ಮಧ್ಯಪ್ರಾಚ್ಯದಲ್ಲಿ ಭಾರೀ ಯುದ್ಧ ವಿಮಾನಗಳ ನಿಯೋಜನೆ: ‘ಒಪ್ಪಂದ’ ಮಾಡಿಕೊಳ್ಳದಿದ್ದರೆ ಕೆಟ್ಟ ಪರಿಣಾಮ’: ಇರಾನ್ ಗೆ Trump ಬೆದರಿಕೆ

ನ್ಯೂಯಾರ್ಕ್: ಮಧ್ಯಪ್ರಾಚ್ಯದಲ್ಲಿ ಭಾರೀ ಯುದ್ಧ ವಿಮಾನಗಳ ನಿಯೋಜನೆ ಮಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘ಒಪ್ಪಂದ’ ಮಾಡಿಕೊಳ್ಳದಿದ್ದರೆ ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಇರಾನ್ ಗೆ ಬೆದರಿಕೆ ಹಾಕಿದ್ದಾರೆ.

ಇರಾನ್ ತನ್ನ ಪರಮಾಣು ಯೋಜನೆಗಳ ವಿಚಾರದಲ್ಲಿ ಪ್ರಗತಿಯಲ್ಲಿರುವಂತೆಯೇ ಈ ಬಗ್ಗೆ ಕೆಂಡಾಮಂಡಲವಾಗಿರುವ ಅಮೆರಿಕ ತನ್ನೊಂದಿಗೆ ಇರಾನ್ ‘ಅರ್ಥಪೂರ್ಣ ಒಪ್ಪಂದ’ ಮಾಡಿಕೊಳ್ಳದಿದ್ದರೆ ‘ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ. ಇರಾನ್ ನಲ್ಲಿ ಸಂಭವಿಸುವ ಭವಿಷ್ಯದ ಘಟನೆಗಳಿಗೆ ಇರಾನ್ ಸರ್ಕಾರ ನೇರವಾಗಿ ಹೊಣೆಯಾಗಿರುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇರವಾಗಿ ಎಚ್ಚರಿಕೆ ನೀಡಿದ್ದಾರೆ.

Advertisement

ಇರಾನ್‌ನೊಂದಿಗೆ ಅರ್ಥಪೂರ್ಣ ಒಪ್ಪಂದ ಮಾಡಿಕೊಳ್ಳುವುದು ಸುಲಭವಲ್ಲ ಎಂದು ಸಾಬೀತಾಗಿದೆ. ನಾವು ಅರ್ಥಪೂರ್ಣ ಒಪ್ಪಂದ ಮಾಡಿಕೊಳ್ಳಬೇಕು, ಇಲ್ಲದಿದ್ದರೆ ಕೆಟ್ಟ ವಿಷಯಗಳು ಸಂಭವಿಸುತ್ತವೆ ಎಂದು ಟ್ರಂಪ್ “ಶಾಂತಿ ಮಂಡಳಿ”ಯ ಉದ್ಘಾಟನಾ ಸಭೆಯಲ್ಲಿ ಹೇಳಿದ್ದಾರೆ.

ಒಂದು ವೇಳೆ ಇದಕ್ಕೆ ಇರಾನ್ ನಿರಾಕರಿಸಿದರೆ, ಅಮೆರಿಕ “ಒಂದು ಹೆಜ್ಜೆ ಮುಂದೆ ಹೋಗಬೇಕಾಗಬಹುದು. ಮುಂದಿನ 10 ದಿನಗಳಲ್ಲಿ ನೀವು ಅದನ್ನು ಕಂಡುಕೊಳ್ಳುವಿರಿ. ಆಯತೊಲ್ಲಾಗಳು ತಪ್ಪು ಮಾಡಿ ನಮ್ಮ ಮೇಲೆ ದಾಳಿ ಮಾಡಿದರೆ, ಅವರು ಊಹಿಸಲೂ ಸಾಧ್ಯವಾಗದ ಪ್ರತಿಕ್ರಿಯೆಯನ್ನು ಪಡೆಯುತ್ತಾರೆ” ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಇರಾನ್‌ಗೆ ದಾಳಿಯ ಬೆದರಿಕೆ ಹಾಕಿದ ಸ್ವಲ್ಪ ಸಮಯದ ನಂತರ ಟ್ರಂಪ್ ಈ ಎಚ್ಚರಿಕೆ ನೀಡಿದ್ದಾರೆ.

ಇದೇ ವಿಚಾರವಾಗಿ ಮಾತನಾಡಿದ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್, ‘ಇರಾನ್ ವಿರುದ್ಧ ದಾಳಿ ನಡೆಸಲು ಹಲವು ಕಾರಣಗಳು ಮತ್ತು ವಾದಗಳಿವೆ. ಅಧ್ಯಕ್ಷ ಟ್ರಂಪ್ ಜೊತೆ ಒಪ್ಪಂದ ಮಾಡಿಕೊಳ್ಳುವುದು ಇರಾನ್ ತುಂಬಾ ಬುದ್ಧಿವಂತವಾಗಿರುತ್ತದೆ ಎಂದು ಹೇಳಿದ್ದಾರೆ.

ಈ ಬಾರಿ ಜಿನೀವಾದಲ್ಲಿ ದೇಶದ ಪರಮಾಣು ಕಾರ್ಯಕ್ರಮದ ಕುರಿತು ಅಮೆರಿಕ ಮತ್ತು ಇರಾನ್ ಒಮಾನಿ ಮಧ್ಯಸ್ಥಿಕೆಯ ಎರಡನೇ ಸುತ್ತಿನ ಮಾತುಕತೆ ನಡೆಸಿದ ಕೆಲವು ದಿನಗಳ ನಂತರ ಈ ಹೇಳಿಕೆಗಳು ಬಂದಿವೆ.

Share this article

Subscribe

By pressing the Subscribe button, you confirm that you have read our Privacy Policy.
Advertisement

More News

You cannot copy content of this page