ಏಷ್ಯನ್ ಗೇಮ್ಸ್ ಚಿನ್ನದ ಪದಕ ಗೆದ್ದ ಸೂರಜ್ ಎಚ್ ಕರ್ಕೇರಗೆ ತುಳುವರ ಅಭಿನಂದನೆ!

ಮುಂಬಯಿ : ಜಪಾನ್ ಆತಿಥ್ಯದಲ್ಲಿ ನಡೆಯದ 2026ರ ಏಷ್ಯನ್ ಗೇಮ್ಸ್ ಪುರುಷರ ಹಾಕಿ ವಿಭಾಗದ ಫೈನಲ್ ಪಂದ್ಯದಲ್ಲಿ ಭಾರತದ ತಂಡದ ನಾಯಕ ಹರ್ಮನ್‌ ಪ್ರೀತ್ ಸಿಂಗ್‌ ಭರ್ಜರಿ ಗೆಲುವು ಸಾಧಿಸಿ ಚಿನ್ನದ ಪದಕ ತನ್ನದಾಗಿಸಿಕೊಂಡಿದೆ. ಫೈನಲ್‌ನಲ್ಲಿ ಮಲೇಷ್ಯಾವನ್ನು 5-1 ಗೋಲುಗಳಿಂದ ಸೋಲಿಸಿದ ಭಾರತ, ಏಷ್ಯನ್ ಗೇಮ್ಸ್‌ನಲ್ಲಿ ಸತತ ಎರಡನೇ ಬಾರಿ ಚಾಂಪಿಯನ್‌ ಆಯಿತು.
ಈ ಗೆಲುವಿನೊಂದಿಗೆ ಭಾರತ ಪುರುಷರ ಹಾಕಿ ತಂಡ, ಮೊದಲ ಬಾರಿ ಸತತ ಎರಡು ಏಷ್ಯನ್ ಗೇಮ್ಸ್ ಚಿನ್ನದ ಪದಕಗಳನ್ನು ಗೆದ್ದ ಸಾಧನೆಗೆ ಭಾಜನವಾಯಿತು.

Advertisement

ಭಾರತದ ತಂಡದಲ್ಲಿಮಹಾರಾಷ್ಟ್ರದ ಪ್ರತಿನಿಧಿ ಯಾಗಿ ಸ್ಪರ್ಧಿಸಿದ ತಂಡದ ಗೋಲ್‌ಕೀಪರ್ ಸೂರಜ್ ಎಚ್ ಕರ್ಕೇರ ಭಾರತ ಪಂದ್ಯದುದ್ದಕ್ಕೂ ಆಕ್ರಮಣಕಾರಿ ಆಟ ಪ್ರದರ್ಶಿಸಿದರು. ಮಲೇಷ್ಯಾ ಕೆಲವು ಹಂತಗಳಲ್ಲಿ ಪ್ರತಿರೋಧ ತೋರಿಸಿದರೂ ಭಾರತ ತಂಡ ಚಾಂಪಿಯನ್ ಆಗುವಲ್ಲಿ ಸೂರಜ್ ಸಹ ಪ್ರಮುಖ ಪಾತ್ರ ವಹಿಸಿದ್ದರು. ಸೂರಜ್ ಅವರು ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆದ ಹಾಕಿ ಆಟದಲ್ಲಿ 100 ಭಾರಿ ಗೋಲ್‌ಕೀಪರ್ ಆಗಿ ತಮ್ಮ ಅದ್ಭುತ ಆಟದ ಪ್ರದರ್ಶಿಸಿದ್ದಾರೆ. ಈ ಬಾರಿಯ ಏಷ್ಯನ್ ಗೇಮ್ಸ್ ನಲ್ಲಿ ಸ್ಪರ್ಧಿಸಿ 101 ಬಾರಿ ಆಟವನ್ನು ಆಡಿದ ಅನುಭವ ಅವರದು.

Advertisement

ಸೂರಜ್ ಕರ್ಕೇರಾ ಅವರು ಮಲಾಡ್ ಪೂರ್ವದ ಇರಾನಿ ಕಾಲೋನಿ ಶ್ರೀ ಶನಿಮಹಾತ್ಮ ಪೂಜಾ ಸಮಿತಿಯ ಕಾರ್ಯದರ್ಶಿ ಹರಿಶ್ಚಂದ್ರ ಕರ್ಕೇರ ಹೆಜಮಾಡಿ ಮತ್ತು ಆಶಾಲತಾ ಕರ್ಕೇ ರವರ ಅವರ ಸುಪತ್ರರಾಗಿದ್ದಾರೆ. ಆರ್ಮಿಯಲ್ಲಿ ಉದ್ಯೋಗದಲ್ಲಿ ಯಿದ್ದ ಸೂರಜ್ ಅವರು ಅಕ್ಟೋಬರ್ 5ರಂದು ಮುಂಬೈಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗಮನಿಸಿದ ಸಂದರ್ಭದಲ್ಲಿ ಆರ್ಮಿ ಯೋಧರು ಸ್ವಾಗತಿಸಿದರು. ಬಳಿಕ ಮಲಾಡ್ ಪೂರ್ವದ ಶ್ರೀ ಶನಿಮಂದಿರಕ್ಕೆ ಆಗಮಿಸಿದ ಸಂದರ್ಭದಲ್ಲಿ ಅವರನ್ನು ತುಳು ಕನ್ನಡಿಗರು ಹಾಗೂ ಮಂದಿರದ ಅಧ್ಯಕ್ಷರಾದ ಮೋಹನ್ ಜಿ ಬಂಗೇರ ಮತ್ತಿತರ ಪದಾಧಿಕಾರಿಗಳು ಆತ್ಮೀಯವಾಗಿ ಸ್ವಾಗತಿಸಿದರು ವಿಶೇಷವಾಗಿ ಗೌರವಿಸಿ ಕೇಕ್ ಕತ್ತರಿಸಿ ಅಭಿನಂದಿಸಿದರು..
ಇತ್ತೀಚೆಗೆ ಕುರ್ಲಾ ಪೂರ್ವದ ಬಂಟರ ಭವನದಲ್ಲಿ ನಡೆದ ಜಯ ಸುವರ್ಣ ಅಭಿಮಾನಿಗಳ ಕಾರ್ಯಕ್ರಮದಲ್ಲಿ ಸೂರಜ್ ಅವರನ್ನು ಸನ್ಮಾನಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು ಆದರೆ ಅವರು ಕಾರ್ಯಕ್ರಮಕ್ಕೆ ಬರಲಾಗದಿದ್ದರಿಂದ ಅವರ ಮಾತಾಪಿತರನ್ನು ಸನ್ಮಾನಿಸಲಾಗಿದೆ.

ಚಿತ್ರ ವರದಿ : ದಿನೇಶ್ ಕುಲಾಲ್

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page