ರಾಕ್ಷಸರ ರಾಜ ರಾವಣನ ಪ್ರತಿಕೃತಿಯನ್ನು ದಸರಾ ಹಬ್ಬದಲ್ಲಿ ದಹಿಸಲಾಗುತ್ತಿದೆ. ಇದು ಈಗಿನ ಪದ್ಧತಿ ಅಲ್ಲ, ಶತಮಾನಗಳಷ್ಟು ಹಳೆಯ ಸಂಪ್ರದಾಯವಾಗಿದೆ. ವ್ಯಕ್ತಿಯೊಬ್ಬರು ಛತ್ತೀಸ್ಗಢ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಈ ಸಂಪ್ರದಾಯವನ್ನು ಪ್ರಶ್ನಿಸಿ ದೂರು ನೀಡಿರುವ ಸಂಗತಿ ಇದೀಗ ಬೆಳಕಿದೆ ಬಂದಿದೆ.
ರಾವಣನ ಪ್ರತಿಕೃತಿಗೆ ಪ್ರತೀ ವರ್ಷವು ಕೆಟ್ಟದ್ದನ್ನು ತೊಳೆದು ಹಾಕೋಣ ಎಂಬರ್ಥದಲ್ಲಿ ಬೆಂಕಿ ಹಚ್ಚಿ ದಹಿಸಲಾಗುತ್ತದೆ. ಮಹಾಭಾರತದಲ್ಲಿ ಬರುವ ದುರ್ಯೋಧನನು ರಾವಣನಿಗೆ ಹೋಲಿಸಿದರೆ ಇನ್ನೂ ಕೆಟ್ಟ ಕೆಲಸಗಳನ್ನು ಮಾಡಿದ್ದಾನೆ. ರಾವಣನಿಗಿಂತ ಘೋರ ಹಾಗೂ ಗಂಭೀರ ಪಾಪಗಳನ್ನು ಮಾಡಿದ್ದಾನೆ. ಆದರೆ ರಾವಣನ ಪ್ರತಿಕೃತಿಯನ್ನೇ ಏಕೆ ದಹಿಸಬೇಕು? ಇದು ಮಾನವ ಹಕ್ಕುಗಳ ಉಲ್ಲಂಘನೆ ಎಂದು ವ್ಯಕ್ತಿಯೊಬ್ಬರು ದೂರಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಮಾನವ ಹಕ್ಕುಗಳ ಆಯೋಗ ಈ ಅರ್ಜಿಯನ್ನು ತಿರಸ್ಕರಿದೆ. ಮಾನವ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳನ್ನು ನಿರ್ವಹಿಸುತ್ತದೆಯೇ ಹೊರತು ಪೌರಾಣಿಕ ಸಂದಿಗ್ಧತೆಗಳನ್ನಲ್ಲ. ರಾವಣನು ಮನುಷ್ಯನ ವರ್ಗಕ್ಕೆ ಸೇರುವುದಿಲ್ಲ. ಪರಿಣಾಮವಾಗಿ, ಅವನ ಪ್ರತಿಕೃತಿಯನ್ನು ಸುಡುವುದಕ್ಕೆ ಸಂಬಂಧಿಸಿದ ವಿಷಯಗಳು ಮಾನವ ಹಕ್ಕುಗಳ ಆಯೋಗದ ಕಾನೂನು ವ್ಯಾಪ್ತಿಯ ಸಂಪೂರ್ಣ ಹೊರಗೆ ಬರುತ್ತವೆ ಎಂದು ದೂರುದಾರರಿಗೆ ಮನವರಿಕೆ ಮಾಡಿಕೊಡಲಾಗಿದೆ ಎಂದು ತಿಳಿದು ಬಂದಿದೆ.











