ಭಾರತೀಯ ಕಿಸಾನ್‌ ಸಂಘದಿಂದ ಮಹತ್ವದ ಸುದ್ದಿಗೋಷ್ಠಿ! ಪ್ರತಿಭಟನೆಯ ಎಚ್ಚರಿಕೆ!!

ಪುತ್ತೂರು: ಕೃಷಿಗೆ ಕಾಡು ಪ್ರಾಣಿಗಳ ಉಪಟಳ ತಡೆ, ಕೋವಿ ಪರವಾನಿಗೆ ನವೀಕರಣ, ವಿದ್ಯುತ್ ಸಮಸ್ಯೆ ಪರಿಹಾರ ಸೇರಿದಂತೆ ರೈತರ ವಿವಿಧ ಬೇಡಿಕೆಗಳನ್ನು ಸರ್ಕಾರವು ನ.15ರ ಒಳಗಾಗಿ ಪರಿಹರಿಸದಿದ್ದಲ್ಲಿ ಭಾರತೀಯ ಕಿಸಾನ್ ಸಂಘದ ವತಿಯಿಂದ ಪುತ್ತೂರಿನ ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಸಂಘದ ಉಪಾಧ್ಯಕ್ಷ ದಿವ್ಯ ಪ್ರಸಾದ್ ತಿಳಿಸಿದ್ದಾರೆ.

Advertisement

ಅವರು ಪುತ್ತೂರು ಪ್ರೆಸ್‌ಕ್ಲಬ್‌ನಲ್ಲಿ ಸುದ್ಧಿಗೋಷ್ಟಿಯಲ್ಲಿ ಮಾತನಾಡಿ ಜಿಲ್ಲೆಯಲ್ಲಿ ಕೃಷಿ ತೋಟಗಳಿಗೆ ಆನೆ, ಮಂಗ ಮತ್ತು ಕಾಡುಹಂದಿಯ ಹಾವಳಿ ಹೆಚ್ಚಾಗಿದ್ದು, ರೈತರಿಗೆ ಅನೇಕ ಕಷ್ಟ ನಷ್ಟಗಳು ಉಂಟಾಗುತ್ತಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಆನೆಯನ್ನು ಬೆನ್ನಟ್ಟುವ ಕಾರ್ಯ ಸಮರ್ಪಕವಾಗಿ ನಡೆಯಬೇಕು. ಅಲ್ಲದೆ ಮಂಗ ಮತ್ತು ಕಾಡು ಹಂದಿಯ ನಿಯಂತ್ರಿಸಿ ಬೆಳೆಯನ್ನು ರಕ್ಷಿಸುವ ಕೆಲಸ ಮಾಡಬೇಕು. ಈ ಹಿಂದೆ ಕಾಡು ಹಂದಿ ಮತ್ತು ಮಂಗಗಳು ಡಿ ಷೆಡ್ಯೂಲ್‌ನಲ್ಲಿತ್ತು ಅದನ್ನು ಬಿ ಷೆಡ್ಯೂಲ್‌ಗೆ ವರ್ಗಾವಣೆ ಮಾಡಲಾಗಿದೆ. ಇದರಿಂದಾಗಿ ನಿಯಂತ್ರಣಕ್ಕೆ ಸಮಸ್ಯೆ ಆಗಿದೆ. ಅದನ್ನು ಮೊದಲಿನಂತೆ ಡಿ ಷೆಡ್ಯೂಲ್‌ಗೆ ವರ್ಗಾಯಿಸಬೇಕು. ಕಸ್ತೂರಿ ರಂಗನ್ ವರದಿ ಅನುಷ್ಠಾನದಲ್ಲಿ ರೈತರು ತನ್ನ ಕೃಷಿ ಚಟುವಟಿಕೆ ನಡೆಸಲು ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು. ರೈತರ ಕೃಷಿ ಸಂರಕ್ಷಣೆಗಾಗಿ ಬಳಸುವ ಕೋವಿಗಳ ನವೀಕರಣೆಕ್ಕೆ ಇರುವ ಅಡೆತಡೆಗಳನ್ನು ನಿವಾರಿಸಬೇಕು. ಚುನಾವಣೆ ಸಂದರ್ಭದಲ್ಲಿ ಕ್ರಿಮಿನಲ್ ಮೊಕದ್ದಮೆ ಇಲ್ಲದಿರುವ ರೈತರ ಕೋವಿಗಳನ್ನು ಡೆಪಾಸಿಟ್ ಮಾಡುವ ವ್ಯವಸ್ಥೆಯನ್ನು ತೆಗೆದು ಹಾಕಿ ರೈತರಿಗೆ ಅನುಕೂಲ ಒದಗಿಸಬೇಕು. ರೈತರಿಗೆ ಮನೆ, ಹಟ್ಟಿ ಇನ್ನಿತರ ಅವಶ್ಯಕ ಕಟ್ಟಡ ನಿರ್ಮಾಣಕ್ಕೆ ಮರಳು, ಕೆಂಪುಕಲ್ಲು ದೊರಕಿಸಿ ಕೊಡಬೇಕು. ಅಲ್ಲದೆ ನದಿ ತೋಡುಗಳಿಂದ ಮರಳು ತೆಗೆಯಲು ಅಡ್ಡಿ ಪಡಿಸುತ್ತಿರುವ ಕಾರಣದಿಂದಾಗಿ ಪ್ರವಾಹ ಭೀತಿ, ಕೃಷಿ ತೋಟ ನಾಶಗಳಂತಹ ಸಮಸ್ಯೆಗಳು ಅನುಭವಿಸಬೇಕಾಗಿದೆ. ಮರಳು ತೆಗೆಯುವ ಎಲ್ಲಾ ಹಕ್ಕುಗಳನ್ನು ಗ್ರಾಮ ಪಂಚಾಯತ್‌ಗೆ ನೀಡಿ ಗಣಿ ಇಲಾಖೆಯ ಹಸ್ತಕ್ಷೇಪವನ್ನು ತಪ್ಪಿಸಬೇಕು. ಮರಳಿಗೆ ೩ ಯುನಿಟ್‌ಗೆ ಸಾಗಾಟ ವೆಚ್ಚ ಸೇರಿ ೧೧ ಸಾವಿರಕ್ಕಿಂತ ಕನಿಷ್ಠ ಬೆಲೆ ನಿಗದಿಪಡಿಸಬೇಕು.

Advertisement
Advertisement

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page