ಸ್ಟೀವ್ ಸ್ಮಿತ್ ಬರುವಷ್ಟರಲ್ಲಿ ವಿಶ್ವಕಪ್​ನಿಂದಲೇ ಹೊರಬಿದ್ದ ಆಸ್ಟ್ರೇಲಿಯಾ

T20 World Cup 2026: ಟಿ20 ವಿಶ್ವಕಪ್​ 2026 ರಲ್ಲಿ ಆಸ್ಟ್ರೇಲಿಯಾ ತಂಡ ಈವರೆಗೆ 3 ಪಂದ್ಯಗಳನ್ನಾಡಿದೆ. ಮೊದಲ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಜಯ ಸಾಧಿಸಿದ್ದ ಆಸ್ಟ್ರೇಲಿಯಾ ಆ ಬಳಿಕ ಝಿಂಬಾಬ್ವೆ ಹಾಗೂ ಶ್ರೀಲಂಕಾ ವಿರುದ್ಧ ಸೋಲನುಭವಿಸಿದೆ. ಇನ್ನು ಒಮಾನ್ ವಿರುದ್ಧ ಕೊನೆಯ ಪಂದ್ಯವಾಡಬೇಕಿದೆ. ಈ ಪಂದ್ಯಕ್ಕಾಗಿ ಸ್ಟೀವ್ ಸ್ಮಿತ್ ಆಸ್ಟ್ರೇಲಿಯಾ ತಂಡವನ್ನು ಕೂಡಿಕೊಂಡಿದ್ದಾರೆ.

T20 World Cup 2026: ಟಿ20 ವಿಶ್ವಕಪ್​ಗೆ ಸ್ಟೀವ್ ಸ್ಮಿತ್ (Steve Smith) ಎಂಟ್ರಿ ಕೊಟ್ಟಿದ್ದಾರೆ. ಆದರೆ ಈ ಎಂಟ್ರಿಗೂ ಮುನ್ನವೇ ಆಸ್ಟ್ರೇಲಿಯಾ ತಂಡ ಟಿ20 ವಿಶ್ವಕಪ್​ನಿಂದ ಹೊರಬಿದ್ದಿದೆ. ಈ ಬಾರಿಯ ವಿಶ್ವಕಪ್ ತಂಡದಲ್ಲಿ ಸ್ಟೀವ್ ಸ್ಮಿತ್​ಗೆ ಸ್ಥಾನ ಲಭಿಸಿರಲಿಲ್ಲ. ಆದರೆ ಝಿಂಬಾಬ್ವೆ ವಿರುದ್ಧದ ಪಂದ್ಯದ ಬಳಿಕ ಮಿಚೆಲ್ ಮಾರ್ಷ್​​ ಗಾಯಗೊಂಡಿದ್ದ ಹಿನ್ನಲೆಯಲ್ಲಿ ಸ್ಮಿತ್ ಅವರನ್ನು ಮೀಸಲು ಆಟಗಾರರನಾಗಿ ಆಯ್ಕೆ ಮಾಡಲಾಗಿತ್ತು.

Advertisement

Share this article

Subscribe

By pressing the Subscribe button, you confirm that you have read our Privacy Policy.
Advertisement

More News

You cannot copy content of this page