ಪಶ್ಚಿಮ ಬಂಗಾಲದ ಹೂಗ್ಲಿ ಜಿಲ್ಲೆಯಲ್ಲಿ ಬಿರಿಯಾನಿ ಹೊಟೇಲ್ವೊಂದು ದುರ್ಗಾಮಾತೆಯ ಚಿತ್ರದ ಜತೆ ಮಾಂಸಾಹಾರದ ಬಿಲ್ ಬೋರ್ಡ್ ಹಾಕಿರುವುದು ಸ್ಥಳಿಯರ ಆಕ್ಷೇಪಕ್ಕೆ ಕಾರಣವಾಗಿದೆ.
ಧಾರ್ಮಿಕ ಭಾವನೆಗಳಿಗೆ ಧಕ್ಕೆ ಯಾಗಿದ್ದು ತೆರಗೊಳಿಸುವಂತೆ ಸ್ಥಳೀಯ ಬಿಜೆಪಿ ಶಾಸಕ ಆಗ್ರಹಿಸಿದ್ದಾರೆ. ಒಂದು ಪ್ಲೇಟ್ ಚಿಕನ್ ಬಿರಿಯಾನಿ ಜೊತೆಗೆ ದುರ್ಗಾಮಾತೆಯ ಚಿತ್ರವನ್ನು ಹಾಕಿ ಬಂಗಾಲಿ ಭಾಷೆಯಲ್ಲಿ ʼದೇವಿಯ ಮೇಲಿನ ಭಕ್ತಿ… ರಾಕ್ಸ್ಟಾರ್ ಶೈಲಿʼ ಎಂದು ಟ್ಯಾಗ್ ಲೈನ್ ಬರೆಯಲಾಗಿದೆ.











