ಪುತ್ತೂರಿನಲ್ಲಿ ಮನೆಗೆ ಬೆಂಕಿ! ₹30 ಸಾವಿರ ಮೌಲ್ಯದ ವಸ್ತುಗಳು ಕಳವು! 10 ಲಕ್ಷ ರೂ. ನಷ್ಟ!! ಕಳವು ಮಾಡಲೆಂದೇ ಮನೆಗೆ ಬೆಂಕಿ ಹಚ್ಚಿದರೇ ದುಷ್ಕರ್ಮಿಗಳು??

ಪುತ್ತೂರು: ಕಾಸರಗೋಡಿನಲ್ಲಿ ವಾಸವಿರುವ ರಶ್ಮಿ ಬಿ. ಭಟ್ ಅವರಿಗೆ ಸೇರಿದ ಕಸಬಾ ಗ್ರಾಮದಮುಖ್ಯ ರಸ್ತೆಯಲ್ಲಿರುವ ಖಾಲಿ ಮನೆಯೊಂದಕ್ಕೆ ಬೆಂಕಿ ತಗುಲಿ ಸುಮಾರು ₹10 ಲಕ್ಷ ನಷ್ಟ ಸಂಭವಿಸಿರುವ ಘಟನೆ ಬೆಳಕಿಗೆ ಬಂದಿದೆ. ಇದೇ ವೇಳೆ ಮನೆಯಲ್ಲಿದ್ದ ಸುಮಾರು ₹30 ಸಾವಿರ ಮೌಲ್ಯದ ವಸ್ತುಗಳು ಕಳವಾಗಿರುವ ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ ಎಂದು ತಿಳಿದು ಬಂದಿದೆ.

Advertisement

ಮನೆಯ ಮಾಲಕಿ ರಶ್ಮಿ ಬಿ. ಭಟ್‌ ಅವರು ಸೆ. 15ರಂದು ಕೊನೆಯದಾಗಿ ಮನೆಯ ಭೇಟಿ ನೀಡಿದ್ದರು. ಅ. 11ರಂದು ಬೆಳಗ್ಗೆ ಅವರ ದೊಡ್ಡಪ್ಪನ ಮಗ ಎನ್‌.ಟಿ. ಕಿಶೋರ್‌ ಕರೆ ಮಾಡಿ ಮನೆಗೆ ಬೆಂಕಿ ಬಿದ್ದಿರುವುದಾಗಿ ಮಾಹಿತಿ ನೀಡಿದ್ದರು. ತಕ್ಷಣ ಪತಿಯೊಂದಿಗೆ ಆಗಮಿಸಿ ಪರಿಶೀಲಿಸಿದಾಗ, ಮನೆಯ ಹಿಂಭಾಗದಲ್ಲಿದ್ದ ಎರಡು ಬೆಡ್ರೂಮ್‌ಗಳು, ಎರಡು ಬಾತ್ರೂಮ್‌ಗಳು ಹಾಗೂ ತೆರೆದ ಹಾಲ್‌ನಂತಿರುವ ಛಾವಣಿ ಬೆಂಕಿಯಿಂದ ಸುಟ್ಟು ಕರಕಲಾಗಿರುವುದು ಕಂಡುಬಂದಿದೆ.
ಇದಲ್ಲದೆ, ಮನೆಯ ಹಿಂಭಾಗದ ಅಡುಗೆಮನೆಯ ಬಾಗಿಲಿನ ಕೆಳಭಾಗದ ಹಲಗೆಯನ್ನು ತೆಗೆದಿರುವುದು, ವಿದ್ಯುತ್ ಸ್ವಿಚ್‌ಬೋರ್ಡ್‌ಳನ್ನು ಜಖಂಗೊಳಿಸಿ ವೈರ್‌ಗಳನ್ನು ಕೊಂಡೊಯ್ದಿರುವುದು ಗಮನಕ್ಕೆ ಬಂದಿದೆ. ಐದು ಸೀಲಿಂಗ್ ಫ್ಯಾನ್‌ಗಳು, ಎರಡುದೊಡ್ಡ ದೀಪಗಳು, ಆರತಿ ಸಾಮಗ್ರಿಗಳು ಹಾಗೂ ಎರಡು ಹಿತ್ತಾಳೆಯ ತಟ್ಟೆಗಳು ಕಾಣೆಯಾಗಿವೆ. ದುರಸ್ತಿಗಾಗಿ ಮನೆಯಲ್ಲಿಟ್ಟಿದ್ದ ಫ್ರಿಡ್ಜ್ ಮತ್ತು ಮೈಕ್ರೋವೇವ್‌ಗಳನ್ನು ಕಳಚಿ ಪರಿಶೀಲಿಸಿರುವ ಗುರುತುಗಳೂ ಪತ್ತೆಯಾಗಿವೆ.

Advertisement

ಮನೆಗೆ ನುಗ್ಗಿ ಕಳವುಮಾಡಿದವರನ್ನು ಪತ್ತೆಹಚ್ಚಿ, ಕಳವಾದ ವಸ್ತುಗಳನ್ನು ವಶಪಡಿಸಿಕೊಳ್ಳಬೇಕು. ಅಲ್ಲದೆ, ಮನೆಗೆ ಬೆಂಕಿ ತಗುಲಿದ ಬಗ್ಗೆ ಸಮಗ್ರ ತನಿಖೆ ನಡೆಸಿಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ರಶ್ಮಿ ಬಿ. ಭಟ್ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page