ನಾಳೆ ನವರಾತ್ರಿಯ ಐದನೇ ದಿನ! ತಾಯಿ ಸ್ಕಂದಮಾತಾ ದೇವಿಯ ಆರಾಧನೆಯ ಶುಭದಿನ! ಹಳದಿ ಬಣ್ಣವೇ ನಾಳೆಗೆ ಮಂಗಳಕರ!!

“ಸಿಂಹಾಸನ ಗತಾ ನಿತ್ಯಂ ಪದ್ಮಾಶ್ರಿತ ಕರದ್ವಯಾ, ಶುಭದಾಸ್ತು ಸದಾ ದೇವಿ ಸ್ಕಂದಮಾತಾ ಯಶಸ್ವಿನಿ”

Advertisement

ನಾಳೆ ನವರಾತ್ರಿಯ ಐದನೇ ದಿನ! ತಾಯಿ ಸ್ಕಂದಮಾತಾ ದೇವಿಯ ಆರಾಧನೆಯ ಶುಭದಿನ! ಹಳದಿ ಬಣ್ಣವೇ ನಾಳೆಗೆ ಮಂಗಳಕರ!!

Advertisement

ಪುರಾಣಗಳ ಪ್ರಕಾರ, ‘ತಾರಕಾಸುರ’ ಎಂಬ ರಾಕ್ಷಸನು ಶಿವನ ಮಗನಿಂದ ಮಾತ್ರ ತನಗೆ ಸಾವು ಬರಬೇಕೆಂದು ಬ್ರಹ್ಮನಿಂದ ವರ ಪಡೆದು ದೇವತೆಗಳಿಗೆ ಮತ್ತು ಲೋಕಕ್ಕೆ ತೊಂದರೆ ಕೊಡುತ್ತಿದ್ದನು. ಸತೀ ದೇವಿಯ ವಿಯೋಗದ ನಂತರ ಶಿವನು ತಪಸ್ಸಿನಲ್ಲಿದ್ದನು. ದೇವತೆಗಳ ಪ್ರಾರ್ಥನೆಯಿಂದ ಪಾರ್ವತಿ ದೇವಿಯು ಕಠಿಣ ತಪಸ್ಸು ಮಾಡಿ ಶಿವನನ್ನು ಒಲಿಸಿಕೊಂಡು ವಿವಾಹವಾದಳು. ಶಿವ ಮತ್ತು ಪಾರ್ವತಿಯ ಮಗನಾಗಿ ದೇವತೆಗಳ ಸೇನಾಧಿಪತಿಯಾದ ‘ಸ್ಕಂದ’ ಜನಿಸಿದನು. ಪಾರ್ವತಿ ದೇವಿಯು ತನ್ನ ಮಗನಾದ ಸ್ಕಂದನನ್ನು ಪ್ರೀತಿಯಿಂದ ಜೋಪಾನ ಮಾಡಿ, ಯುದ್ಧಕ್ಕೆ ಶಕ್ತಳನ್ನಾಗಿ ಮಾಡಿ ತಾರಕಾಸುರನನ್ನು ಸಂಹಾರ ಮಾಡಲು ಸಜ್ಜುಗೊಳಿಸಿದಳು. ಹೀಗಾಗಿ ಆಕೆಗೆ ಸ್ಕಂದಮಾತಾ ಎಂಬ ಹೆಸರು ಬಂತು.

ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ ಶುಭ್ರವಾದ ಬಟ್ಟೆಗಳನ್ನು ಧರಿಸಬೇಕು. ದೇವರ ಮನೆಯನ್ನು ಗಂಗಾಜಲ ಅಥವಾ ಶುದ್ಧ ನೀರಿನಿಂದ ಪ್ರೋಕ್ಷಿಸಿ ಸ್ವಚ್ಛಗೊಳಿಸಬೇಕು. ದೇವರ ವಿಗ್ರಹ ಅಥವಾ ಭಾವಚಿತ್ರವನ್ನು ಇರಿಸಿ. ತುಪ್ಪ ಅಥವಾ ಎಣ್ಣೆಯ ದೀಪವನ್ನು ಹಚ್ಚಿ, ಧೂಪ ಮತ್ತು ಗಂಧವನ್ನು ಅರ್ಪಿಸಬೇಕು. ದೇವಿಗೆ ಕಮಲದ ಹೂವುಗಳು ಅಥವಾ ಇಷ್ಟವಾದ ಹೂವುಗಳನ್ನು ಅರ್ಪಿಸಬೇಕು. ನೈವೇದ್ಯವಾಗಿ ಬಾಳೆಹಣ್ಣು ಮತ್ತು ಹಾಲಿನಿಂದ ಮಾಡಿದ ಸಿಹಿ ಪದಾರ್ಥಗಳನ್ನು ಸಮರ್ಪಿಸಿ. ದೇವಿಯ ಮಂತ್ರವನ್ನು ಭಕ್ತಿಯಿಂದ ಜಪಿಸಬೇಕು. ನಂತರ ಕರ್ಪೂರ ಹಚ್ಚಿ ಆರತಿ ಬೆಳಗಬೇಕು. ಕೊನೆಗೆ ದೇವಿಗೆ ಅರ್ಪಿಸಿದ ಬಾಳೆಹಣ್ಣು ಮತ್ತು ಪ್ರಸಾದವನ್ನು ಕುಟುಂಬದವರಿಗೆ ಹಾಗೂ ಮಕ್ಕಳಿಗೂ ವಿತರಿಸಿ.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page