ಭಾರತದ ನಿಜವಾದ ಬಾಸ್‌ ಅಂಬಾನಿ ಎಂದ ಎಲಾನ್ ಮಸ್ಕ್! ಸ್ಟಾರ್‌ಲಿಂಕ್‌ ಇಂಟರ್‌ನೆಟ್‌ ಕುರಿತು ಮಸ್ಕ್‌ ಪ್ರತಿಕ್ರಿಯೆ!!

ದೇಶದ ಉದ್ಯಮಿಗಳು ಭಾರತದಲ್ಲಿ ಸ್ಟಾರ್‌ಲಿಂಕ್ ಉಪಗ್ರಹ ಅಂತರ್ಜಾಲ ಸೇವೆ ಆರಂಭಿಸುವ ಪ್ರಯತ್ನಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ಪರೋಕ್ಷವಾಗಿ ಟೀಕಿಸಿದ್ದ ಟೆಸ್ಲಾ ಮತ್ತು ಸ್ಪೇಸ್ಎಕ್ಸ್ ಮುಖ್ಯಸ್ಥ ಎಲಾನ್ ಮಸ್ಕ್, ಇದೀಗ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ವಿರುದ್ಧ ನೇರ ಟೀಕಾ ಪ್ರಹಾರ ನಡೆಸಿದ್ದಾರೆ.
‘ಗೌರವಾನ್ವಿತ ಪ್ರಧಾನಮಂತ್ರಿ’ ಎಂದು ಅಂಬಾನಿಯವರನ್ನು ವ್ಯಂಗ್ಯವಾಗಿ ಸಂಬೋಧಿಸಿರುವ ಮಸ್ಕ್, ಅಂಬಾನಿ ಭಾರತದಲ್ಲಿ ತಮ್ಮ ಸಂಸ್ಥೆಯ ಸ್ಟಾರ್‌ಲಿಂಕ್ ಸೇವೆಗೆ ಸ್ಪರ್ಧಿಸಲು ಅವಕಾಶ ನೀಡುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ. ಮಸ್ಕ್ ತಮ್ಮ ಇತ್ತೀಚಿನ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ‘ಭಾರತದ ನಿಜವಾದ ಬಾಸ್ ನೀವೇ ಎಂಬುದನ್ನು ಅರಿತು ಕೊಳ್ಳಲು ವಿಫಲನಾದ ನನ್ನನ್ನು ದಯವಿಟ್ಟು ಕ್ಷಮಿಸಿ’ ಎಂದು ಹೇಳಿದ್ದಾರೆ.

Advertisement

ಭಾರತದ ಜನರನ್ನು ಏಕಸ್ವಾಮ್ಯದ ಮೂಲಕ ಶೋಷಿಸುವುದನ್ನು ಮುಂದುವರಿಸುವುದೇ ಅಂಬಾ ನಿಯವರ ಆದ್ಯತೆಯಾಗಿದೆ ಎಂದು ಮಸ್ಕ್ ಆರೋಪಿಸಿದ್ದಾರೆ. ಇದೇ ವೇಳೆ, ದೇಶದ ಅಂತರ್ಜಾಲ ಸಂಪರ್ಕ ಸೌಲಭ್ಯದಿಂದ ವಂಚಿತವಾಗಿರುವ ಪ್ರದೇಶಗಳಿಗೆ ಸ್ಟಾರ್‌ಲಿಂಕ್ ಸೇವೆ ವಿಸ್ತರಿಸುವುದರಿಂದ ಶಿಕ್ಷಣಕ್ಕೆ ಉತ್ತೇಜನ ದೊರೆಯಲಿದೆ ಮತ್ತು ಸಣ್ಣ ಉದ್ಯಮಗಳು ತಮ್ಮ ಉತ್ಪನ್ನಗಳನ್ನು ಜಾಗತಿಕ ಮಾರುಕಟ್ಟೆಗೆ ತಲುಪಿಸಲು ಸಾಧ್ಯವಾಗಲಿದೆ ಎಂದು ಪ್ರತಿಪಾದಿಸಿದ್ದಾರೆ. ಮಸ್ಕ್ ಅವರು ‘ಭಾರತ ಸೇರಿದಂತೆ ಎಲ್ಲ ದೇಶಗಳಲ್ಲಿಯೂ ಅಂತರ್ಜಾಲ ಸಂಪರ್ಕ ವಿಲ್ಲದ ಹಲವು ಪ್ರದೇಶಗಳಿವೆ. ಇದರಿಂದ ಮಕ್ಕಳಿಗೆ ಶಿಕ್ಷಣ ಪಡೆಯುವ ಅವಕಾಶ ತಪ್ಪುತ್ತಿದೆ. ಸಣ್ಣ ಉದ್ಯಮಗಳು ತಮ್ಮ ಉತ್ಪನ್ನಗಳನ್ನು ಜಾಗತಿಕ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಅವಕಾಶದಿಂದಲೂ ವಂಚಿತವಾಗುತ್ತಿವೆ. ಸ್ಟಾರ್‌ಲಿಂಕ್ ಸೇವೆ ಇಂತಹ ಜನರ ಜೀವನವನ್ನು ಉತ್ತಮಗೊಳಿಸಲಿದೆ’ ಎಂದು ಹೇಳಿದ್ದಾರೆಂದು ಜಾಲತಾಣಗಳು ತಿಳಿಸಿವೆ.

Advertisement

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page