ಕೃಪಾ ಆಳ್ವ 6 ವರ್ಷ ಕಾಂಗ್ರೆಸ್‌ನಿಂದ ಉಚ್ಚಾಟನೆ! ಸ್ಟಿಂಗ್‌ ಆಪರೇಷನ್‌ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ!!

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಿಸಿಬಿ ಕ್ಲೀನ್‌ ಚಿಟ್‌ ನೀಡಿದ ಬೆನ್ನಲ್ಲೇ, ಹೈಪ್ರೊಫೆಲ್‌ ಸ್ಟಿಂಗ್‌ ಆಪರೇಷನ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಮಹಿಳಾ ನಾಯಕಿ ಹಾಗೂ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮಾಜಿ ಅಧ್ಯಕ್ಷೆ ಕೃಪಾ ಆಳ್ವ ಅವರನ್ನು ಕಾಂಗ್ರೆಸ್‌ ಪಕ್ಷದಿಂದ 6 ವರ್ಷಗಳ ಕಾಲ ಉಚ್ಚಾಟಿಸಿಲಾಗಿದೆ ಎಂದು ತಿಳಿದು ಬಂಇದೆ.

Advertisement

ಸ್ವಪಕ್ಷೀಯರ ಕೈವಾಡದ ಕುರಿತು ಸಚಿವ ಯತೀಂದ್ರ ಸಿದ್ದರಾಮಯ್ಯ ಹಾಗೂ ಸಿದ್ದರಾಮಯ್ಯನವರು ಕೃಪಾ ಆಳ್ವ ಅವರ ಹೆಸರು ಪ್ರಸ್ತಾಪಿಸಿದ್ದರು. ಪಕ್ಷವಿರೋಧಿ ಚಟುವಟಿಕೆ ಮತ್ತು ಕಾರಣ ಕೇಳಿ ನೋಟೀಸ್‌ಗೆ ಸೂಕ್ತ ಉತ್ತರ ನೀಡದ ಹಿನ್ನಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್‌ ಈ ಉಚ್ಚಾಟನಾ ಆದೇಶ ಹೊರಡಿಸಿದ್ದಾರೆ.

Advertisement
Advertisement

ಅಕ್ಟೋಬರಗಗ 24ರಂದು ಬೆಂಗಳೂರಿನ CEN ಪೊಲೀಸರ ಎದುರು ವಿಚಾರಣೆಗೆ ಹಾಜರಾಗಿದ್ದ ಕೃಪಾ ಆಳ್ವ, ಇದೀಗ ಏಕಾಏಕಿ ದೇಶ ತೊರೆದಿದ್ದಾರೆ ಎನ್ನಲಾಗಿದೆ. 1992ರಲ್ಲಿ ಹತ್ಯೆಗೀಡಾದ ಮಂಗಳೂರಿನ ಯುವ ನಾಯಕ ಅಮರ್‌ ಆಳ್ವ ಅವರ ಪತ್ನಿಯಾಗಿರುವ ಇವರು, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ ಕಾರ್ಯದರ್ಶಿಯಾಗಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ 2015ರಲ್ಲಿ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆಯಾಗಿ ಕರ್ತವ್ಯ ನಿರ್ವಹಿಸಿದ್ದರು.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page