ತುಳು ರಂಗಭೂಮಿಯಲ್ಲಿ ವಿನೂತನ ಝೇಂಕಾರ! ದಾಖಲೆಯ ದಂತಕಥೆಯತ್ತ ಕಾಡಗಗ್ಗರ ನಾಟಕ!!

ಕಾಡಗಗ್ಗರ ಹೆಸರು ಕೇಳುವಾಗ ಏನೋ ಒಂದು ಹೊಸತನ ಇದೆಯೆಂದು ನಾಟಕ ನೋಡಲು ಮಂಗಳೂರು ಟೌನ್ ಹಾಲ್‌ಗೆ ತೆರಳಿದೆ. ನಾಟಕ ಆರಂಭದಿಂದ ಅಂತ್ಯದವರೆಗೆ ಪ್ರೇಕ್ಷಕರನ್ನು ಆಲುಗಾಡದಂತೆ ಮಾಡಿದ್ದು ಸತ್ಯ. ಇದೊಂದು ಸಿನೆಮಾ ಶೈಲಿಯ ನಾಟಕ. ಕಾಲ್ಪನಿಕ‌ ಜಾನಪದ ಜಾಡಿನ‌ ಮೂಲಕ ಮಹಿಸಂದಾಯ ದೈವದ ಕಾರಣಿಕವನ್ನು ಸಾರುವ ಒಂದು ಅದ್ವಿತೀಯವಾಗಿ ಹೆಣೆದ ಕಥೆ.

Advertisement

ದೈವವನ್ನು ತೋರಿಸುವುದೇ ನಾಟಕವಲ್ಲ ಎಂಬುದು ಸಾಬೀತು:ನಾಟಕದ ಹೆಸರು ಕೇಳುವಾಗ ಏನೋ ದೈವಗಳನ್ನು ವೇದಿಕೆಯಲ್ಲಿ ತರುತ್ತಾರೋ ಎಂಬ ಪ್ರಶ್ನೆ ಸರ್ವರಿಗೂ ಬರುವಂತದ್ದೆ. ದೈವವನ್ನು ಕುಣಿಸುವುದು, ದೈವದ ವೇಷ ಧರಿಸುವ ಮೂಲಕ ತುಳುವರ ಕೆಂಗಣ್ಣಿಗೆ ಗುರಿಯಾದ ರಂಗಭೂಮಿಯಲ್ಲಿ ದೈವವನ್ನು ಅನುಕರಣೆ ಮಾಡದೇ ಯಶಸ್ವಿಯಾಗಿದ್ದು ಈ ನಾಟಕದ ಪ್ಲಸ್ ಪಾಯಿಂಟ್. ಕಾಲ್ಪನಿಕ ಸನ್ನಿವೇಶದ ಮೂಲಕ ಎಲ್ಲೂ ದೈವ ವೇಷ ಧರಿಸದೇ ಇರುವುದು ಮುಖ್ಯವಾಗಿದೆ.

Advertisement
Advertisement

ಕಲಾವಿದರ ಬಗ್ಗೆ ಹೇಳುದಾದರೆ ಎರಡು‌ ಕಲಾವಿದರನ್ನು ಬಿಟ್ಟು ಬಾಕಿ ಬ್ಯಾನರ್ ಅರ್ಟಿಸ್ಟ್ ಅಲ್ಲ. ಸ್ವರಾಜ್ ಒರ್ವ ಅದ್ವಿತೀಯ ಕಲಾವಿದ ಎಂಬುದನ್ನು ಪ್ರತಿ ದೃಶ್ಯದಲ್ಲಿ ‌ಸಾಭೀತು ಮಾಡಿದ್ದು ಜೊತೆ ತನ್ನ ನೇಮ್ ಫೇಮ್ ಈ ನಾಟಕಕ್ಕೆ ಒಂದು ಹೆಚ್ಚುವರಿ ಲಾಭ. ಬೈರಜ್ಜ ಎನ್ನುವ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ ರವಿ ಎಂ ಎಸ್ ವರ್ಕಾಡಿ ನಟನೆಯಂತು ಹಳೆಯ ಸಿನೆಮಾದ ಸುದರ್ಶನ್, ಎಂ ಪಿ ಶಂಕರ್‌ ನಾಚಿಸುವಂತೆ ಭಾಸವಾಗುತ್ತದೆ. ಬೈರಜ್ಜನ ಪಾತ್ರ ರವಿಯವರಿಗಾಗಿ ಸೃಷ್ಟಿಸಿದ ರೀತಿಯಲ್ಲಿ ಮೂಡಿ ಬಂದಿದ್ದು ಸುಳ್ಳಲ್ಲ.ಇವರ ಪ್ರತಿ ಹೆಜ್ಜೆ, ನಟನ ಕೌಶಲ್ಯ ಅಚ್ಚುಕಟ್ಟಾಗಿ ಮೂಡಿ ಬಂದಿದ್ದು ಈ ನಾಟಕ ಗೆಲ್ಲಲು‌ ಮೂಲ ಕಾರಣವಾಗಿದೆ. ಇತನ್ಮಧ್ಯೆ ಮಧ್ಯೆ ಹೊಸ ಕಲಾವಿದರು ತಮಗೆ ನೀಡಿದ ಪಾತ್ರಕ್ಕೆ ಜೀವ ನೀಡಿದ್ದು ಯಾರು ಕೂಡ ಹೊಸ ಕಲಾವಿದರೆಂದು ಭಾಸವಾಗದ ರೀತಿಯಲ್ಲಿ ನಟಿಸಿದ್ದಾರೆ. ಯಾಕೆಂದರೆ ಸಾಮಾಜಿಕ ‌ನಾಟಕಕ್ಕು, ರೆಕಾರ್ಡಿಂಗ್ ನಾಟಕದ ಮೂಲಕ ಜಾನಪದ ನಾಟಕದಲ್ಲಿ ಬಣ್ಣ ಹಚ್ಚುವುದಕ್ಕೂ ಅಜಾಗಜಾಂತರ ವ್ಯತ್ಯಾಸವಿದೆ. ಪ್ರತಿ ಕಲಾವಿದರಲ್ಲಿ ನೈಜತೆ ಕಂಡಿದ್ದು ಇವರನ್ನು ತಿದ್ದುವ ಕೆಲಸ ನಿರ್ದೇಶಕ ಮಾಡಿದ್ದಾನೆ ಎಂದು ನಾಟಕ ನೋಡಿದರೆ ತಿಳಿಯಬಹುದು.

ಸೆಟ್ಟಿಂಗ್ ನ ಗಟ್ಟಿಗರೇ ನಾಟಕದ ಹೈಕಮಾಂಡ್:- ನಾಟಕದಲ್ಲಿ ಪ್ರತಿ ದೃಶ್ಯದಲ್ಲಿ ಸೆಟ್ಟಿಂಗ್ ಬದಲಾವಣೆ ಮಾಡುವುದು ಸಾಹಸವಲ್ಲ ಬದಲಾಗಿ ಇದೊಂದು ಸಾಧನೆ. ಜನರಿಗೆ ಮುಖ ಕಾಣದಿದ್ದು ನಾಟಕ ಗೆಲ್ಲುವಲ್ಲಿ ಈ ಸೆಟ್ಟಿಂಗ್ ಮುಖ್ಯ ಕಾರಣವಾಗಿದೆ. ಒಳಗೆ ಬೆಳಕಿಲ್ಲದೇ ಪ್ರತಿ ದೃಶ್ಯ ಸಂಯೋಜನೆ ‌ಅಷ್ಟು ಸುಲಭವಲ್ಲ.‌ ಪ್ರಸಾದನ ವಿಭಾಗದಲ್ಲಿ ಬೇಕಾದ ಪಾತ್ರಕ್ಕೆ ಬಣ್ಣ ಹಚ್ಚುವ ಕೆಲಸದಲ್ಲಿ ಸೈ ಏನಿಸಿಕೊಂಡದ್ದು ಪ್ರಸಾದ್ ಕೊಯಿಲ ಅವರ ಬಣ್ಣ ಮೆಚ್ಚುಗೆಯಾಗಿದೆ. ಶ್ವೇತಾ ಅರೆಹೊಳೆ ಅವರ ಕ್ಲೈಮಾಕ್ಸ್‌ ಅಂತು ನೋಡಲು ಕಾಯಲೇ ಬೇಕು. ಕಲೆ ರಕ್ತಗತವಾಗಿ ಬಂದಿರುವ ಕೀರ್ತನ ಭಂಡಾರಿಯ ಕತೆಗೆ ಸಂಗೀತ ಮತ್ತು ಬೆಳಕಿನ ವ್ಯವಸ್ಥೆಯೂ ಒಂದು ರೀತಿಯಲ್ಲಿ ಪೈ‌ನಲ್ ಟಚ್.ಅಂದರೆ ನಾಟಕ ಚೆನ್ನಾಗಿ ‌ಮೂಡಿ ಬರಲು ಸಾಥ್ ನೀಡಿದೆ.

ಮಂಗಳೂರು ಪುರಭವನ ಪುಲ್ ಪ್ಯಾಕ್:- ಇಪ್ಪತ್ತೈದು ಮೂವತ್ತು ವರ್ಷಗಳ ಹಿಂದೆ ಮಂಗಳೂರು ಪುರಭವನದಲ್ಲಿ ನಾಟಕ ನೋಡಲು‌ ಬಾಗಿಲು ಕಿಟಕಿಯಲ್ಲಿ ನೇತಾಡುವ ಕಾಲವಿತ್ತು. ಆದರೆ ಜಾನಪದ ನಾಟಕಕ್ಕೆ ಈ ರೀತಿ ಕಿಕ್ಕಿರಿದು ನಾಟಕ ಆರಂಭವಾಗುವ ಒಂದು ಗಂಟೆ ಮೊದಲೇ ಹೌಸ್ ಪುಲ್ ಆಗಿದ್ದು ಪ್ರಸ್ತುತ ರಂಗಭೂಮಿ ಇತಿಹಾಸದಲ್ಲಿ ಮೊತ್ತ ಮೊದಲೆಂದರೇ ತಪ್ಪಲ್ಲ.

ಐದು ಪ್ರದರ್ಶನದಿಂದ ಐವತ್ತು ನಾಟಕ‌ ಬುಕ್ಕಿಂಗ್: ಐದು ಪ್ರದರ್ಶನದ ಬೆನ್ನಲ್ಲೇ ಐವತ್ತು ಪ್ರದರ್ಶನ ಬುಕ್ಕಿಂಗ್ ಆಗಿದ್ದು ಇದೊಂದು ನಾಟಕದ ಮೈಲಿಗಲ್ಲು.ಯಾಕೆಂದರೆ ಈ ನಾಟಕದ ಹಿಂದೆ ದೊಡ್ಡ ಶ್ರಮವಿದೆ. ತಂಡಕ್ಕೆ ಗೆಲ್ಲಬೇಕೆಂಬ ಹಠವಿದೆ. ಒಟ್ಟು ತಂಡದಲ್ಲಿ ಸಾಮೂಹಿಕ ಬಂಧುತ್ವವಿದೆ. ಒಟ್ಟಾಗಿ ರಂಗಭೂಮಿಯಲ್ಲಿ ಬದಲಾವಣೆ ತರಬೇಕೆಂಬ ಹಂಬಲವಿದೆ. ಇದನ್ನೆಲ್ಲವನ್ನು ಸಾಧಿಸುವ ಛಲವಿದೆ.‌ ಖಂಡಿತವಾಗಿಯೂ ಈ ನಾಟಕ ರಂಗಭೂಮಿಯಲ್ಲಿ ಸದ್ದು ಮಾಡಿರುವುದಂತು ನೂರಕ್ಕೆ ನೂರು‌ ಸತ್ಯ. ಕಾಡಗಗ್ಗರ ನಾಟಕ ಯಾವ ವೇದಿಕೆಯಲ್ಲಿ ಸಹ ಆಯೋಜನೆ‌ ಮಾಡಬಹುದು. ಅದಷ್ಟು ಬೇಗ ಐನೂರು ಪ್ರದರ್ಶನವಾಗಲಿ ತಂಡಕ್ಕೆ ಕಲಾ ಮಾತೆಯ‌ ಆಶೀರ್ವಾದವಿರಲಿ. ವಜ್ರದಂತ ಮಿನುಗುವಂತೆ ವಜ್ರದಂತ ತಂಡವೂ ಹೊಳೆಯಲಿ.

ಮೇಲೆ‌ ಹೇಳಿದಂತೆ ತುಳು ರಂಗಭೂಮಿಯಲ್ಲಿ ಕಾಡಗಗ್ಗರದ ಝೇಂಕಾರ. ಇದೊಂದು ದಾಖಲೆಯ ದಂತಕಥೆಯತ್ತ ನಾಟಕ.

  • ಮನ್ಮಥ ಶೆಟ್ಟಿ ಪುತ್ತೂರು
    (ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು)

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page