ಬಹು ನಿರೀಕ್ಷೆಯ ಬನ ಚಿತ್ರದ ಮೊದಲ ಎರಡು ಪ್ರೀಮಿಯರ್ ಶೋ ಮುಂಬೈನ ಮುಲುಂದ್ ಮತ್ತು ಕಲ್ಯಾಣ್ನಲ್ಲಿ ನಡೆದಿದ್ದು ಅಲ್ಲಿನ ತುಳು ಪ್ರೇಕ್ಷಕರು ಚಿತ್ರದ ಬಗ್ಗೆ ಪ್ರಶಂಸೆಯ ಸುರಿಮಳೆಗೈದಿದ್ದಾರೆ.
ಧರ್ಮದೈವ ಖ್ಯಾತಿ ನಿತಿನ್ ರೈ ಕುಕ್ಕುವಳ್ಳಿ ನಿರ್ದೇಶನಲ್ಲಿ ಇಶಿ ಪ್ರೊಡಕ್ಷನ್ಸ್ನ ಮನೋಹರ್ ರೈ ವೈಪಾಲ ನಿರ್ಮಾಣದಲ್ಲಿ ಮೂಡಿಬಂದಿರುವ ಬಹುನಿರೀಕ್ಷಿತ ಚಿತ್ರಕ್ಕೆ ಜಯಪ್ರಕಾಶ್ ಶೆಟ್ಟಿ (ನ್ಯೂಸ್ ಆಂಕರ್), ರೂಪಾ ವರ್ಕಾಡಿ, ಭವ್ಯ ಪೂಜಾರಿ, ನಿಹಾಲ್ ರೈ ಮೂಮತಾದ ಪ್ರಮುಖರು ಬಣ್ಣ ಹಚ್ಚಿದ್ದಾರೆ.
ಮುಂಬೈ ಪ್ರೇಕ್ಷಕರು ಚಿತ್ರವನ್ನು ಅಪ್ಪಿಕೊಂಡಿದ್ದು, ಕಥೆ, ನಿರ್ದೇಶನ ನೆರೆದಿದ್ದವರ ಮನಸೂರೆಗೊಂಡಿದೆ. ಸಾಕಷ್ಟು ಹೊಸತನದೊಂದಿಗೆ ಮೂಡಿಬಂದಿರುವ ನಮ್ಮ ನಾಡಿನ ಕಥೆ ಇದಾಗಿದ್ದು, ಚಿತ್ರ ಬ್ಲಾಕ್ಬಸ್ಟರ್ ಆಗುವುದರಲ್ಲಿ ಸಂಶಯವಿಲ್ಲ ಎಂಬುದು ಮುಂಬೈ ಪ್ರೀಮಿಯರ್ ಶೋನಲ್ಲಿ ಕೇಳಿಬಂದ ಮಾತುಗಳು.
ಯುವ ಕಲಾವಿದರು ಅದ್ಭುತವಾಗಿ ನಟಿಸಿದ್ದು ಚಿತ್ರದ ಕಥೆ ಎಲ್ಲರ ಗಮನ ಸೆಳೆದಿದೆ. ಇದು ಮೊದಲ ನಾಗ ಆಧಾರಿತ ತುಳುಚಿತ್ರವಾಗಿದ್ದು ಅದ್ಭುತವಾಗಿ ಮೂಡಿಬಂದಿದೆ. ಅಲ್ಲಿನ ಪ್ರೇಕ್ಷಕರ ಪ್ರಕಾರ ಚಿತ್ರವನ್ನು ಕಥೆ ಆವರಿಸಿಕೊಂಡಿದ್ದು ಹಿರಿಯ ಕಿರಿಯ ಕಲಾವಿದರು ತಮ್ಮ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಬಾಬಪ್ರಸಾದ್ ಅರಸ ಹಾಗೂ ನಾಗಕಿರಣ್ ಶೆಟ್ಟಿ ಮುಂಬಯಿ ನೇತೃತ್ವದಲ್ಲಿ ಮುಂಬೈ ಶೋ ಯಶಸ್ವಿಯಾಗಿ ನೆರವೇರಿದೆ. ಶನಿವಾರ ಶೋ ನಡೆದು ಹೌಸ್ಫುಲ್ ಪ್ರದರ್ಶನ ಗೊಂಡ ದಾಖಲೆ ಬನ ಚಿತ್ರದ್ದು. ಚಿತ್ರ ಇದೇ ತಿಂಗಳು 23 ಕ್ಕೆ ಬಿಡುಗಡೆಯಾಗಲಿದೆ.












