ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಇದೇ11 ರಿಂದ 19 ರ ವರೆಗೆ ನವರಾತ್ರಿ ಪ್ರಯುಕ್ತ ವಿಶೇಷ ಕಾರ್ಯಕ್ರಮಗಳು ನಡೆಯಲಿದೆ. ಪ್ರತಿದಿನ ರಾತ್ರಿ ಅಮ್ಮನವರ ಸನ್ನಿಧಿಯಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಸಂಜೆ 6 ಗಂಟೆಯಿಂದ ರಾತ್ರಿ 9ಗಂಟೆಯವರೆಗೆ ದೇವಸ್ಥಾನದ ಎದುರು ಇರುವ ಪ್ರವಚನ ಮಂಟಪದಲ್ಲಿ ನಾಡಿನ ಖ್ಯಾತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.
ಅ. 11 ಭಾನುವಾರ : ಕುಮಾರಿ ಪ್ರಾಪ್ತಿ ಶೆಟ್ಟಿ ದರ್ಮಸ್ಥಳ ಮತ್ತು ಕುಮಾರಿ ಆದ್ವಿ ನಿಡಗಲ್ ಇವರಿಂದ ಭಕ್ತಿಸಂಗೀತ, ಅ. 12 ಸೋಮವಾರ: ಪವಿತ್ರವಿನಯ್ ಮಯ್ಯ ಅರ್ಕುಲ ಮಂಗಳೂರು ಇವರಿಂದ ಸಗಮ ಸಂಗೀತ, ಅ.13 ಮಂಗಳವಾರ: ಕುಮಾರಿ ಮಾನ್ಸಿ ಮೈಸೂರು ಇವರಿಂದ ಭಕ್ತಿಸಂಗೀತ, ಅ.14 ಬುಧವಾರ: ಮಾಸ್ಟರ್ ಆಗಮ ಪೆರ್ಲ ಮಂಗಳೂರು ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ಅ.15 ಗುರುವಾರ: ಕುಮಾರಿ ಧೃತಿ ಬಿ. ಆತ್ರೇಯಾಸ್, ಕುಮಾರಿ ಧನ್ವಿ ಬಿ. ಆತ್ರೇಯಾಸ್ ಮತ್ತು ಅಸ್ರಮೇಯ ಗುರುಪ್ರಸಾದ್ ಬೆಂಗಳೂರು ಇವರಿಂದ ನೃತ್ಯ, ಗಾನಲಹರಿ, ಅ.16 ಶುಕ್ರವಾರ ಸನತ್ ಕುಮಾರ್ ಬೆಂಗಳೂರು ಇವರಿಂದ ವಯಲಿನ್ ವಾದನ, ಅ.17 ಶನಿವಾರ: ಕುಮಾರಿ ಮಯೂರಿ ಭಟ್ ಪೊಳಲಿ ಬಂಟ್ವಾಳ ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ಅ.18 ರವಿವಾರ: ಕುಮಾರಿ ಐಶ್ವರ್ಯ ಜೋಗಿ ಮತ್ತು ತಂಡ ಕುಂದಾಪುರ ಇವರಿಂದ ಸಮಧುರ ಗಾನವೈಭವ, ಅ.19 ಸೋಮವಾರ : ಕುಮಾರಿ ಅರ್ಚಿಷಾ ರಾವ್ ಮತ್ತು ಬಳಗ ಬೆಂಗಳೂರು ಇವರಿಂದ ಸಂಜೆ ಗಂಟೆ 6.30 ರಿಂದ 8.30 ರವರೆಗೆ ಮತ್ತು ಮಲ್ಲಿಕಾಮಟ್ಟಿ ಮತ್ತು ಬಳಗ ಪೊಳಲಿ ಇವರಿಂದ ರಾತ್ರಿ ಗಂಟೆ 9 ರಿಂದ 11.30 ರವರೆಗೆ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಲಿದೆ.














