ತೈಲ ಟ್ಯಾಂಕರ್ ಮೇಲೆ‌ ಉಕ್ರೇನ್ ನೌಕಾ ಡ್ರೋನ್ ಭೀಕರ ದಾಳಿ! ಹಡಗಿನಲ್ಲಿದ್ದ ಎಲ್ಲಾ 23 ಮಂದಿ ಭಾರತೀಯ ಸಿಬ್ಬಂದಿ ಸೇಫ್!!

ರಷ್ಯಾದ ಕಪ್ಪು ಸಮುದ್ರ ಕರಾವಳಿಯ ಬಳಿ ಕಚ್ಚಾ ತೈಲ ಸಾಗಿಸುತ್ತಿದ್ದ ಲೈಬೀರಿಯಾ ಧ್ವಜ ಹೊಂದಿದ ತೈಲ ಟ್ಯಾಂಕರ್ ಮೇಲೆ ಉಕ್ರೇನ್ ನೌಕಾ ಡ್ರೋನ್ ಭೀಕರ ದಾಳಿ ನಡೆಸಿದೆ.

Advertisement

ದಾಳಿಯ ಬೆನ್ನಲ್ಲೇ ಹಡಗಿನಲ್ಲಿ ಬೃಹತ್ ಬೆಂಕಿ ಕಾಣಿಸಿಕೊಂಡಿದ್ದು, ಹಡಗಿನಲ್ಲಿದ್ದ ಎಲ್ಲಾ 23 ಮಂದಿ ಭಾರತೀಯ ಸಿಬ್ಬಂದಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ರಷ್ಯಾದ ಸಾರಿಗೆ ಸಚಿವಾಲಯ ತಿಳಿಸಿದೆ.

Advertisement
Advertisement

ಪ್ರಸಿದ್ಧ ಪ್ರವಾಸಿ ತಾಣವಾದ ಸೋಚಿ ನಗರದ ಸಮೀಪ ಈ ದಾಳಿ ನಡೆದಿದೆ. ಸಮುದ್ರದ ಮಧ್ಯೆ ಹಡಗು ಹೊತ್ತಿ ಉರಿಯುತ್ತಿದ್ದು, ಕಪ್ಪು ಹೊಗೆಯ ದಟ್ಟ ಮೋಡ ಆಕಾಶಕ್ಕೆ ಚಿಮ್ಮುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಬೆಂಕಿಯ ತೀವ್ರತೆ ಎಷ್ಟಿತ್ತೆಂದರೆ, ಆರಂಭದಲ್ಲಿ ಅಗ್ನಿಶಾಮಕ ದಳದವರು ಅದನ್ನು ನಂದಿಸುವಷ್ಟು ಹತ್ತಿರ ಬರಲು ಸಾಧ್ಯವಾಗಲಿಲ್ಲ. ಆದರೆ, ಟ್ಯಾಂಕರ್‌ನಲ್ಲಿದ್ದ ಎಲ್ಲಾ 23 ಜನರನ್ನು ಸುರಕ್ಷಿತವಾಗಿ ರಕ್ಷಿಸಲಾಯಿತು. ಸಚಿವಾಲಯದ ಪ್ರಕಾರ, ಎಲ್ಲಾ ಸಿಬ್ಬಂದಿ ಭಾರತೀಯ ನಾಗರಿಕರು ಎಂದು ತಿಳಿದು ಬಂದಿದೆ.

ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳ ಸಮಯದಲ್ಲಿ ಯಾವುದೇ ಸಾವುನೋವುಗಳು ವರದಿಯಾಗಿಲ್ಲ. ಸೋಚಿಯ ಸುತ್ತಮುತ್ತಲಿನ ವೀಡಿಯೊಗಳು ಮತ್ತು ಫೋಟೋಗಳು ಸಮುದ್ರದಲ್ಲಿ ದೊಡ್ಡ ಜ್ವಾಲೆಗಳನ್ನು ತೋರ್ಪಡಿಸಿದ್ದವು ಎಂದು ಜಾಲತಾಣ ಮೂಲಗಳು ವರದಿ ಮಾಡಿವೆ.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page