ನಾನಾ ಪಾಟೇಕರ್‌ ನಿಧನದ ಹಿಂದಿದೆ ಬಲವಾದ ಕಾರಣ! ಪಾಟೇಕರ್‌ ಸಾವಿಗೆ ಕಾರಣವಾಯಿತು ಈ ಕಾಯಿಲೆ!! ಏನಿದು ಕೊರೊನರಿ ಆರ್ಟರಿ ಡಿಸೀಸ್?..

ಪ್ರಸಿದ್ಧ ನಟ ನಾನಾ ಪಾಟೇಕರ್ ನಿಧನದ ಬಳಿಕ ಹೊರಬಂದ ಮರಣೋತ್ತರ ಪರೀಕ್ಷೆ ವರದಿಯು ಅವರ ಸಾವಿಗೆ ನಿಜವಾದ ಕಾರಣವನ್ನು ಸ್ಪಷ್ಟಪಡಿಸಿದೆ. ಗೋವಾ ಮೆಡಿಕಲ್ ಕಾಲೇಜ್, ಬಾಂಬೋಲಿಯ ವೈದ್ಯರ ವಿಶೇಷ ತಜ್ಞರ ಸಮಿತಿಯು ಬಿಡುಗಡೆ ಮಾಡಿದ ಅಧಿಕೃತ ಆಟೋಪ್ಸಿ ವರದಿಯ ಪ್ರಕಾರ, 75 ವರ್ಷದ ನಾನಾ ಪಾಟೇಕರ್ ಅವರ ಮರಣವು ಸಂಪೂರ್ಣವಾಗಿ ಸಹಜವಾಗಿದ್ದು, ಹೃದಯಾಘಾತ ಇದಕ್ಕೆ ಕಾರಣವಾಗಿದೆ ಎಂದು ತಿಳಿದು ಬಂದಿದೆ.

Advertisement

ಪೊಲೀಸರು ಹಂಚಿಕೊಂಡ ವೈದ್ಯಕೀಯ ಮಾಹಿತಿಯ ಪ್ರಕಾರ, ಕೊರೊನರಿ ಆರ್ಟರಿ ಡಿಸೀಸ್ ಸಮಸ್ಯೆಯಿಂದ ನಾನಾ ಪಾಟೇಕರ್ ಅವರು ಬಳಲುತ್ತಿದ್ದರು. ಇದೇ ಕಾಯಿಲೆಯಿಂದಾಗಿ ಅವರ ಹೃದಯಕ್ಕೆ ರಕ್ತವನ್ನು ಕೊಂಡೊಯ್ಯುವ ಮುಖ್ಯ ಧಮನಿಯು ಹಠಾತ್ತನೆ ರಕ್ತ ಹೆಪ್ಪುಗಟ್ಟುವಿಕೆಯಿಂದ ಮುಚ್ಚಲ್ಪಟ್ಟಿದ್ದು, ಇದರಿಂದ ಹೃದಯಕ್ಕೆ ರಕ್ತ ಮತ್ತು ಆಮ್ಲಜನಕ ಪೂರೈಕೆ ನಿಂತುಹೋಗಿದೆ. ಪರಿಣಾಮವಾಗಿ ಅವರಿಗೆ ತೀವ್ರ ಹೃದಯಾಘಾತ ಸಂಭವಿಸಿ ಪ್ರಾಣ ಕಳೆದುಕೊಂಡಿದ್ದಾರೆ. ಬಾಂಬೋಲಿಯಲ್ಲಿರುವ ಗೋವಾ ಮೆಡಿಕಲ್ ಕಾಲೇಜಿಗೆ ಮೃತದೇಹವನ್ನು ಕೊಂಡೊಯ್ದು, ಅಲ್ಲಿ ಪಂಚನಾಮ ಪ್ರಕ್ರಿಯೆಯನ್ನು ಕುಟುಂಬಸ್ಥರು ಹಾಗೂ ಸಾಕ್ಷಿಗಳ ಸಮ್ಮುಖದಲ್ಲಿ ನಡೆಸಲಾಯಿತು. ಬಳಿಕ ಹಿರಿಯ ವೈದ್ಯರ ಸಮಿತಿಯು ಮರಣೋತ್ತರ ಪರೀಕ್ಷೆ ನಡೆಸಿ ತನ್ನ ವರದಿಯನ್ನು ಪೊಲೀಸರಿಗೆ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದೆ.

Advertisement

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page