ದೃಶ್ಯಂ 3 ವಿಶ್ವದಾದ್ಯಂತ ₹383.60 ಕೋಟಿ ಗಳಿಕೆ!! ಹೊಸ ದಾಖಲೆಯತ್ತ ಮುನ್ನುಗ್ಗುತ್ತಿದೆ ಅಜಯ್‌ ದೇವಗನ್‌ ಸಿನೆಮಾ!!

ಬಾಲಿವುಡ್ ನಟ ಅಜಯ್ ದೇವಗನ್ ಅಭಿನಯದ ಬಹುನಿರೀಕ್ಷಿತ ‘ದೃಶ್ಯಂ –3’ ಸಿನಿಮಾ ಬಿಡುಗಡೆಗೊಂಡ ಒಂದು ವಾರದಲ್ಲೇ ದೇಶದಾದ್ಯಂತ ₹245 ಕೋಟಿ ಗಳಿಸಿದೆ. ಈ ಮೂಲಕ ‘ದೃಶ್ಯಂ 2’ ಹಾಗೂ ‘ದೃಶ್ಯಂ’ ಸಿನಿಮಾಗಳ ಗಳಿಕೆಯನ್ನು ಮೀರಿಸಿ ದಾಖಲೆ ಬರೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.

Advertisement

‘ದೃಶ್ಯಂ 3’ ಸಿನಿಮಾ ಬಿಡುಗಡೆಯಾದ 7ನೇ ದಿನ 15,758 ಪ್ರದರ್ಶನಗಳನ್ನು ಕಂಡು ಭಾರತದಲ್ಲಿ ₹13 ಕೋಟಿ ಸಂಗ್ರಹಿಸಿದೆ. ವಿದೇಶದಲ್ಲಿ ₹4 ಕೋಟಿ ಗಳಿಸಿದ್ದು, ವಿದೇಶದಲ್ಲಿ ಈವರೆಗೆ ಒಟ್ಟು ₹89 ಕೋಟಿ ಗಳಿಕೆ ಕಂಡಿದೆ. ಒಟ್ಟಾರೆಯಾಗಿ ಈ ಸಿನಿಮಾ ವಿಶ್ವದಾದ್ಯಂತ ₹383.60 ಕೋಟಿ ಗಳಿಸಿದೆ. ಬಿಡುಗಡೆಗೊಂಡ ಮೊದಲ ದಿನವೇ ವಿಶ್ವದಾದ್ಯಂತ ₹95.10 ಕೋಟಿ ಗಳಿಸಿತ್ತು. ಭಾರತವೊಂದರಲ್ಲೇ ₹66.75 ಕೋಟಿ ಸಂಗ್ರಹಿಸಿತ್ತು. ಈ ಮೂಲಕ ಅಜಯ್ ದೇವಗನ್ ಅವರ ವೃತ್ತಿಜೀ ವನದಲ್ಲೇ ಮೊದಲ ದಿನ ಅತಿ ಹೆಚ್ಚು ಗಳಿಸಿದ ಸಿನಿಮಾ ಎಂಬ ಹೆಗ್ಗಳಿಕೆಗೆ ‘ದೃಶ್ಯಂ –3’ ಪಾತ್ರವಾಗಿದೆ ಎಂದು ಜಾಲತಾಣ ಮೂಲಗಳಲ್ಲಿ ವರದಿಯಾಗಿದೆ.

Advertisement

ಇತ್ತೀಚೆಗೆ, ತರುಣ್ ದಾಸ್ ಅವರು ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಸಿನಿಮಾದ ಪೋಸ್ಟರ್ ಹಂಚಿಕೊಂಡು ಹೊಗಳಿಕೆಯ ಮಾತುಗಳನ್ನಾಡಿದ್ದರು. ‘ದೃಶ್ಯಂ ‘ ಸರಣಿಯಲ್ಲಿ ‘ದೃಶ್ಯಂ 3’ ಅತ್ಯಂತ ಹೆಚ್ಚು ಗಳಿಸಿದ ಸಿನಿಮಾವಾಗಲಿದೆ. ಇದರ ಜತೆಗೆ ಅಜಯ್ ದೇವಗನ್ ಅವರ ವೃತ್ತಿಜೀವನದಲ್ಲಿ ಅತಿ ಹೆಚ್ಚು ಗಳಿಸಿದ ಈ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಅಜಯ್ ದೇವಗನ್ ಜತೆಗೆ ಜೈ ದೀಪ್ ಅಹ್ಲಾವತ್, ಟಬು, ಶ್ರಿಯಾಸರನ್, ರಜತ್ ಕಪೂರ್, ಪ್ರಕಾಶ್ ರಾಜ್ ಹಾಗೂ ಇಶಿತಾ ದತ್ತಾ ನಟಿಸಿದ್ದಾರೆ.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page