ನವದೆಹಲಿ: ಸಮುದ್ರದಲ್ಲಿ ಅಲೆಗಳು ರಭಸವಾಗಿದ್ದಾಗ ಈಜುವುದೆಂದರೆ ನನಗೆ ಇಷ್ಟ. ಏಕೆಂದರೆ, ರಭಸದೊಂದಿಗೆ ಮತ್ತೊಂದು ರೀತಿಯ ಶಾಂತಿ ಎಂಬುದನ್ನು ಅದು ಕಲಿಸುತ್ತದೆ ಎಂದು ಲೋಕಸಭೆ ವಿಪಕ್ಷದ ನಾಯಕ ರಾಹುಲ್ ಗಾಂಧಿ ರವಿವಾರ ಸಾಮಾಜಿಕ ಜಾಲತಾಣದಲ್ಲಿ ದ್ವಂದ್ವಾರ್ಥದ ಪೋಸ್ಟ್ ಮಾಡಿದ್ದಾರೆ.
ಸಮುದ್ರದಲ್ಲಿ ಅಲೆಗಳು ಪ್ರಕ್ಷುಬ್ಧವಾಗಿದ್ದಾಗ ಈಜುವುದೆಂದರೆ ನನಗೆ ಇಷ್ಟ ಎಂಬ ಪೋಸ್ಟ್‌ಗೆ ಯಾವುದೇ ಸಂದರ್ಭ ಅಥವಾ ಹೆಚ್ಚಿನ ವಿವರಣೆಯನ್ನು ರಾಹುಲ್ ಗಾಂಧಿ ನೀಡಿಲ್ಲ ಎಂದು ತಿಳಿದು ಬಂದಿದೆ.
ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್‌ಐಆರ್)ಗೆ ಸಂಬಂಧಿಸಿದ ವಿಚಾರಗಳ ಕುರಿತು ಚುನಾವಣಾ ಆಯೋಗದ ವಿರುದ್ಧ ಕಾಂಗ್ರೆಸ್‌ನಿಂದ ಹೋರಾಟ ನಡೆಯುತ್ತಿರುವ ಸಂದರ್ಭದಲ್ಲೇ ರಾಹುಲ್ ಈ ಪೋಸ್ಟ್ ಮಾಡಿರುವು ರಾಜಕೀಯ ಕುತೂಹಲ ಕೆರಳಿಸಿದೆ.














