ಕಲುಷಿತ ನೀರಿನಿಂದ ಬ್ಲೂ ಬೇಬಿ ಸಿಂಡ್ರೋಮ್ ಕಾಯಿಲೆ! ನವಜಾತ ಶಿಶುಗಳಿಗೆ ಮಾರಕವಾಗುತ್ತಿದೆ ಈ ರೋಗ!! ಕರ್ನಾಟಕ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಸ್ಫೊಟಕ ಮಾಹಿತಿ!!

ಬೆಂಗಳೂರು: ರಾಜ್ಯದಲ್ಲಿ ಹಿಂದೆಂದೂ ಕಾಣದ ಬರಗಾಲದಿಂದ ಜಲ ಕಂಟಕ ಒಂದಡೆಯಾದರೆ, ಮತ್ತೂಂದಡೆ ವಿಷಕಾರಿ ಮತ್ತು ಕಲುಷಿತ ನೀರು ರಾಜ್ಯವನ್ನು ಬಾಧಿಸುತ್ತಿದೆ. ಕುಡಿಯುವ ನೀರಿನಲ್ಲಿ ಫ್ಲೋರೈಡ್‌ ಮತ್ತು ನೈಟ್ರೇಟ್ ಪ್ರಮಾಣ ಅಪಾಯಕಾರಿ ಮಟ್ಟದಲ್ಲಿ ಪತ್ತೆಯಾಗಿದ್ದು, ಗ್ರಾಮೀಣ ಭಾಗದಲ್ಲಿ ಇದರ ಸಮಸ್ಯೆ ಹೆಚ್ಚಾಗಿದೆ.
ಗ್ರಾಮೀಣಾಭಿವೃದ್ಧಿ ಇಲಾಖೆಯ ಮಾಹಿತಿ ಪ್ರಕಾರ ರಾಜ್ಯದ 31 ಜಿಲ್ಲೆಗಳಲ್ಲಿ 2025-26ನೇ ಸಾಲಿನಲ್ಲಿ ಒಟ್ಟು 2.41 ಲಕ್ಷ ನೀರಿನ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಅದರಲ್ಲಿ 3 ಸಾವಿರಕ್ಕೂ ಅಧಿಕ ಗ್ರಾಮಗಳ ನೀರಿನ ಮಾದರಿಗಳಲ್ಲಿ ಫ್ಲೋರೈಡ್ ಮತ್ತು ನೈಟ್ರೇಟ್ ಅಂಶ ನಿಗದಿತ ಮಿತಿಗಿಂತ ಹೆಚ್ಚಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಶುದ್ಧ ಕುಡಿವ ನೀರಿನ ಘಟಕಗಳ ನೀರು ಬಳಕೆ ಕುರಿತು ಜಾಗೃತಿ ಮೂಡಿಸುವುದರ ಜತೆಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಅನುಷ್ಠಾನಕ್ಕೆ ಸರ್ಕಾರ ಆದ್ಯತೆ ನೀಡುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

Advertisement

ಕೇಂದ್ರೀಯ ಅಂತರ್ಜಲ ಮಂಡಳಿಯಿಂದ ಅಂತರ್ಜಲ ಮಟ್ಟದ ಏರಿಳಿತವನ್ನು ದಾಖಲಿಸಲು ರಾಜ್ಯಾದ್ಯಂತ 971 ಕೊಳವೆಬಾವಿ, 897 ತೆರೆದ ಬಾವಿಗಳ ನೀರಿನ ಮಾದರಿಗಳ ಪರೀಕ್ಷೆಗಳನ್ನು ರಾಜ್ಯದ 32 ಜಿಲ್ಲಾ ಮಟ್ಟದ ಹಾಗೂ 47 ತಾಲೂಕು ಮಟ್ಟದ ಪ್ರಯೋಗಾಲಯಗಳಲ್ಲಿ ಪರೀಕ್ಷಿಸಲಾಗಿದೆ. ಅದರಂತೆ 2025-26ನೇ ಸಾಲಿನಲ್ಲಿ ಒಟ್ಟು 2,41,471 ನೀರಿನ ಮಾದರಿಗಳ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ 1,122 ಗ್ರಾಮಗಳ ನೀರಿನ ಮಾದರಿಗಳಲ್ಲಿ ಫ್ಲೋರೈಡ್, 1,900 ಗ್ರಾಮಗಳ ನೀರಿನ ಮಾದರಿಗಳಲ್ಲಿ ನೈಟ್ರೇಟ್ ಅಂಶ ನಿಗದಿತ ಮಿತಿಗಿಂತ ಹೆಚ್ಚಿದೆ.
ನೀರಿನ ಮೂಲಗಳ ಸುತ್ತಲಿನ ಮಲೀನತೆಯಿಂದ ಹಾಗೂ ಕಲುಷಿತ ನೀರು ಮಳೆಯ ನೀರಿನೊಂದಿಗೆ ಸೇರುವುದರಿಂದ, ಕೃಷಿ ಚಟುವಟಿಕೆಗಳಿಗೆ ಹೆಚ್ಚು ರಾಸಾಯನಿಕ ಗೊಬ್ಬರಗಳ ಬಳಕೆ ಇತ್ಯಾದಿ ಕಾರಣಗಳಿಗೆ ನೀರಿನಲ್ಲಿ ನೈಟ್ರೇಟ್ ಅಂಶ ಹೆಚ್ಚಾಗುತ್ತದೆ. ಈ ಕಲುಷಿತ ನೀರು ನಿರಂತರವಾಗಿ ಕುಡಿಯುವುದರಿಂದ ನವಜಾತ ಶಿಶುಗಳಲ್ಲಿ ಆಮ್ಲಜನಕದ ಕೊರತೆ ಉಂಟಾಗಿ “ಬ್ಲೂ ಬೇಬಿ ಸಿಂಡ್ರೋಮ್’ ಕಾಯಿಲೆ ಬರುತ್ತದೆ.
ಗರ್ಭಿಣಿಯರಲ್ಲಿ ಗರ್ಭಪಾತ ಹಾಗೂ ಶಿಶು ವೈಕಲ್ಯತೆ ಮತ್ತಿತರ ಸಮಸ್ಯೆಗಳು ಕಂಡು ಬರುತ್ತವೆ. ಫ್ಲೋರೈಡ್‌ ಅಂಶವು ಜಲಮೂಲಗಳಲ್ಲಿ ನೈಸರ್ಗಿಕವಾಗಿದ್ದು, ಕರ್ನಾಟಕದ ದಕ್ಷಿಣ ಭಾಗದಲ್ಲಿ ಹೆಚ್ಚಾಗಿ ಇದು ಕಂಡು ಬರುತ್ತದೆ. ಈ ಭಾಗದಲ್ಲಿ ಕುಡಿಯಲು ಮತ್ತು ಕೃಷಿಗೆ ಅಂತರ್ಜಲದ ಮೇಲೆ ಹೆಚ್ಚು ಅವಲಂಬನೆಯಾಗಿರುವುದರಿಂದ ಅಂತರ್ಜಲ ಮಟ್ಟ ಕುಸಿತಕ್ಕೆ ಕಾರಣವಾಗಿದ್ದು, ಇದು ಅಂತರ್ಜಲ ಮಟ್ಟದಲ್ಲಿ ಫ್ಲೋರೈಡ್ ಅಂಶ ನಿಗದಿತ ಮಟ್ಟಕ್ಕಿಂತ ಹೆಚ್ಚಾಗಲು ಕಾರಣವಾಗಿದೆ
ಎಂದು ವರದಿಗಳು ತಿಳಿಸಿವೆ.

Advertisement

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page