ಸಾರ್ವಜನಿಕವಾಗಿ ಗಲ್ಲು ಶಿಕ್ಷೆಯನ್ನು ಇದೇ ಮೊದಲ ಬಾರಿಗೆ ಅಮೆರಿಕದಲ್ಲಿ ವಿಧಿಸಲಾಗಿದೆ. ವ್ಯಕ್ತಿಯೊಬ್ಬನನ್ನು ಗಲ್ಲಿಗೇರಿಸುವ ಪೂರ್ಣ ಪ್ರಕ್ರಿಯೆಯನ್ನು ಅಮೆರಿಕ ಸರಕಾರವು ಲೈವ್ ಸ್ಟ್ರೀಮ್ ಮಾಡುವುದಾಗಿ ಘೋಷಿಸಿದೆ.
ಅಮೆರಿಕದ ಫೈರ್ ಸ್ಕ್ವಾಡ್ ಅಪರಾಧಿಯೊಬ್ಬನನ್ನು ಹಲವು ದಶಕಗಳ ಬಳಿಕ ಗೊಂಡಿಕ್ಕಿ ಕೊಲ್ಲುವ ಮೂಲಕ ಶಿಕ್ಷೆ ನೀಡಲಾಗುತ್ತಿದೆ. ಅಮೆರಿಕ ಸೇನೆಯ ಮಾಜಿ ಸೈನಿಕನೊಬ್ಬನಿಗೆ ಮರಣದಂಡನೆ ವಿಧಿಸಲಾಗುತ್ತಿದ್ದು ಈ ಬಗ್ಗೆ ಅಮೆರಿಕ ರಕ್ಷಣಾ ಇಲಾಖೆ ಪೆಂಟಗಾನ್ ಮಾಹಿತಿ ನೀಡಿದೆ ಎಂದು ಪತ್ರಿಕಾ ಮಾಧ್ಯಮಗಳು ವರದಿ ಮಾಡಿವೆ.
2009ರಲ್ಲಿ ಅಮೆರಿಕದ ಫೋರ್ಟ್ ಹುಡ್ ಎಂಬ ಸೇನೆ ನೆಲೆಯಲ್ಲಿ 13ಮಂದಿಯನ್ನು ಗೊಂಡಿಕ್ಕಿ ಕೊಲೆ ಗೈದಿದ್ದ ಮೇಜರ್ ನಿದಾಲ್ ಹಸನ್ ಶಿಕ್ಷೆಗೆ ಗುರಿಯಾಗುತ್ತಿರುವ ಅಪರಾಧಿ. ಮೊದಲ ಸಾರ್ವಜನಿಕ ಗಲ್ಲು ಶಿಕ್ಷೆ ಇದಾಗಿದ್ದು, ಸಾಕಷ್ಟು ಮಂದಿಯಿಂದ ವಿರೋಧವೂ ವ್ಯಕ್ತವಾಗಿದೆ ಎನ್ನಲಾಗುತ್ತಿದೆ.











