೇಕ ವೇದಿಕೆಗಳ ಬಾಷಣದಲ್ಲಿ ಹೇಳಿರುವ ಪುತ್ತೂರು ಶಾಸಕರೇ. ನಿಮ್ಮ ಶುರುವಿನ ಸಮಯದಲ್ಲಿಯೇ ನಾವು ಹೇಳಿದ್ದೆವೆ, ಮೆಡಿಕಲ್ ಕಾಲೇಜು ಬರುವುದು ಅಲ್ಲ. ಮೆಡಿಕಲ್ ಅಸ್ಪತ್ರೆ 300 ಬೆಡ್ಡಿನ ಅಸ್ಪತ್ರೆ ಅದು. ಪುತ್ತೂರು ಸರಕಾರಿ ಅಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಿ ಅಮೇಲೆ ಮೆಡಿಕಲ್ ಕಾಲೇಜು ಬರಬೇಕಿದೆ. ಇದು ಹಿಂದಿನ ಬಿಜೆಪಿ ಸರಕಾರ ಇರುವಾಗ ಪುತ್ತೂರು ಶಾಸಕ ಸಂಜೀವ ಮಠಂದೂರು ಪುತ್ತೂರು ಸರಕಾರಿ ಅಸ್ಪತ್ರೆಯ ರಕ್ಷಾ ಸಮಿತಿ ಸದಸ್ಯರಲ್ಲಿ ನಾನು ಒಬ್ಬ. ಆ ಸಮಯದಲ್ಲಿ ಮೆಡಿಕಲ್ ಕಾಲೇಜು ಬಗ್ಗೆ ಡಾಕ್ಟರ್ ಸುಧಾಕರ್ ಅರೋಗ್ಯ ಸಚಿವರಾಗಿ ಇರುವಾಗ ನಾವು ಅವರ ಜೊತೆ ಸಮಾಲೋಚನೆ ಮಾಡಿದಾಗ ಅವರೇ ಕೊಟ್ಟ ಮಾರ್ಗದರ್ಶನದಂತೆ ಪುತ್ತೂರು ಸರಕಾರಿ ಅಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಲು ಮಾಸ್ಟರ್ ಪ್ಲಾನ್ ತಯಾರಿಸಿ, ಪುತ್ತೂರು ಸರಕಾರಿ ಅಸ್ಪತ್ರೆ ಸುತ್ತ ಮುತ್ತ ಇದ್ದ ಸರಕಾರಿ ಜಾಗವನ್ನು ಸುಮಾರು 5 ಎಕರೆ 18 ಸೆನ್ಸ್‌ ಅಂದಾಜು ಜಾಗವನ್ನು ಸರಕಾರಿ ಅಸ್ಪತ್ರೆ ಹೆಸರಿಗೆ ಮಾಡಿ ಪ್ರಾಜೆಕ್ಟ್ ರಿಪೋರ್ಟ್ ತಯಾರಿಸಿ ಪುತ್ತೂರು ಲೋಕೋಪಯೋಗಿ ಇಲಾಖೆಯ ಅಂದಿನ ಇಂಜಿನಿಯರ್ ಅವರ ಮುಖಾಂತರ ಸರಕಾರಕ್ಕೆ ಕಳಿಸಿದ್ದೆವು.

ಅದರಲ್ಲಿ ಟೆಕ್ನಿಕಲ್ ಸಮಸ್ಯೆ ಇದ್ದು ಒಂದು ಬಾರಿ ಹಿಂದೆ ಬಂದಾಗ. ನಮ್ಮ ಪ್ರಾಜೆಕ್ಟ್ ರಿಪೋರ್ಟ್‌ನಲ್ಲಿ ಹಾಕಿದ ಬಜೇಟ್ ಕಡಿಮೆ ಅಗಿತ್ತು. ಅದನ್ನು 280 ಕೋಟಿಗೆ ಏರಿಸಿ ನಾವು ಮತ್ತೆ ಸರಕಾರಕ್ಕೆ ಕಳಿಸಿದ್ದೆವು. ಅದರೆ ನಮ್ಮ ಪ್ರಾಜೆಕ್ಟ್ ಅರೋಗ್ಯ ಸಚಿವಾಲಯದಿಂದ ಸರಕಾರದ ಅರೋಗ್ಯ ಇಲಾಖೆಯ ಮುಖಾಂತರ ಹಣಕಾಸಿನ ಇಲಾಖೆಯ ಅನುಮೋದನೆಗಾಗಿ ಕಲಿಸಿಲಾಗಿತ್ತು. 280 ಕೋಟಿ ಹಣವು ಪಾಸ್ ಅಗಲು ಬಾಕಿ ಇತ್ತು. ಅದೇ ಸಮಯದಲ್ಲಿ ಸರಕಾರದ ಅವಧಿ ಮುಗಿಯುವ ಸಮಯ ಅಗಿತ್ತು. ಹಾಗಾಗಿ ನಮ್ಮ ಅವಧಿಯ ನಂತರ ಬಂದ ಪುತ್ತೂರು ಶಾಸಕರು ಅದನ್ನೇ ಸ್ವಲ್ಪ ಬದಲಾವಣೆ ಮಾಡಿ 574 ಕೋಟಿಗೂ ಹೆಚ್ಚುವರಿಯಾಗಿ ಅನುದಾನ ಮಾಡಿಸಿದರು. ಪುತ್ತೂರು ಮೆಡಿಕಲ್ ಕಾಲೇಜು ಜಾಗಕ್ಕೆ ಪುತ್ತೂರು ಸರಕಾರಿ ಹೆಚ್ಚುವರಿ 300 ಬೆಡ್ಡಿನ ಅಸ್ಪತ್ರೆಯನ್ನು ಸ್ಥಳಂತರ ಮಾಡಿದರು.

ಇಡೀ ಪುತ್ತೂರಿನ ಮೂಲೆ ಮೂಲೆಗಳಲ್ಲಿ ಬಾಷಣದಲ್ಲಿ ಪ್ರತೀ ವೇದಿಕೆಯಲ್ಲಿ ಮೆಡಿಕಲ್ ಕಾಲೇಜ್ ಮೆಡಿಕಲ್ ಕಾಲೇಜ್ ಎಂದು ಹೇಳುತ್ತಿದ್ದವರು ಏಕಾಏಕಿ 300 ಬೆಡ್ಡಿನ ಅಸ್ಪತ್ರೆಗೆ ಶಿಲಾನ್ಯಾಸ ಮಾಡಿ ಪುತ್ತೂರು ಜನರನ್ನು ದಾರಿ ತಪ್ಪಿಸಿ ಮಾಡಿದ ಕೆಲಸ ಏನು. ಸರಕಾರದ ಯಾವುದೇ ಪ್ರತಿನಿಧಿಗಳು ಇಲ್ಲ. ನಮ್ಮದೇ ಜಿಲ್ಲೆಯ ಅರೋಗ್ಯ ಸಚಿವರು ಮತ್ತು ಈ ಜಿಲ್ಲೆಯ ಉಸ್ತುವರಿ ಸಚಿವ ಯುಟಿ ಖಾದರ್ ಅವರನ್ನು ಬಿಟ್ಟು ಈ ಜಾಗವನ್ನು ಕಾದಿರಿಸಿದ ಶಕುಂತಲಾ ಶೆಟ್ಟಿಯನ್ನು ಬಿಟ್ಟು ಕೇವಲ ನಿಮ್ಮ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನು ಪಧಾದಿಕಾರಿಗಳನ್ನು ಸೇರಿಸಿ ನೀವು ಮಾತ್ರವೇ ಶಿಲಾನ್ಯಾಸ ಮಾಡಿದ್ದೀರಿ ಅಂದರೆ ಏನು ಅರ್ಥ. ಈಗ ಮತ್ತೆ ಹೇಳ್ತೀರಿ ಮುಖ್ಯ ಮಂತ್ರಿಯವರು ಮೆಡಿಕಲ್ ಕಾಲೇಜು ಶಿಲಾನ್ಯಾಸಕ್ಕೆ ಬರ್ತಾರೆ ಎಂದು!!

ಒಟ್ಟು ಎಲ್ಲವೂ ನಿಮ್ಮ ಮೂಗಿನ ನೇರಕ್ಕೆ ಅಗಬೇಕು .
ಪುತ್ತೂರು ಸರಕಾರಿ ಅಸ್ಪತ್ರೆ ಬಳಿ ಸರಕಾರಿ ಆಸ್ಪತ್ರೆ ಹೆಸರಲ್ಲಿ 5.18 ಎಕರೆ ಒಟ್ಟು 300 ಬೆಡ್ಡಿನ ಅಸ್ಪತ್ರೆಗಾಗಿ ಕಾದಿರಿಸಿ ಇರುವಾಗ. ಅಸ್ಪತ್ರೆಯನ್ನು ಮೇಡಿಕಲ್ ಕಾಲೇಜು ಹೆಸರಲ್ಲಿ ಸ್ಥಳಾಂತರ ಮಾಡಿದ್ದು ಸರಿಯೇ. ಸುಳ್ಯ /ಬೆಳ್ಳಾರೆ ಇನ್ನಿತರ ಕಡೆಗಳಿಂದ ಬರುವ ಪೇಷಂಟ್ ಮುಂದೆ ಅನುಭವಿಸಬೇಕಾದ ಸಮಸ್ಯೆಗಳನ್ನು ಚಿಂತನೆ ಮಾಡಿದ್ದೀರಾ.
ಮೆಡಿಕಲ್ ಕಾಲೇಜು ಅಲ್ಲೆ ಮಾಡಿ. ಅಸ್ಪತ್ರೆ ಮಾತ್ರ ಇಲ್ಲೇ ಮಾಡಿ. ಈಗ ಇರುವ ಅಸ್ಪತ್ರೆಗೆ ಸರಿಯಾದ ಡಾಕ್ಟರ್ ನರ್ಸ್ ಇಲ್ಲ. ನೇಮಕ ಮಾಡಲು ಸರಕಾರದಲ್ಲಿ ಹಣ ಇಲ್ಲ. ಇನ್ನು ಕೊಯಿಲದ ಪಶುವೈದ್ಯಕಿಯ ಅಸ್ಪತ್ರೆ ಕಟ್ಟಡದಂತೆ ಕಟ್ಟಿ ಭೂತ ಬಂಗಲೆ ಅಗದಿರಲಿ ಈ ಯೊಜನೆ. 300 ಬೆಡ್ಡಿನ ಸರಕಾರಿ ಅಸ್ಪತ್ರೆಯನ್ನು ಈಗ ಇರುವ ಸರ್ಕಾರಿ ಅಸ್ಪತ್ರೆ ಬಳಿಯಲ್ಲೇ ಮಾಡಿ.
ಅಸ್ಪತ್ರೆಯನ್ನು ಪುತ್ತೂರು ಜನರ ಕಿವಿಗೆ ಮೆಡಿಕಲ್ ಕಾಲೇಜು ಎಂದು ಬಿಂಬಿಸಿ ಕಿವಿಗೆ ಹೂ ಇಡುವ ರಂಗು ರಂಗಿನ ಮಾತನಾಡುವ ನಿಮ್ಮ ಪ್ರಚಾರದ ಮನಸ್ಥಿತಿಯನ್ನು ಬದಲಾವಣೆ ಮಾಡಿ. ಜನ ಮೂರ್ಖರು ಅಲ್ಲ.

ಈ ವಿಷಯವಾಗಿ ಸಾಮಾಜಿಕ ಕಾರ್ಯಕರ್ತ ದಿನೇಶ್‌ ಜೈನ್‌ ಅವರನ್ನು ನಿಮಿಷ ನ್ಯೂಸ್‌ ಸಂಪರ್ಕಸಿದಾಗ ಕೆಲವೊಂದು ದಾಖಲೆಗಳನ್ನು ಕಳುಹಿಸಿದ್ದು, ಅದನ್ನು ಈ ಕೆಳಗೆ ನೀಡಲಾಗಿದೆ :
ಪುತ್ತೂರಿನಲ್ಲಿ ಇತ್ತೀಚೆಗೆ ನಡೆದ ಪುರುಷರಕಟ್ಟೆ ಪ್ರಕರಣ, ದರ್ಬೆ ಗಲಾಟೆ, ಹಕೀಂ ಕೂರ್ನಡ್ಕ ಸುದ್ದಿಗೋಷ್ಠಿ ಮುಂತಾದ ವಿಷಯಗಳಿಂದ ಶಾಸಕರ ವರ್ಚಸ್ಸಿಗೆ ಧಕ್ಕೆ ಬಂದಿದ್ದು, ಅವುಗಳೆಲ್ಲವನ್ನು ತೇಪೆ ಹಚ್ಚುವ ಕೆಲಸವನ್ನು ಶಾಸಕರು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಈ ಎಲ್ಲಾ ವಿಚಾರಗಳನ್ನು ಗಮನಿಸಿದಾಗ ಸಾರ್ವಜನಿಕರಲ್ಲಿ ಸಾಮಾನ್ಯವಾಗಿ ಕೆಲವೊಂದು ಗೊಂದಲದ ಪ್ರಶ್ನೆಗಳು ಮೂಡಿದ್ದು ಸುಳ್ಳಲ್ಲ. ಇನ್ನು ಈಗ ಭೂಮಿಪೂಜೆ ನಡೆದಿರುವುದು ಮೆಡಿಕಲ್‌ ಕಾಲೇಜಿಗಾ ಅಥವಾ ಆಸ್ಪತ್ರೆಗಾ ಎಂಬುದು ಅನೇಕ ಜನರಲ್ಲಿ ಗೊಂದಲವಿದೆ. ಈ ಕುರಿತು ನೋಡುವುದಾದರೆ ಭೂಮಿ ಪೂಜೆ ನಡೆದಿರುವುದು ಸರ್ಕಾರಿ ಮೆಡಿಕಲ್‌ ಕಾಲೇಜಿನ ಆರಂಭಿಕ ಹಂತದಲ್ಲಿ 300 ಹಾಸಿಗೆಗಳ ಮೆಡಿಕಲ್‌ ಆಸ್ಪತ್ರೆಗೆ. ಇನ್ನು ಮುಂದಿನ ದಿನಗಳಲ್ಲಿ ಮೆಡಿಕಲ್‌ ಕಾಲೇಜು ನಿರ್ಮಾಣಕ್ಕೆ ಮುಂದಡಿಯಿಡಬೇಕಷ್ಟೇ. ಟೆಂಡರ್‌ ಯಾರು ಎಂಬುದು ಈ ತನಕ ತಿಳಿಯದಿರುವುದು ವಿಪರ್ಯಾಸ. ಜನರಲ್ಲಿ ಕೇಳಿದಾಗ ಇದು ಮಾತನಾಡಿಕೊಂಡಷ್ಟು ಸುಲಭವಲ್ಲ. ಇದಕ್ಕಾಗಿ ಇನ್ನೂ ಅನೇಕ ಕೆಲಸಗಳಿವೆ. ಶಾಸಕರ ಈ ಅವಧಿಯಲ್ಲೇ ಎಲ್ಲವೂ ನಿರ್ಮಾಣಗೊಳ್ಳುವುದಿಲ್ಲ. ಮುಂದಿನ ಚುನಾವಣೆಗೆ ಮೆಡಿಕಲ್‌ ಆಸ್ಪತ್ರೆಯ ಕೆಲಸಗಲೇ ಟ್ರಂಪ್‌ ಕಾರ್ಡ್‌ ಆಗಿ ಪರಿವರ್ತನೆಗಳ್ಳುವ ಸೂಚನೆಗಳೂ ಕೇಳಿ ಬರುತ್ತಿವೆ.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page