ಮತ್ತೆ ಒಂದಾದ ಪೃಥ್ವಿ ಶಾ ಮತ್ತು ಅಕೃತಿ ಅಗರವಾಲ್! ಆಪ್ತರ ಅಭಿಪ್ರಾಯಗಳಿಂದ ತಪ್ಪು ದಾರಿಗೆ ಹೋಗಿದ್ದೆವು ಎಂದ ಜೋಡಿಗಳು!!

ನಿಶ್ಚಿತಾರ್ಥ ಮುರಿದುಕೊಂಡ ಕೆಲವು ಸಮಯದ ಬಳಿಕ ಕ್ರಿಕೆಟಿಗ ಪೃಥ್ವಿ ಶಾ ಮತ್ತು ಸೋಶಿಯಲ್ ಮೀಡಿಯಾ ಇನ್ಫ್ಲ್ಯೂಯೆನ್ಸರ್ ಹಾಗೂ ನಟಿಯೂ ಆಗಿರುವ ಅಕೃತಿ ಅಗರವಾಲ್ ಜೋಡಿ ಮತ್ತೆ ಒಂದಾಗಿದ್ದಾರೆ. ತಮ್ಮ ಸಂಬಂಧದ ಕುರಿತು ಅಕೃತಿ ಅಗರವಾಲ್ ಇನ್‌ಸ್ಟಗ್ರಾಮ್‌ಲ್ಲಿ ‘ವೈಯಕ್ತಿಕ ಸ್ಪಷ್ಟನೆ’ ಎಂಬ ಶೀರ್ಷಿಕೆಯ ಜೊತೆ ಪೋಸ್ಟ್ ಹಂಚಿಕೊಂಡಿದ್ದಾರೆ. ತಮ್ಮ ನಿರ್ಧಾರಕ್ಕೆ ಆಪ್ತರ ಅಭಿಪ್ರಾಯಗಳು ಕಾರಣವಾಗಿದ್ದವು ಎಂದು ತಿಳಿಸಿದ್ದಾರೆ.
‘ನಮ್ಮ ಸಂಬಂಧದ ಬಗ್ಗೆ ನಮಗಿಂತ ಹೆಚ್ಚು ತಿಳಿದವರಂತೆ ವರ್ತಿಸಿದ ನನ್ನ ಆಪ್ತರ ಅಭಿಪ್ರಾಯಗಳು ನಮ್ಮ ನಿಶ್ಚಿತಾರ್ಥನ್ನು ಮುರಿದುಕೊಳ್ಳುವ ನಿರ್ಧಾರಕ್ಕೆ ಕಾರಣವಾಗಿದ್ದವು. ಅವರ ಮಾತುಗಳಿಂದ ನಾನು ತಪ್ಪು ದಾರಿಗೆಹೋಗಿದ್ದೆ ಎಂದು ಈಗ ಅನಿಸುತ್ತಿದೆ. ನಮ್ಮಿಬ್ಬರ ನಡುವೆ ಮುಕ್ತವಾಗಿ ಮಾತನಾಡುವ ಅವಕಾಶ ನೀಡದೆ ನಿರ್ಧಾರ ತೆಗೆದುಕೊಂಡಿದ್ದೆ’ ಎಂದು ಅಕೃತಿ ಬರೆದುಕೊಂಡಿದ್ದಾರೆ. ತಾವು ತೆಗೆದುಕೊಂಡ ನಿರ್ಧಾರದಿಂದ ಉಂಟಾದ ನೋವಿಗೆ ಹೊಣೆ ಹೊತ್ತುಕೊಳ್ಳುವುದಾಗಿಯೂ ಅವರು ಹೇಳಿದ್ದಾರೆ.
‘ಆ ನಿರ್ಧಾರದಿಂದ ಉಂಟಾದ ನೋವಿನ ಹೊಣೆಯನ್ನು ನಾನು ತೆಗೆದುಕೊಳ್ಳುತ್ತೇನೆ. ನಾವಿಬ್ಬರೂ ಮುಕ್ತವಾಗಿ ಮಾತನಾಡಿ, ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡಿದ್ದೇವೆ. ಈಗ ಮತ್ತೆ ಒಟ್ಟಿಗೆ ಇರಲು ನಿರ್ಧರಿಸಿದ್ದೇವೆ. ನಮಗೆ ಒಬ್ಬರಿಗೊಬ್ಬರು ಸಾಕು. ನಮ್ಮ ಸಂಬಂಧಕ್ಕೆ ಬೇರೆಯವರ ಅಗತ್ಯವಿಲ್ಲ’ ಎಂದು ತಿಳಿಸಿದ್ದಾರೆ.
‘ಇನ್ನು ಮುಂದಿನ ನಮ್ಮ ಭವಿಷ್ಯವು ನಮ್ಮಿಬ್ಬರ ತಿಳುವಳಿಕೆ, ನಂಬಿಕೆ ಮತ್ತು ಪ್ರೀತಿಯ ಆಧಾರದ ಮೇಲೆ ಸಾಗಬೇಕು ಎಂದು ಬಯಸುತ್ತೇನೆ. ನಾವು ಹೊಸದಾಗಿ ಜೀವನ ಆರಂಭಿಸುತ್ತಿರುವುದರಿಂದ ದಯವಿಟ್ಟು ನಮ್ಮ ನಿರ್ಧಾರವನ್ನು ಗೌರವಿಸಿ’ ಎಂದು ಅಕೃತಿ ಮನವಿ ಮಾಡಿದ್ದಾರೆ.
ಅಕೃತಿ ಹಂಚಿಕೊಂಡಿರುವ ಪೋಸ್ಟ್‌ನ್ನು ಹೃದಯ ಮತ್ತು ದೃಷ್ಟಿ ನಿವಾರಣೆಯ ಸಂಕೇತದ ಎಮೋಜಿ ಹಾಕಿ ಪೃಥ್ವಿ ಶಾ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Advertisement

Advertisement

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page