ಬೆಂಗಳೂರು : ʼಕಾಂತಾರʼ ಸಿನಿಮಾದ ಬಳಿಕ ನಟ – ನಿರ್ದೇಶಕ ರಿಷಬ್ ಶೆಟ್ಟಿ ಡಿವೈನ್ ಸ್ಟಾರ್ʼ ಆಗಿ ಸಿನಿಮಂದಿಯ ಮನ ಗೆದ್ದಿದ್ದಾರೆ. ಇದಲ್ಲದೆ ಪ್ಯಾನ್ ಇಂಡಿಯಾ ಮಟ್ಟದಲ್ಲೂ ತನ್ನ ಛಾಪನ್ನು ಮುಡಿಸಿದ್ದಾರೆ. ಹಿಂದಿ, ತೆಲುಗು ಚಿತ್ರರಂಗದಲ್ಲೂ ರಿಷಬ್ ತನ್ನ ಗುರುತು ಮೂಡಿಸಿದ್ದಾರೆ. ಈಗಾಗಲೇ ರಿಷಬ್ ಮುಂದಿನ ಸಿನಿಮಾಗಳು ಶೂಟಿಂಗ್ ಹಂತದಲ್ಲಿದೆ. ಹಿಂದಿ ಮತ್ತು ತೆಲುಗಿನಲ್ಲಿ ಬೇರೆ ಬೇರೆ ಯೋಜನೆಗಳಲ್ಲಿ ರಿಷಬ್ ಬ್ಯುಸಿಯಾಗಿದ್ದಾರೆ. ಹಿಂದಿ, ತೆಲುಗಿನ ಬಳಿಕ ರಿಷಬ್ ಮುಂದೆ ಕಾಣಿಸಿಕೊಳ್ಳಲಿರುವ ಪ್ರಾಜೆಕ್ಟ್ಗಳ ಬಗ್ಗೆ ಮಾಹಿತಿ ಹೊರಬಿದ್ದಿದೆ. ಮಾಲಿವುಡ್ನ ಸೂಪರ್ ಹಿಟ್ ಡೈರೆಕ್ಟರ್ ಜತೆ ರಿಷಬ್ ಕೈ ಜೋಡಿಸಲಿದ್ದಾರೆ. ಮಲಯಾಳಂ ನಿರ್ದೇಶಕ ಚಿದಂಬರಂ ರಿಷಬ್ ಕೈ ಜೋಡಿಸಲಿದ್ದಾರೆ.
ಚಿದಂಬರಂ ʼಮಂಜುಮ್ಮೆಲ್ ಬಾಯ್ಸ್ʼ , ʼಬಾಲನ್ʼ ಮೂಲಕ ಪ್ಯಾನ್ ಇಂಡಿಯಾ ಸೌಂಡ್ ಮಾಡಿದ್ದಾರೆ. ಈ ಎರಡು ಸಿನಿಮಾಗಳ ಮೂಲಕ ಅವರು ತಮ್ಮದೇ ಆದ ಛಾಪನ್ನು ಚಿತ್ರರಂಗದಲ್ಲಿ ಮೂಡಿಸಿದ್ದಾ ರೆ. ಈಗ ಬಂದಿರುವ ಲೇಟೆಸ್ಟ್ ಮಾಹಿತಿಯ ಪ್ರಕಾರ ರಿಷಬ್ ಶೆಟ್ಟಿ ಅವರೊಂದಿಗೆ ಚಿದಂಬರಂ ಎರಡು ಪ್ರತ್ಯೇಕ ಯೋಜನೆಗಳನ್ನು ಮಾಡಲಿದ್ದಾರೆ. ಇಬ್ಬರು ಎರಡು ಪ್ರತ್ಯೇಕ ಯೋಜನೆಗಳಲ್ಲಿ ಒಟ್ಟಾಗಿ ಕೆಲಸ ಮಾಡುತ್ತಿದ್ದು , ಮೊದಲನೆಯದು ಕನ್ನಡದಲ್ಲಿ ಬರಲಿದೆ. ಇದೊಂದು ಸ್ಫೋರ್ಟ್ಸ್ ಡ್ರಾಮಾ ಸಿನಿಮಾ ವಾಗಿರಲಿದ್ದು, ಶಿಬು ತಮೀನ್ಸ್ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಈಗಾಗಲೇ ಈ ಯೋಜನೆಯ ಪ್ರೀಪ್ರೊಡಕ್ಷನ್ಸ್ ಕೆಲಸ ಆರಂಭಗೊಂಡಿದೆ. ಮುಂದಿನ ವರ್ಷದ ಆರಂಭದಲ್ಲಿ ಚಿತ್ರೀಕರಣವನ್ನು ಪ್ರಾರಂಭಿಸಲು ಚಿತ್ರತಂಡ ಯೋಜನೆ ರೂಪಿಸುತ್ತಿದೆ ಎಂದು ‘ಸಿನಿಮಾ ಎಕ್ಸ್ಪ್ರೆಸ್ʼನಲ್ಲಿ ವರದಿಯಾಗಿದೆ.
ಶಿಬು ತಮೀನ್ಸ್ ಅವರು ತಮ್ಮ ‘ತಮೀನ್ಸ್ ಫಿಲ್ಮ್ಸ್’ ಮತ್ತು ‘ಎಚ್ಆರ್ ಪಿಕ್ಚರ್ಸ್’ ಬ್ಯಾನರ್ಗಳ ಅಡಿಯಲ್ಲಿ ಹಲವಾರು ಗಮನಾರ್ಹ ಚಲನಚಿತ್ರಗಳನ್ನು ನಿರ್ಮಿಸಿದ್ದಾರೆ. ಇವುಗಳಲ್ಲಿ ಮಲಯಾಳಂನ ‘ಎಬಿಸಿಡಿ: ಅಮೆರಿಕನ್-ಬಾರ್ನ್ ಕನ್ಫ್ಯೂಸ್ಡ್ ದೇಸಿ’, ‘ಜಾಕ್ ಡೇ ನಿಯಲ್ಸ್’ ಮತ್ತು ‘ಮುರ’, ಹಾಗೂ ತಮಿಳಿನ ‘ಪುಲಿ’, ‘ಇರುಮುಗನ್’ ಮತ್ತು ‘ವೀರ ಧೀರ ಸೂರಾನ್’ ಮುಂತಾದ ಜನಪ್ರಿಯ ಚಿತ್ರಗಳು ಸೇರಿವೆ. ನಿರ್ಮಾಪಕರು ಚಿದಂಬರಂ ಮತ್ತು ರಿಷಬ್ ಅವರೊಂದಿಗೆ ಕೈ ಜೋಡಿಸುತ್ತಿರುವ ಮುಂಬರುವ ಬೃಹತ್ ಚಿತ್ರದ ಕುರಿತ ಹೆಚ್ಚಿನ ವಿವರಗಳು ಮುಂದಿನ ದಿನಗಳಲ್ಲಿ ಹೊರಬೀಳಲಿವೆ ಎಂದು ಮೂಲಗಳು ತಿಳಿಸಿವೆ. ಚಿದಂಬರಂ 2021ರಲ್ಲಿ ʼಜಾನ್ ಇ ಮ್ಯಾನ್ʼ ಎನ್ನುವ ಸಿನಿಮಾವನ್ನು ಮಾಡಿದ್ದರು. ಆ ಬಳಿಕ ʼಮಂಜುಮ್ಮೆಲ್ ಬಾಯ್ಸ್ʼ , ʼಬಾಲನ್ʼ ಮೂಲಕ ಗಮನ ಸೆಳೆದಿದ್ದಾರೆ. ಸದ್ಯ ರಿಷಬ್ ಶೆಟ್ಟಿ ತೆಲುಗಿನ ಪ್ರಶಾಂತ್ ವರ್ಮಾ ಅವರೊಂದಿಗೆ ʼಜೂ ಹನುಮಾನ್ʼ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಬಳಿಕ ಅವರು ಚಿದಂಬರಂ ಅವರೊಂದಿಗೆ ಸೇರಿಕೊಳ್ಳಲಿದ್ದಾರೆ. ಇಷ್ಟು ಮಾತ್ರವಲ್ಲದೆ ರಿಷಬ್ ಹಿಂದಿಯ ʼಶಿವಾಜಿʼ ಚಿತ್ರದಲ್ಲೂ ಕಾಣಿಸಿಕೊಳ್ಳಲಿದ್ದಾರೆ.














