ಪುತ್ತೂರು ಶ್ರೀ ಶಾರದಾ ಭಜನಾ ಮಂದಿರದ ನವರಾತ್ರಿ ಉತ್ಸವ, ಪುತ್ತೂರು ಶಾರದೋತ್ಸವದ ಅಂತಿಮ ಹಂತದ ಪೂರ್ವತಯಾರಿಯ ಸಭೆ ಶಾರದಾ ಮಂದಿರದಲ್ಲಿ ಇಂದು ನಡೆಯಿತು.
ಸಭೆಯಲ್ಲಿ ಮುಖ್ಯವಾಗಿ ಈ ಬಾರಿಯ ಪುತ್ತೂರು ದಸರಾ ಶಿಸ್ತುಬದ್ಧವಾಗಿ ನಡೆಯಬೇಕು ಜೊತೆಗೆ ನಮ್ಮ ನಾಡಿನ ಸಂಸ್ಕೃತಿಯನ್ನು ಸಾರುವೆಡೆಗೆ ಹೆಚ್ಚು ಗಮನ ಕೊಡಬೇಕು ಎಂದು ನಿರ್ಧರಿಸಲಾಗಿದೆ.
ಇನ್ನು ಆರ್ಥಿಕ ಸಮಿತಿ, ಅಲಂಕಾರ ಸಮಿತಿ, ಆಹಾರ ಸಮಿತಿ, ಸ್ವಚ್ಛತಾ ಸಮಿತಿ, ವೇದಿಕೆ ಸಮಿತಿ, ಪ್ರಸಾದ ಸಿದ್ಧತಾ ಸಮಿತಿ ಹಾಗೂ ವಿವಿಧ ಜವಾಬ್ಧಾರಿಗಳ ಹಂಚಿಕೆ ಮತ್ತು ಪುತ್ತೂರು ದಸರಾ ಮೆರವಣಿಗೆಯ ಸಿದ್ಧತೆಗಳ ಬಗ್ಗೆ ಸೂಕ್ತ ಮಾರ್ಗದರ್ಶನದಲ್ಲಿ ಸಮಾಲೋಚನೆಯನ್ನು ನಡೆಸಲಾಯಿತು.
ಮಂದಿರದ ಅಧ್ಯಕ್ಷ ಕೆದಂಬಾಡಿಗುತ್ತು ಸೀತಾರಾಮ ರೈಗಳ ಅಧ್ಯಕ್ಷತೆಯಲ್ಲಿ ಈ ಸಭೆ ನಡೆಯಿತು.
ಈ ಸಂದರ್ಭದಲ್ಲಿ ಶೋಭಾಯಾತ್ರೆ ಸಂಚಾಲಕ ಕೃಷ್ಣ ಎಂ ಅಳಿಕೆ ಮತ್ತು ನವೀನ್ ಕುಲಾಲ್, ಭಜನಾ ತಂಡಗಳ ಸಂಘಟಕ ಪುರುಷೋತ್ತಮ ಕೋಲ್ಪೆ, ದೈಹಿಕ ಶಿಕ್ಷಣ ನಿರ್ದೇಶಕ ರಾಜೇಶ್ ರೈ ಎಸ್, ನಿವೃತ್ತ ಪೊಲೀಸ್ ಅಧಿಕಾರಿ ರಾಘರಾಮ ಹೆಗ್ಡೆ, ಕುಲಾಲ ಸಮಾಜ ಸೇವಾ ಸಂಘದ ಅಧ್ಯಕ್ಷ ಸೇಸಪ್ಪ ಕುಲಾಲ್ , ನರಿಮೊಗರು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಸುಧಾಕರ್ ಕುಲಾಲ್ ನಡುವಾಲ್, ಹಾಗೂ ಮಂದಿರದ ಪದಾಧಿಕಾರಿಗಳು, ಸದಸ್ಯರು, ಭಕ್ತಾದಿಗಳು ಉಪಸ್ಥಿತರಿದ್ದರು.
ಈ ಬಾರಿಯ ಶೋಭಾಯಾತ್ರೆಯಲ್ಲಿ ನಾಡಿನ ಸಂಸ್ಕೃತಿಯನ್ನು ಸಾರುವ ಜೊತೆಗೆ ಸುಡುಮದ್ದು, ಡಿಜೆ ಇಲ್ಲದಿರುವುದು ವಿಶೇಷ. ಅನೇಕ ಭಕ್ತರು ಈ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆಂದು ತಿಳಿದು ಬಂದಿದೆ.
ಧಾರ್ಮಿಕತೆ ಮತ್ತು ಸಂಸ್ಕೃತಿಗೆ ಹೆಚ್ಚು ಒತ್ತು ನೀಡಿರುವ ಸಮಿತಿ ಪುತ್ತೂರಿನಲ್ಲಿ ಹೊಸತನ ಸೃಷ್ಟಿಸುತ್ತಿದೆ ಎಂದರೆ ತಪ್ಪಾಗಲಾರದು.
ಪುತ್ತೂರು ದಸರಾದ ಪೂರ್ವಭಾವಿ ಸಭೆ! ಧಾರ್ಮಿಕತೆ ಮತ್ತು ನಾಡಿನ ಸಂಸ್ಕೃತಿಗೆ ಆದ್ಯತೆ!!
Share this article
Subscribe
By pressing the Subscribe button, you confirm that you have read our Privacy Policy.
Latest News

ಹೌತಿಗಳ ದಾಳಿಗೆ ಸೌದಿ ಅರೇಬಿಯಾ ಕಂಗಾಲು! ಸಂಧಾನಕ್ಕೆ ಪಾಕಿಸ್ತಾನದ ಮಧ್ಯಸ್ತಿಕೆ!!
October 29, 2026


ಇಂದಿನಿಂದ ಹಾಸನಾಂಬೆ ದರ್ಶನ! ಹಾಸನಕ್ಕೆ ತೆರಳುವವರು ತಪ್ಪದೇ ಈ ವರದಿ ಓದಿ!!
October 29, 2026



Featured Categories
More News

ಹೌತಿಗಳ ದಾಳಿಗೆ ಸೌದಿ ಅರೇಬಿಯಾ ಕಂಗಾಲು! ಸಂಧಾನಕ್ಕೆ ಪಾಕಿಸ್ತಾನದ ಮಧ್ಯಸ್ತಿಕೆ!!
October 29, 2026


ಇಂದಿನಿಂದ ಹಾಸನಾಂಬೆ ದರ್ಶನ! ಹಾಸನಕ್ಕೆ ತೆರಳುವವರು ತಪ್ಪದೇ ಈ ವರದಿ ಓದಿ!!
October 29, 2026







