ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಕರ್ನಾಟಕ ಮೂಲದವರು 4 ಚಿನ್ನ ಸೇರಿದಂತೆ ಒಟ್ಟು 10 ಪದಕಗಳನ್ನು ಗೆದ್ದುಕೊಂಡಿದ್ದಾರೆ. ಪ್ರಣವಿ ಅರಸ್ ಅವರು ಗಾಲ್ಫ್ ವಿಭಾಗದಲ್ಲಿ 1 ಚಿನ್ನ ಹಾಗೂ 1 ಬೆಳ್ಳಿ ಪದಕ ಗೆದ್ದರು. ಇದಕ್ಕೂ ಮೊದಲೇ ಪೊವಮ್ಮ 2 ಪದಕ ಗೆದ್ದಿದ್ದರು. ಅದಲ್ಲದೆ ಬೆಳ್ಳಿ ಪದಕಗೆದ್ದ ಗಾಲ್ಫ್ ತಂಡದಲ್ಲಿ ಬೆಂಗಳೂರಿನ ಅದಿತಿ ಅಶೋಕ್ ಕೂಡ ಇದ್ದರು. ಹಾಕಿ ತಂಡದಲ್ಲಿ ಎಚ್.ಎಸ್. ಮೋಹಿತ್ ಕೂಡ ಇದ್ದರು. ಮಹಿಳೆಯರ 4/100 ರೆಲೇಯಲ್ಲಿ ಕಂಚುಗೆದ್ದ ಮಹಿಳೆಯರ ತಂಡದಲ್ಲಿ ಕೊಪ್ಪದ ಎಸ್.ಎಸ್. ಸ್ನೇಹಾ ಇದ್ದರು. ಉಳಿದಂತೆ ಕಬಡಿ ತಂಡದ ಎರಡೂ ವಿಭಾಗದ ಕೋಚ್‌ಗಳು ಕನ್ನಡುಗರೇ ಆಇರುವುದು ವಿಶೇಷವಾಗಿದೆ. ಪದಕ ಗೆದ್ದಿರುವು ಕರ್ನಾಟಕದ ಅಥ್ಲೀಟ್‌ಗಳಿಗೆ ಶೀಘ್ರವೇ ಸನ್ಮಾನಿಸಲಾಗುವುದು ಎಂದು ಕರ್ನಾಟಕ ಒಲಿಂಪಿಕ್ಸ್ ಸಂಸ್ಥೆಯ ಅಧ್ಯಕ್ಷ ಗೋವಿಂದರಾಜು ತಿಳಿಸಿದ್ದಾರೆ.
ಸೆಪ್ಟೆಂಬರ್ 19ರಂದು ಆರಂಭಗೊಂಡು 15 ದಿನಗಳ ಕಾಲ ನಡೆದ ಐಚಿನಗೋಯಾ ಏಷ್ಯನ್ ಗೇಮ್ಸ್‌ಗೆ ಭಾನುವಾರ ಅದ್ಧೂರಿ ಸಮಾರೋಪ ಸಮಾರಂಭದೊಂದಿಗೆ ತೆರೆ ಬಿದ್ದಿತು. ಏಷ್ಯನ್ ಒಲಿಂಪಿಕ್ ಮಂಡಳಿಯ ಅಧ್ಯಕ್ಷ ಶೇಖ್ ಜುವಾನ್ ಬಿನ್ ಹಮದ್ ಅಲ್ ಥಾನಿ ಕ್ರೀಡಕೂಟ ಮುಕ್ತಾಯಗೊಂಡಿರುವುದಾಗಿ ಘೋಷಿಸಿದರು. 2030ರ ಏಷ್ಯನ್ ಗೇಮ್ಸ್ ಕತಾರ್‌ನ ದೋಹಾದಲ್ಲಿ ನಡೆಯಲಿದ್ದು, ಸಮಾರೋಪ ಸಮಾರಂಭದಲ್ಲಿ ಕ್ರೀಡಾಕೂಟದ ಜ್ಯೋತಿಯನ್ನು ಕತಾರ್ ಪ್ರತಿನಿಧಿಗಳಿಗೆ ಹಸ್ತಾಂತರಿಸಲಾಯಿತು. ಸಾವಿರಾರು ಕ್ರೀಡಾಪಟುಗಳು, ಅಧಿಕಾರಿಗಳು ಹಾಗೂ ಕ್ರೀಡಾಭಿಮಾನಿಗಳು ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡರು. ಒನ್ ಏಷ್ಯಾʼ ಪರಿಕಲ್ಪನೆಯಡಿ ನಡೆದ ಸಮಾರಂಭದಲ್ಲಿ ಎರಡು ಚಿನ್ನ ಹಾಗೂ ಒಂದು ಬೆಳ್ಳಿ ಪದಕ ಗೆದ್ದ ಶೂಟರ್ ನೀರು ಧಾಂಡಾ ಭಾರತದ ದ್ವಜಧಾರಣಿಯಾಗಿ ಕಣ್ಮನ ಸೆಳೆದರು. ಭಾರತದ 21 ಚಿನ್ನ, 27ಬೆಳ್ಳಿ ಹಾಗೂ 37 ಕಂಚು ಸೇರಿ ಒಟ್ಟು 85 ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆಯಿತು. ಚೀನಾ, ಜಪಾನ್ ಹಾಗೂ ಕೊರಿಯಾ ಕ್ರಮವಾಗಿ ಮೊದಲ ಮೂರು ಸ್ಥಾನದಲ್ಲಿದೆ.














