ಇತಿಹಾಸದಲ್ಲೇ ಪ್ರಥಮ ಬಾರಿಗೆ ಡಿಜೆ, ಸುಡುಮದ್ದು ರಹಿತ “ಪುತ್ತೂರು ದಸರಾ 2026” | ವಿದ್ಯುತ್‌ ದೀಪಾಲಂಕಾರದಿಂದ ಝಗಮಗಿಸಲಿದೆ ಪುತ್ತೂರು! | ಇಲ್ಲಿದೆ ನೋಡಿ ಕಂಪ್ಲೀಟ್‌ ಡಿಟೈಲ್ಸ್‌!!

ಪುತ್ತೂರು ಶ್ರೀ ಶಾರದಾ ಭಜನಾ ಮಂದಿರದ ಆಶ್ರಯದಲ್ಲಿ ನಡೆಯುವ ನವರಾತ್ರಿ ಉತ್ಸವ ಹಾಗೂ ಪುತ್ತೂರು ದಸರಾ ಕಾರ್ಯಕ್ರಮದ ಪತ್ರಿಕಾಗೋಷ್ಠಿ ನಗರದ ಪ್ರೆಸ್‌ ಕ್ಲಬ್‌ನಲ್ಲಿ ನಡೆಯಿತು.

Advertisement

ಸುಡುಮದ್ದು, ಡಿಜೆ ಇಲ್ಲದ ಪ್ರಥಮ ಪುತ್ತೂರು ದಸರಾ ಎಂಬ ಹೆಗ್ಗಳಿಕೆಗೆ ಶ್ರೀ ಶಾರದಾ ಭಜನಾ ಮಂದಿರದ ನವರಾತ್ರಿ ಉತ್ಸವ, ಶಾರದೋತ್ಸವ ಪಾತ್ರವಾಗಲಿದೆ. ಜೊತೆಗೆ ಪುತ್ತೂರು ಜಾತ್ರೆಯ ರೀತಿಯಲ್ಲೇ ಇಡೀ ನಗರವೇ ವಿದ್ಯುತ್‌ ದೀಪಾಲಂಕಾರದಿಂದ ಝಗಮಗಿಸಲಿದೆ.

Advertisement
Advertisement

ಶಾರದಾ ಭಜನಾ ಮಂದಿರದ ವರ್ಷಂಪ್ರತಿ ಆಚರಿಸಲ್ಪಡುವ ನವರಾತ್ರಿ, ಪೂಜೆ ಹಾಗೂ ಶ್ರೀ ಶಾರದೋತ್ಸವ, ಚಂಡಿಕಾಹೋಮ ಮತ್ತು ವಿಜೃಂಭಣೆಯ ಭವ್ಯ ಶೋಭಾಯಾತ್ರೆಯು ಒಕ್ಟೋಬರ್‌ 11 ಭಾನುವಾರದಿಂದ 21ನೇ ಬುಧವಾರದವರೆಗೆ ನಡೆಯಲಿದೆ.

ಅ.21ಕ್ಕೆ ಸಂಜೆ 05.30ಕ್ಕೆ ಸರಿಯಾಗಿ ವೈಭವದ ಶೋಭಾಯಾತ್ರೆಯು ನಡೆಯಲಿದೆ. ಶೋಬಾಯಾತ್ರೆಗೆ ಚಾಲನೆಯನ್ನು ಕೊಡುಗೈದಾನಿ, ಉದ್ಯಮಿ ಸದಾಶಿವ ಶೆಟ್ಟಿ ಕೂಳೂರು, ಕನ್ಯಾನ ಚಾಲನೆ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಶೋಭಾಯಾತ್ರೆ ಸಾಗುವ ಹಾದಿಯಲ್ಲಿ ವಿದ್ಯುತ್‌ ದೀಪಾಲಂಕಾರದ ಜೊತೆಗೆ ಕೇರಳ ಮತ್ತು ಕರ್ನಾಟಕದಿಂದ ಹಲವಾರು ಕಲಾ ತಂಡಗಳು ಭಾಗಿಯಾಗುವುದು ವಿಶೇಷ ಆಕರ್ಷಣೆಯಾಗಿದೆ. ಸುಮಾರು 500 ರಿಂದ 600 ತಂಡಗಳಿಂದ ಕುಣಿತ ಭಜನೆ ಮೆರವಣಿಗೆಯಲ್ಲಿ ಇದ್ದು ಸನಾತನ ಸಂಸ್ಕೃತಿಯ ಮಹತ್ವವನ್ನು ಶೋಭಾಯಾತ್ರೆಯಲ್ಲಿ ಸಾರಲಾಗುತ್ತದೆ ಎಂದು ಶಾರದೋತ್ಸವದ ಅಧ್ಯಕ್ಷ ಸೀತಾರಾಮ ರೈ ಕೆದಂಬಾಡಿಗುತ್ತು ಹೇಳಿದರು.

ಇನ್ನು ಶೋಭಾಯಾತ್ರೆಯಲ್ಲಿ ಈ ಬಾರಿ ಚೆಂಡೆಮೇಳ, ಕೊಂಬು, ಸಾಕ್ಸೋಫೋನ್, ವಯೋಲಿನ್, ಕೀ ಬೋರ್ಡ್, ರಿದಂ ಪ್ಯಾಡ್ ಮತ್ತು ಕೊಳಲು ಸಹಿತ ಅನೇಕ ಆಕರ್ಷಣೆಗಳು ಜನಮನ ಸೆಳೆಯಲಿದೆ. ಜೊತೆಗೆ ಶೋಭಾಯಾತ್ರೆಯಲ್ಲಿ ನಾಡಿನ ಸಂಸ್ಕೃತಿಯನ್ನು ಸಾರುವ ಪ್ರಸಿದ್ಧ ತಂಡಗಳಾದ ಕರಿಂಕಾಳಿ ತ್ರಿಶೂರ್‌, ಅಘೋರಿ ಅಲೇಪುರಂ, ಪೂತಂ ತೀರ ಪಾಲಕ್ಕಾಡ್‌, ತಿರುಪತಿ ಬೋರ್ಡ್‌ ಮಲಾಪುರಂ, ಕಥಕ್ಕಳಿ ಬೋರ್ಡ್‌ ತ್ರಿಶೂರ್‌, ಕಾಳಿ ಡ್ಯಾನ್ಸ್‌ ತ್ರಿಶೂರ್‌, ಗೊರಿಲ್ಲಾ ಆಂಡ್‌ ಟೀಮ್‌, ದೇವಿ ಬೋರ್ಡ್‌ ಕಾಸರಗೋಡು, ತಾಂಬೋಲಂ ಕಾಸರಗೋಡು, ಕಾಳ ಮಲಪ್ಪುರಂ, ದೇವರೂಪಂ ಎರ್ಣಾಕುಲಂ, ಮುತ್ತುಕೊಡೆ ಕಾಸರಗೋಡು ಹಾಗೂ ಅರೆಯಂಜಮ್‌ ಮಲಪ್ಪುರಂ ಬೋರ್ಡ್‌ ಭಾಗವಹಿಸಲಿವೆ ಎಂದು ಶೋಭಾಯಾತ್ರೆಯ ಸಂಚಾಲಕ ನವೀನ್‌ ಕುಲಾಲ್‌ ಹೇಳಿದರು.

ಶೋಭಾಯಾತ್ರೆಯು ಬೊಳುವಾರು ವೃತ್ತದಿಂದ ಚೆಂಡೆಮೇಳ, ವಾದ್ಯ ಘೋಷ, ಕುಣಿತ ಭಜನೆ ಹಾಗೂ ಕೇರಳ, ತಮಿಳುನಾಡು ಮತ್ತು ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಸಿದ್ಧ ಸಾಂಸ್ಕೃತಿಕ ಕಲಾತಂಡಗಳ ವಿಶೇಷ ಆಕರ್ಷಣೆಗಳೊಂದಿಗೆ ಶ್ರೀ ಶಾರದ ದೇವಿಯ ಭವ್ಯ ಶೋಭ ಯಾತ್ರೆಯು ನಡೆಯಲಿದೆ. ಜೊತೆಗೆ ಸಮಯಪಾಲನೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಶಿಸ್ತು ಪಾಲನೆಯೇ ಮುಖ್ಯವಾಗಿರುತ್ತದೆ. ಆದ್ದರಿಂದ ಶೋಬಾಯಾತ್ರೆಯು ಸಾಗುವಾಗ ಯಾವುದೇ ಅಹಿತಕರ ಘಟನೆ ನಡೆಯದಂತೆ ಜಾಗ್ರತೆವಹಿಸಿ ನಿಂತು ಯಾತ್ರೆಯನ್ನು ವೀಕ್ಷಿಸಬೇಕೆಂದು ನವೀನ್‌ ಕುಲಾಲ್‌ ವಿನಂತಿಸಿದರು.

ಜೊತೆಗೆ ಪುತ್ತೂರು ಶಾರದಮಾತೆಯ ಶೋಭಾಯಾತ್ರೆ ಹತ್ತೂರಿನಲ್ಲಿ ಪ್ರಸಿದ್ಧಿ ಹೊಂದಿದ್ದು, ರಾಜ್ಯದ ವಿಚಿಧ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಭವ್ಯ ಶೋಭಾಯಾತ್ರೆಯನ್ನು ಕಣ್ತುಂಬಿಸಿಕೊಂಡು ದೇವಿಯ ಕೃಪೆಗೆ ಪಾತ್ರರಾಗಲು ವಿನಂತಿಸಿದ್ದಾರೆ.

ಮುಖ್ಯವಾಗಿ ಇಲ್ಲಿಯವರೆಗೆ ಪುತ್ತೂರು ಶಾರದೋತ್ಸವ ಎಂಬ ಹೆಸರಿದ್ದು ಇನ್ನು ಮುಂದೆ ಪುತ್ತೂರು ದಸರಾ ಎಂಬ ನಾಮಾಂಕಿತದಿಂದ ನಡೆಯಲಿದೆ. ಜೊತೆಗೆ ಸಮಯಪಾಲನೆ ಮತ್ತು ಶಿಸ್ತಿಗೆ ಆಧ್ಯತೆ ನೀಡಿದ್ದು. ಎಲ್ಲಾ ಕಾರ್ಯಕ್ರಮಗಳೂ ಸಮಯಕ್ಕೆ ಸರಿಯಾಗಿ ಆರಂಭಗೊಳ್ಳುತ್ತದೆ. ವಿಶೇಷವಾಗಿ ಈ ಬಾರಿ ಡಿ.ಜೆ ಮತ್ತು ಸಿಡಿಮದ್ದಿನ ಪರ್ದರ್ಶನ ಇರುವುದಿಲ್ಲ. ನಮ್ಮ ನಾಡಿನ ಸಂಸ್ಕೃತಿಗೆ ಹೆಚ್ಚು ಒತ್ತನ್ನು ನೀಡಿ ಈ ಬಾರಿಯ ಶಾರದೋತ್ಸವ ಆಚರಿಸಲಾಗುವುದು ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಶಾರದೋತ್ಸವದ ಅಧ್ಯಕ್ಷ ಸೀತಾರಾಮ ರೈ ಕೆದಂಬಾಡಿಗುತ್ತು, ಪ್ರಧಾನ ಕಾರ್ಯದರ್ಶಿ ಜಯಂತ್‌ ಉರ್ಲಾಂಡಿ, ಶೋಭಾಯಾತ್ರೆಯ ಸಂಚಾಲಕರಾದ ಕೃಷ್ಣ ಎಂ. ಅಳಿಕೆ ಮತ್ತು ನವೀನ್‌ ಕುಲಾಲ್‌ ಹಾಗೂ ಕೋಶಾಧಿಕಾರಿ ವಸಂತ್‌ ಕುಮಾರ್‌ ಉಪಸ್ಥಿತರಿದ್ದರು.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page