ಮುಂಬೈ: ಭಾರತ ಪುರುಷರ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯ ಮುಖ್ಯಸ್ಥ ಅಜಿತ್ ಅಗರ್ಕರ್ ಅವರ ಅಧಿಕಾರವಧಿ ಅಂತ್ಯವಾಗುವ ಸಮಯ ಬಂದಿದೆ. ಅಜಿತ್ ಅವರು ಅದೇ ಹುದ್ದೆಯಲ್ಲಿ ಮುಂದಿನ ವಿಷ್ವಕಪ್‌ವರೆಗೆ ಮುಂದುವರಿಯಬಹುದು ಎಂಬ ಸುದ್ದಿಗಳು ಕಳೆದ ಕೆಲವು ತಿಂಗಳಿನಿಂದ ಕೇಳಿ ಬರುತ್ತಿತ್ತು.
ಆದರೆ ಇದೀಗ ಸಪ್ಟೆಂಬರ್ ಅಂತ್ಯದಲ್ಲಿ ಅಜಿತ್ ಅಗರ್ಕರ್ ಅವರು ಆಯ್ಕೆ ಸಮಿತಿ ಮುಖ್ಯಸ್ಥನಾಗಿ ಕೆಳಗಿಳಿಯುವುದು ಬಹುತೇಕ ಖಚಿತವಾಗಿದೆ. ಹೀಗಾಗಿ ಬಿಸಿಸಿಐ ಇದೀಗ ಹೊಸಬರ ಆಯ್ಕೆಗೆ ಮುಂದಾಗಿದೆ. ಇದರಲ್ಲಿ ಎರಡು ಹೆಸರುಗಳು ಪ್ರಮುಖವಾಗಿ ಕೇಳಿಬರುತ್ತಿದೆ.
ಭಾರತದ ಮಾಜಿ ಕ್ರಿಕೆಟಿಗರಾದ ಪಾರ್ಥಿವ್ ಪಟೇಲ್ ಮತ್ತು ಪ್ರಜ್ಞಾನ್ ಓಝಾ ಅವರು,ಹಿರಿಯ ಪುರುಷರ ಕ್ರಿಕೆಟ್ ತಂಡದ ಮುಖ್ಯ ಆಯ್ಕೆಗಾರರಾಗಿ ಅಜಿತ್ ಅಗರ್ಕರ್ ಅವರ ಸ್ಥಾನವನ್ನು ತುಂಬಲು ಪ್ರಮುಖ ಅಭ್ಯರ್ಥಿಗಳಾಗಿದ್ದಾರೆ ಎಂದು ಮೂಲಗಳಿಂದ ವರದಿಯಾಗಿದೆ.














