ಬೆಂಗಳೂರು (ಸೆ.16): ಬೆಂಗಳೂರಿನ ಶಿವಾಜಿನಗರ ಮೆಟ್ರೋ ನಿಲ್ದಾಣಕ್ಕೆ ‘ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ನಿಲ್ದಾಣ‘ ಎಂದು ನಾಮಕರಣ ಮಾಡುವಂತೆ ‘ಬಿಜೆಪಿ ಎಂಎಲ್‌ಸಿ ಡಾ. ಎಂ.ಜಿ. ಮುಳೆ’ ಅವರು ರಾಜ್ಯ ಸರ್ಕಾರಕ್ಕೆ ಪತ್ರದ ಮೂಲಕ ಒತ್ತಾಯಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DyCM DK Shivakumar) ಅವರಿಗೆ ಪತ್ರ ಬರೆದಿರುವ ಮುಳೆ ಅವರು, ಶಿವಾಜಿ ಮಹಾರಾಜರ ಸಾಧನೆ ಮತ್ತು ಈ ಪ್ರದೇಶದ ಜೊತೆಗಿನ ಅವರ ಐತಿಹಾಸಿಕ ಸಂಬಂಧವನ್ನು ವಿವರಿಸಿದ್ದಾರೆ.
ಬೆಂಗಳೂರು (ಸೆ.16): ಬೆಂಗಳೂರಿನ ಶಿವಾಜಿನಗರ ಮೆಟ್ರೋ ನಿಲ್ದಾಣಕ್ಕೆ ‘ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ನಿಲ್ದಾಣ’ ಎಂದು ನಾಮಕರಣ ಮಾಡುವಂತೆ ‘ಬಿಜೆಪಿ ಎಂಎಲ್‌ಸಿ ಡಾ. ಎಂ.ಜಿ. ಮುಳೆ’ ಅವರು ರಾಜ್ಯ ಸರ್ಕಾರಕ್ಕೆ ಪತ್ರದ ಮೂಲಕ ಒತ್ತಾಯಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DyCM DK Shivakumar) ಅವರಿಗೆ ಪತ್ರ ಬರೆದಿರುವ ಮುಳೆ ಅವರು, ಶಿವಾಜಿ ಮಹಾರಾಜರ ಸಾಧನೆ ಮತ್ತು ಈ ಪ್ರದೇಶದ ಜೊತೆಗಿನ ಅವರ ಐತಿಹಾಸಿಕ ಸಂಬಂಧವನ್ನು ವಿವರಿಸಿದ್ದಾರೆ.
ಪತ್ರದಲ್ಲಿ ತಿಳಿಸಿರುವಂತೆ, 17ನೇ ಶತಮಾನದ ಮಹಾನ್ ಚಕ್ರವರ್ತಿ ಛತ್ರಪತಿ ಶಿವಾಜಿ (Chatrapathi Shivaji Maharaj) ಮಹಾರಾಜರು ತಮ್ಮ ಬಾಲ್ಯದ ಬಹುಮುಖ್ಯ ಅವಧಿಯನ್ನು ಶಿವಾಜಿನಗರದಲ್ಲೇ ಕಳೆದಿದ್ದರು. ಇದಕ್ಕೆ ಪ್ರಮುಖ ಕಾರಣ ಅವರ ತಂದೆ ಷಹಾಜಿ ಮಹಾರಾಜರು ಬೆಂಗಳೂರಿನಲ್ಲಿ ಆಳ್ವಿಕೆ ನಡೆಸಿದ ಹಿನ್ನೆಲೆ. ಈ ಐತಿಹಾಸಿಕ ಹಿನ್ನೆಲೆಯಿಂದಲೇ ಅಂದಿನ ಮೈಸೂರು ಮಹಾರಾಜರು (mysore wodeyar Dynasty) ಈ ಪ್ರದೇಶಕ್ಕೆ ‘ಶಿವಾಜಿನಗರ’ (Bengaluru Shivajinagar) ಎಂದು ನಾಮಕರಣ ಮಾಡಿದ್ದರು. ಹೀಗಾಗಿ, ಈ ಪ್ರದೇಶಕ್ಕೆ ಶಿವಾಜಿ ಮಹಾರಾಜರ ಹೆಸರಿನ ಶಾಶ್ವತ ಸಂಬಂಧವಿದೆ ಎಂದು ಮುಳೆ ಅವರು ಅಭಿಪ್ರಾಯಪಟ್ಟಿದ್ದಾರೆ.