ನವೆಂಬರ್‌ ಮೊದಲ ವಾರದಲ್ಲೇ ರಾಮಾಯಣ ರಿಲೀಸ್!!‌ ಈ ಸಿನೆಮಾದಲ್ಲಿ ಯಶ್‌ಗೆ ಸಿಗುತ್ತಾ ಸಕ್ಸಸ್‌??!!

ಮುಂಬಯಿ: ನಿತೇಶ್ ತಿವಾರಿ ನಿರ್ದೇಶನದ ʼರಾಮಾಯಣʼ ಚಿತ್ರ ಗ್ಲೋಬಲ್ ಮಟ್ಟದಲ್ಲಿ ದೊಡ್ಡದಾಗಿ ಸದ್ದು ಮಾಡುತ್ತಿದೆ. ಸಿನೆಮಾದ ವಿಎಫ್ಎಕ್ಸ್ ಸೇರಿದಂತೆ ಪ್ರಮುಖ ಕೆಲಸಕ್ಕೆ ಹಾಲಿವುಡ್‌ನ ದಿಗ್ಗಜ ಸಂಸ್ಥೆಗಳು ಸಾಥ್ ನೀಡಿದೆ.
ಬಹುನಿರೀಕ್ಷಿತ ಪೌರಾಣಿಕ ಚಿತ್ರವನ್ನು ದೊಡ್ಡಮಟ್ಟದಲ್ಲಿ ತೆರೆಗೆ ತರಲು ನಮಿತ್ ಮಲ್ಹೋತ್ರಾ ಯೋಜಿಸಿದ್ದಾರೆ. ಅದಕ್ಕೆ ತಕ್ಕ ಹಾಗಿನ ಕೆಲಸವನ್ನೂ ಕಳೆದ ಕೆಲ ವರ್ಷಗಳಿಂದ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಚಿತ್ರದ ಪ್ರಮುಖ ಪಾತ್ರದ ಪೋಸ್ಟರ್ಸ್‌ಗಳನ್ನು ರಿಲೀಸ್ ಮಾಡಲಾಗಿದೆ. ಹಾಡುಗಳನ್ನು ಬಿಡುಗಡೆ ಮಾಡಲಾಗಿದೆ. ದೀಪಾವಳಿ ಹಬ್ಬದ ವೇಳೆ ʼರಾಮಾಯಣʼ ರಿಲೀಸ್ ಆಗಲಿದೆ. ವಿದೇಶದಲ್ಲಿ ಎರಡು ದಿನ ಮುನ್ನವೇ ಥಿಯೇಟರ್‌ಗೆ ಲಗ್ಗೆ ಇಡಲಿದೆ ಎಂದು ಹೇಳಲಾಗಿತ್ತು .
ಇದೀಗ ಅಂದುಕೊಂಡ ದಿನಕ್ಕಿಂತ ಒಂದು ದಿನ ಮುನ್ನವೇ ಸಿನಿಮಾ ಥಿಯೇಟರ್‌ಗೆ ಎಂಟ್ರಿ ಕೊಡಲಿದೆ ಎಂದು ʼಬಾಲಿವುಡ್ ಹಂಗಾಮʼ ವರದಿ ಮಾಡಿದೆ.

Advertisement

ಚಿತ್ರ ನವೆಂಬರ್ 6 ರಂದು ಬಿಡುಗಡೆಯಾಗಬೇಕಿತ್ತು , ಆದರೆ ವರದಿಯ ಪ್ರಕಾರ ಇದರ ಬಿಡುಗಡೆಯನ್ನು ನವೆಂಬರ್ 5ಕ್ಕೆ ಅಂದರೆ ಒಂದು ದಿನ ಮುನ್ನವೇ ರಿಲೀಸ್ ಮಾಡುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಈ ಹೊಸ ದಿನಾಂಕಕ್ಕೆ ಅಂತಿಮ ಅನುಮೋದನೆ ಸಿಕ್ಕರೆ, ಚಿತ್ರತಂಡವು ಶೀಘ್ರದಲ್ಲೇ ಅಧಿಕೃತ ಘೋಷಣೆ ಮಾಡುವ ನಿರೀಕ್ಷೆಯಿದೆ.
ರಣ್‌ಬೀರ್ ಕಪೂರ್ ʼರಾಮʼನಾಗಿ ಕಾಣಿಸಿಕೊಳ್ಳಲಿದ್ದು, ʼಸೀತೆʼಯಾಗಿ ಸಾಯಿಪಲ್ಲವಿ ಕಾಣಿಸಿಕೊಳ್ಳಲಿದ್ದಾರೆ. ʼರಾವಣʼನಾಗಿ ಯಶ್ ಹಾಗೂ ʼಲಕ್ಷ್ಮಣʼನಾಗಿ ರವಿ ದುಬೆ ಅವರು ಕಾಣಿಸಿಕೊಳ್ಳಲಿದ್ದಾರೆ.

Advertisement
Advertisement

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page