ಪ್ರಜ್ವಲ್‌ ರೇವಣ್ಣಗೆ ಮೊಬೈಲ್‌ ಶಾಕ್!!‌ ಪರಪ್ಪನ ಅಗ್ರಹಾರ ಜೈಲಿಂದ ಬೆಳಗಾವಿಯ ಹಿಂಡಲಗಾ ಜೈಲಿಗೆ ಮಾಜಿ ಸಂಸದ ಶಿಪ್ಟ್‌!!

ಬೆಂಗಳೂರು : ಮಾಜಿ ಸಂಸದ ಪ್ರಜ್ವಲ್​ ರೇವಣ್ಣ ಅಕ್ರಮವಾಗಿ ಬ್ಯಾರಕ್​​ನಲ್ಲಿ ಮೊಬೈಲ್​ ಬಚ್ಚಿಟ್ಟಿದ್ದ ಆರೋಪ ಹೊತ್ತಿದ್ದ ಅವರಿಗೆ ಇದೀಗ ಬಿಗ್​ ಶಾಕ್ ಎದುರಾಗಿದೆ. ಪ್ರಜ್ವಲ್​ ರೇವಣ್ಣ ಅವರನ್ನ ಪರಪ್ಪನ ಅಗ್ರಹಾರ ಜೈಲಿಂದ ಬೆಳಗಾವಿಯ ಹಿಂಡಲಗಾ ಜೈಲಿಗೆ ಶಿಫ್ಟ್ ಮಾಡಲಾಗುವುದೆಂದು ಕಾರಾಗೃಹ ಇಲಾಖೆ ಡಿಜಿಪಿ ಅಲೋಕ್ ಕುಮಾರ್ ಅವರು ಆದೇಶ ಹೊರಡಿಸಿದ್ದಾರೆ.

Advertisement

ಬೆಂಗಳೂರು ಪೊಲೀಸರು ಕೈದಿಗಳ ಸ್ಥಳಾಂತರಕ್ಕೆ ಮನವಿ ಮಾಡಿದ್ದ ಹಿನ್ನೆಲೆ 6 ಮಂದಿ ಕೈದಿಗಳು ಸೇರಿ ಇಬ್ಬರು ಜೈಲಾಧಿಕಾರಿಗಳನ್ನ ಕೂಡ ಶಿಫ್ಟ್ ಮಾಡಲಾಗಿದೆ. ಇದೀಗ ಬೆಳಗಾವಿಯ ಹಿಂಡಲಗಾ ಜೈಲಿಗೆ ಅತ್ಯಾಚಾರ ಪ್ರಕರಣದ ಅಪರಾಧಿ ಪ್ರಜ್ವಲ್ ರೇವಣ್ಣ ಅವರನ್ನ ಶಿಫ್ಟ್ ಮಾಡಲಾಗ್ತಿದೆ. ಪೊಲೀಸ್​ ಇಲಾಖೆಯು ಜೈಲಿನ ಬ್ಯಾರಕ್​ನಲ್ಲೇ ಮೊಬೈಲ್​ನಲ್ಲಿ ಮಾತಾಡುವ ವಿಡಿಯೋ ವೈರಲ್​ ಆದ ಬಳಿಕ ಇದೀಗ ಪ್ರಜ್ವಲ್​​ಗೆ ಬಿಗ್ ಶಾಕ್​ ಕೊಟ್ಟಿದೆ. ಜೈಲಿಂದಲೇ ಶಿಫ್ಟ್ ಮಾಡಲಾಗ್ತಿದ್ದು, ಪ್ರಜ್ವಲ್ ರೇವಣ್ಣ ಅವರನ್ನ ಇಂದು ಸಂಜೆ ಅಥವಾ ರಾತ್ರಿಯೇ ಕಾರಾಗೃಹ ಇಲಾಖೆ ಸಿಬ್ಬಂದಿ ಹಿಂಡಲಗಾ ಜೈಲಿಗೆ ಕರೆದೊಯ್ಯಲಿದ್ದಾರೆ.

Advertisement
Advertisement

ಇತ್ತೀಚಿಗೆ ಮೊಬೈಲ್ ಫೋನ್ ಹಾಗೂ ಸಿಮ್ ಕಾರ್ಡ್ ಪ್ರಜ್ವಲ್ ರೇವಣ್ಣ ಸೆಲ್​ನಲ್ಲಿ ಪತ್ತೆಯಾಗಿತ್ತು. ಈ ಸಂಬಂಧ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ. ನಂತರ ಪ್ರಜ್ವಲ್ ರೇವಣ್ಣ ಅವರನ್ನ ಪೊಲೀಸರು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ್ದರು. ಮೊಬೈಲ್ ಬಳಕೆ ಸಂಬಂಧ ಬಂಧಿಸಿದ್ದ ಪೊಲೀಸರು. ಮೊಬೈಲ್ ಫೋನ್ ಬಳಕೆ ಬಗ್ಗೆ ಗಂಭೀರವಾಗಿ ಪರಿಗಣಿಸಿದ್ದರು. ಬಳಿಕ ಪ್ರಜ್ವಲ್ ರೇವಣ್ಣ ಸೇರಿದಂತೆ 9 ಮಂದಿಯನ್ನ ಶಿಫ್ಟ್ ಮಾಡಲು ಪೊಲೀಸರು ಸೂಚಿಸಿದ್ರು. ಹೀಗಾಗಿ ಪ್ರಜ್ವಲ್ ರೇವಣ್ಣ ಸೇರಿ ಆರು ಮಂದಿ ವಿವಿಧ ಕಾರಾಗೃಹ ಶಿಫ್ಟ್ ಮಾಡಲಾಗ್ತಿದೆ ಎನ್ನಲಾಗಿದೆ.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page