“ಹಿಂದೂ ಸಮಾಜವನ್ನು ಕೆದಕದಿರಿ” ಬಿ.ಸಿ ರೋಡ್ ಚಲೋ ಕುರಿತು ರಶ್ಮಿತ್ ಶೆಟ್ಟಿ ಕೈತ್ರೋಡಿ ಸ್ಪೋಟಕ ಮಾತು!

ಸೆಪ್ಟೆಂಬರ್ 28ರಂದು ವಿಶ್ವ ಹಿಂದೂ ಪರಿಷತ್ ಭಜರಂಗದಳ ಹಾಗೂ ಹಿಂದೂ ಜಾಗರಣಾ ವೇದಿಕೆಯ ನೇತೃತ್ವದಲ್ಲಿ ನಡೆಯಲಿರುವ ಬಿ.ಸಿ ರೋಡ್ ಚಲೋ ಬೃಹತ್ ಪ್ರತಿಭಟನೆ ನಡೆಯಲಿದೆ.

ಈ ಕುರಿತು ಬಿಜೆಪಿ ಪ್ರಮುಖ ರಶ್ಮಿತ್ ಶೆಟ್ಟಿ ಕೈತ್ರೋಡಿ ಮಾತನಾಡಿ, ಸುಮಾರು ಒಂದೂವರೆ  ವರ್ಷಗಳ ಹಿಂದೆ ನಡೆದಿರುವ ಕೊಲೆ ಕೇಸಿನಲ್ಲಿ ರಾಜ್ಯ ಸರ್ಕಾರದ ಕುಮ್ಮಕ್ಕಿನಿಂದಾಗಿ  ಪೊಲೀಸ್ ಇಲಾಖೆಯು 86 ವರ್ಷದ ಪ್ರಾಯದ,ಹಿರಿಯರಾದ, ಶ್ರೀರಾಮ ವಿದ್ಯಾಸಂಸ್ಥೆ ಕಲ್ಲಡ್ಕ ಇದರ ಮುಖ್ಯಸ್ಥರು ರಾಷ್ಟ್ರೀಯ ಸ್ವಯಂಸೇವ ಸಂಘದ ಪ್ರಮುಖರಾಗಿರುವ ಡಾಕ್ಟರ್ ಪ್ರಭಾಕರ್ ಭಟ್ ಕಲ್ಲಡ್ಕ ಇವರಿಗೆ ನೋಟಿಸ್ ನೀಡಿರುವುದು ಖಂಡನೀಯ ನೀತಿ. ಪ್ರಸ್ತುತ ರಾಜ್ಯ ಕಾಂಗ್ರೆಸ್ ಸರಕಾರದ ಹಿಂದೂ ವಿರೋಧಿ ನೀತಿ ಅದೇ ರೀತಿ ಸಂಘ ಪರಿವಾರದ ಹಿರಿಯರನ್ನು ಕೊಲೆ ಕೇಸಿನಲ್ಲಿ ಸಿಲುಕಿಸಿ ಹಿಂದೂ ಸಮಾಜವನ್ನು ಹೆದರಿಸುವ ತಂತ್ರವು ಬಾರಿ ವ್ಯವಸ್ಥಿತ ರೀತಿಯಲ್ಲಿ ಮಾಡುತ್ತಿದೆ.

ಅದೇ ರೀತಿ ಕೋಕಾ ಕೇಸಿನಲ್ಲಿ ಜೈಲಿನಿಂದ ಬಿಡುಗಡೆಯಾದ ಭರತ್ ಕುಮ್ದೇಲ್ ಮತ್ತು 6 ಹಿಂದೂ ಕಾರ್ಯಕರ್ತರನ್ನು ಮತ್ತೆ ಗೂಂಡಾ ಕಾಯ್ದೆ ಹಾಕಿ ಜೈಲಿಗೆ ಹಾಕಿರುವದು.. ರಾಜ್ಯ ಸರ್ಕಾರದ ಹಿಂದೂ ವಿರೋಧಿ ನೀತಿಯನ್ನು ಬಿಂಬಿಸುತ್ತಿದೆ. ಪ್ರಸ್ತುತ ರಾಜ್ಯ ಸರ್ಕಾರದ ಹಿಂದೂ ದಮನ ನೀತಿಯನ್ನು ವಿರೋಧಿಸಿ ನಾಳೆ ವಿಶ್ವ ಹಿಂದೂ ಪರಿಷತ್ ಭಜರಂಗದಳ ಹಾಗೂ ಹಿಂದೂ ಜಾಗರಣಾ ವೇದಿಕೆ ನೇತ್ರತ್ವದಲ್ಲಿ ಎಲ್ಲಾ ಸಂಘ ಪರಿವಾರದ ಮತ್ತು ಬಿಜೆಪಿ ಸಹಕಾರದೊಂದಿಗೆ ನಡೆಯುವ ಬಿ. ಸಿ ರೋಡ್ ಚಲೋ ಕಾರ್ಯಕ್ರಮವನ್ನು ಕರಾವಳಿಯ ಎಲ್ಲಾ ಹಿಂದೂ ಸಮಾಜ ಒಟ್ಟಾಗಿ, ಒಂದಾಗಿ ಯಶಸ್ವಿಗೊಳಿಸೋಣ ಎಂದು ಹೇಳಿದ್ದಾರೆ.

Advertisement

Advertisement
Advertisement

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page