ಬಿಡುಗಡೆಗೂ ಮುನ್ನವೇ ರಾಕಾ ಸಿನೆಮಾ ವಿಶ್ವದಾಖಲೆ! ಸ್ಟಾರ್‌ ಡೈರೆಕ್ಟರ್‌ ಅಟ್ಲೀ ಹಾಗೂ ಅಲ್ಲು ಅರ್ಜುನ್‌ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರೋ ಸಿನೆಮಾ!

ಸ್ಟಾರ್‌ ಡೈರೆಕ್ಟರ್‌ ಅಟ್ಲೀ ಹಾಗೂ ಅಲ್ಲು ಅರ್ಜುನ್‌ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ರಾಕಾ ಸಿನಿಮಾ ಬಿಡುಗಡೆಗೂ ಮುನ್ನವೇ ಭಾರೀ ಸದ್ದು ಮಾಡುತ್ತಿದೆ. ಅಂತಿಮ ಹಂತದಲ್ಲಿರುವ ರಾಕಾ ಸಿನಿಮಾ ಗ್ಲೋಬಲ್ ಮಟ್ಟದಲ್ಲಿ ಸಾಧನೆ ಮಾಡಿದೆ. ಈ ಸಿನಿಮಾದ ಹಾಡೊಂದಕ್ಕೆ ಗಿನ್ನೆಸ್‌ ವಿಶ್ವ ದಾಖಲೆಯ ಗರಿ ಸಿಕ್ಕಿದೆ. ಸನ್‌ ಪಿಕ್ಚರ್ಸ್‌ ಸಂಸ್ಥೆಯ ಕಲಾನಿಧಿ ಮಾರನ್‌ ಅವರು ನಿರ್ಮಿಸುತ್ತಿರುವ ಈ ಬಹುನಿರೀಕ್ಷಿತ ಪ್ಯಾನ್‌ ಇಂಡಿಯಾ ಸಿನಿಮಾ, ತನ್ನ ತಾಂತ್ರಿಕ ಶ್ರೇಷ್ಠತೆಯಿಂದ ಜಾಗತಿಕ ಗಮನ ಸೆಳೆದಿದೆ.
ನೈಜ ಸಮಯದಲ್ಲಿ ಏಕಕಾಲಕ್ಕೆ ಗರಿಷ್ಠ ಸಂಖ್ಯೆಯ ಕಲಾವಿದರ ಮೋಷನ್‌-ಕ್ಯಾಪ್ಚರ್‌ ಎಂಬ ವಿಭಾಗದಲ್ಲಿ ಈ ಐತಿಹಾಸಿಕ ಸಾಧನೆ ಮೂಡಿಬಂದಿದೆ. 2026ರ ಫೆಬ್ರವರಿಯಲ್ಲಿ ನಡೆದ ಪ್ರಕ್ರಿಯೆಯಲ್ಲಿ, ಒಂದೇ ಸೆಷನ್‌ನಲ್ಲಿ ಒಟ್ಟು 37 ಕಲಾವಿದರನ್ನ ರಿಯಲ್‌-ಟೈಮ್‌ನಲ್ಲಿ ಸೆರೆಹಿಡಿಯಲಾಗಿತ್ತು. ನಾಲ್ಕು ವರ್ಷದ ಮಗುವಿನಿಂದ ಹಿಡಿದು 70 ವರ್ಷದ ಹಿರಿಯ ವೃದ್ಧರವರೆಗಿನ ಕಲಾವಿದರು ಇದರಲ್ಲಿ ಭಾಗವಹಿಸಿದ್ದಾರೆ. ಒಂದೇ ಕ್ಯಾಪ್ಚರ್‌ ವ್ಯಾಪ್ತಿಯಲ್ಲಿ ಪ್ರತಿಯೊಬ್ಬರ ಮುಖಭಾವ, ದೈಹಿಕ ಭಾಷೆ ಹಾಗೂ ಅಭಿನಯದ ಸೂಕ್ಷ್ಮವಿವರಗಳನ್ನು ನೈಜವಾಗಿ ಸೆರೆಹಿಡಿಯುವುದೇ ಕಷ್ಟದ ಕೆಲಸವಾಗಿತ್ತು.‌

Advertisement

ಈ ಸಾಹಸಕ್ಕಾಗಿ ಸಿನಿಮಾದ ವಿಎಫ್‌ಎಕ್ಸ್‌ ತಂಡವು ವಿಶೇಷ ವರ್ಕ್‌ಫ್ಲೋ ಮತ್ತು ಮೋಷನ್‌-ಕ್ಯಾಪ್ಚರ್‌ ಪೈಪ್‌ಲೈನ್‌ ಸಿದ್ಧಪಡಿಸಿತ್ತು. ಬರೋಬ್ಬರಿ 92 ಆಪ್ಟಿಕಲ್‌ ಮೋಷನ್‌-ಕ್ಯಾಪ್ಚರ್‌ ಕ್ಯಾಮೆರಾಗಳು, ನಿಖರ ನೆಟ್‌ವರ್ಕಿಂಗ್‌, ಅನ್‌ರಿಯಲ್‌ ಎಂಜಿನ್‌ನ ರಿಯಲ್‌-ಟೈಮ್‌ ದೃಶ್ಯೀಕರಣ, ವಿಟ್‌ನೆಸ್‌ ಕ್ಯಾಮೆರಾಗಳು ಹಾಗೂ ಫೇಶಿಯಲ್‌ ಕ್ಯಾಪ್ಚರ್‌ ಸೇರಿದಂತೆ ಅಂತರರಾಷ್ಟ್ರೀಯ ಮಟ್ಟದ ಅತ್ಯಾಧುನಿಕ ತಾಂತ್ರಿಕ ವ್ಯವಸ್ಥೆಯನ್ನ ಸೆಟ್‌ನಲ್ಲಿ ರೂಪಿಸಲಾಗಿತ್ತು.
2026ರ ಸೆಪ್ಟೆಂಬರ್‌ 15ರಂದು ʼಗಿನ್ನೆಸ್‌ ವಿಶ್ವ ದಾಖಲೆʼಯ ಹಿರಿಯ ತೀರ್ಪುಗಾರರಾದ ಸ್ವಪ್ನಿಲ್‌ ದಂಗ್ರಿಕರ್‌ ಅವರು ಈ ಸಾಧನೆಯನ್ನ ಅಧಿಕೃತವಾಗಿ ದೃಡೀಕರಿಸಿ, ಹೈದರಾಬಾದ್‌ನಲ್ಲಿ ನಡೆದ ಸಮಾರಂಭದಲ್ಲಿ ನಟ ಅಲ್ಲು ಅರ್ಜುನ್‌ ಹಾಗೂ ನಿರ್ದೇಶಕ ಅಟ್ಲಿ ಅವರಿಗೆ ಪ್ರಮಾಣಪತ್ರವನ್ನ ಹಸ್ತಾಂತರಿಸಿದರು.

Advertisement
Advertisement

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page