ದಸರಾ ಕುರಿತ ರೀಲ್ಸ್‌ಗೆ ಬಹುಮಾನ ಗೆಲ್ಲುವ ಸವರ್ಣವಕಾಶ! ಮೈಸೂರು ದಸರಾದಲ್ಲಿ ಡಿ.ಕೆ. ಶಿವಕುಮಾರ್‌ ಘೋಷಣೆ!!

ಮೈಸೂರು: ದಸರಾ ಕಾರ್ಯಕ್ರಮಗಳ ಕುರಿತು ರೀಲ್ಸ್ ಮಾಡುವ ಕಂಟೆಂಟ್ ಕ್ರಿಯೇಟರ್‌ಗಳ ಪೈಕಿ 100 ಅತ್ಯುತ್ತಮ ರೀಲ್ಸ್‌ಗಳನ್ನು ಆಯ್ಕೆ ಮಾಡಿ ಸರ್ಕಾರದ ವತಿಯಿಂದ ಪ್ರಶಸ್ತಿ ನೀಡುವ ಯೋಜನೆ ಪ್ರಕಟವಾಗಿದೆ ಎಂದು ವರದಿಯಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದಸರಾ ಕಂಬಳ ಕಾರ್ಯಕ್ರಮದ ಸಂದರ್ಭದಲ್ಲಿ ಈ ಅವಕಾಶದ ಕುರಿತು ಘೋಷಿಸಿದ್ದಾರೆ. ಆದರೆ ಪ್ರಶಸ್ತಿಗಳ ವಿವರ, ನಗದು ಬಹುಮಾನದ ಮೊತ್ತ ಮತ್ತು ಸ್ಪರ್ಧೆಯ ಕೊನೆಯ ದಿನಾಂಕದ ಬಗ್ಗೆ ಇನ್ನೂ ಮಾಹಿತಿ ಸ್ಪಷ್ಟವಾಗಿ ತಿಳಿದುಬಂದಿಲ್ಲ ಎಂದು ಮೂಲಗಳು ಹೇಳಿವೆ.

Advertisement

ಮೈಸೂರು ದಸರಾ ಎಂದರೆ ಜಂಬೂಸವಾರಿ, ಅರಮನೆಯ ದೀಪಾಲಂಕಾರ, ಸಾಂಸ್ಕೃತಿಕ ಕಾರ್ಯಕ್ರಮಗಳು, ಡ್ರೋನ್ ಪ್ರದರ್ಶನ ಸೇರಿದಂತೆ ಹತ್ತಾರು ವಿಶೇಷ ಆಕರ್ಷಣೆಗಳು. ಈ ಸಂಭ್ರಮವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಕಂಟೆಂಟ್ ಕ್ರಿಯೇಟರ್‌ಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಅತ್ಯುತ್ತಮ ರೀಲ್ಸ್‌ಗಳನ್ನು ಗುರುತಿಸಿ ಪ್ರಶಸ್ತಿ ನೀಡುವ ಯೋಜನೆ ರೂಪಿಸಲಾಗಿದೆ. ದಸರಾ ಮಹೋತ್ಸವದ ವೇಳೆ ನೀವು ವೀಕ್ಷಿಸುವ ಕಾರ್ಯಕ್ರಮ, ಮನಸೆಳೆಯುವ ದೃಶ್ಯ ಅಥವಾ ಹಬ್ಬದ ವಿಶೇಷ ಕ್ಷಣಗಳನ್ನು ಸೃಜನಾತ್ಮಕವಾಗಿ ಚಿತ್ರೀಕರಿಸಿ ರೀಲ್ಸ್ ರೂಪದಲ್ಲಿ ಹಂಚಿಕೊಳ್ಳಬಹುದು.
ದಸರಾ ಕುರಿತು ರೀಲ್ಸ್ ಮಾಡುವವರು ಇನ್ಸ್ಟಾಗ್ರಾಮ್‌ನಲ್ಲಿ ತಮ್ಮ ವಿಡಿಯೋ ಪ್ರಕಟಿಸುವಾಗ ಮೈಸೂರು ದಸರಾ ಅಧಿಕೃತ ಖಾತೆಯನ್ನು ಟ್ಯಾಗ್ ಮಾಡಬೇಕು. ಅಧಿಕೃತ ದಸರಾ ವೆಬ್‌ಸೈಟ್‌ನಲ್ಲಿ ಇನ್ಸ್ಟಾಗ್ರಾಮ್‌ ಖಾತೆಯ ಹ್ಯಾಂಡಲ್ @mysoredasara_2026 ಎಂದು ಉಲ್ಲೇಖಿಸಲಾಗಿದೆ.
ಮೈಸೂರು ದಸರಾ ಕಾರ್ಯಕ್ರಮಗಳು ಅಥವಾ ಹಬ್ಬದ ವಿಶೇಷತೆಯನ್ನು ಆಧರಿಸಿ ಸೃಜನಾತ್ಮಕ ರೀಲ್ಸ್ ಸಿದ್ಧಪಡಿಸಿ.
ವಿಡಿಯೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಪ್ರಕಟಿಸಿ. ನಂತರ ಅಧಿಕೃತ ಖಾತೆ @mysoredasara_2026 ಅನ್ನು ಟ್ಯಾಗ್ ಮಾಡಿ. ಸ್ಪರ್ಧೆಯ ಹೆಚ್ಚುವರಿ ನಿಯಮಗಳು ಪ್ರಕಟವಾಗಿದ್ದರೆ ಅವುಗಳನ್ನು ಪರಿಶೀಲಿಸಿ.

Advertisement
Advertisement

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page