ಪುತ್ತೂರಿನ ಜನಸಾಮಾನ್ಯರ ಆರೋಗ್ಯದ ಹಿತದೃಷ್ಠಿಯಿಂದ ಸರಕಾರಿ ಸ್ವಾಮ್ಯದ ಹೃದ್ರೋಗ, ಕ್ಯಾನ್ಸರ್ ಮತ್ತು ನರ ಮಾನಸಿಕ ಚಿಕಿತ್ಸಾ ಕೇಂದ್ರಗಳಾದ ಜಯದೇವ, ಕಿದ್ವಾಯಿ ಮತ್ತು ನಿಮ್ಹಾನ್ಸ್ ಆಸ್ಪತ್ರೆಗಳ ಶಾಖೆಗಳು ಪುತ್ತೂರಿನಲ್ಲಿ ಸ್ಥಾಪನೆಯಾಗಬೇಕೆಂಬ ಆಂದೋಲನವನ್ನು ನಮ್ಮ ಪುತ್ತೂರು ಸರಕಾರಿ ಮೆಡಿಕಲ್ ಕಾಲೇಜು ಹೋರಾಟ ಸಮಿತಿ ಕೈಗೆತ್ತಿಕೊಂಡಿದೆ. ಈ ನಿಟ್ಟಿನಲ್ಲಿ ಆಂದೋಲನದ ಸಂಪೂರ್ಣ ರೂಪುರೇಷೆಗಳನ್ನು ಮಾಧ್ಯಮದ ಮೂಲಕ ಪುತ್ತೂರಿನ ನಾಗರಿಕರ ಮುಂದಿಡುವ ಉದ್ದೇಶದಿಂದ, ಹೋರಾಟ ಸಮಿತಿಯು ಶಕ್ತಿ ಬಿಂದು ಪ್ರಸ್ತುತಿಯನ್ನು (Power Point Presentation) ಪ್ರಸ್ತುತಪಡಿಸಲು ಉದ್ದೇಶಿಸಿದೆ ಎಂದು ಪುತ್ತೂರು ಸರಕಾರಿ ಮೆಡಿಕಲ್ ಕಾಲೇಜು ಹೋರಾಟಯ ಪ್ರಧಾನ ಕಾರ್ಯದರ್ಶಿ ಝೇವಿಯರ್ ಡಿ’ ಸೋಜ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾರ್ಯಕ್ರಮವು ಅಕ್ಟೋಬರ್ 12 ಸೋಮವಾರದಂದು ಬೆಳಿಗ್ಗೆ 11.30 ಗಂಟೆಗೆ ಪುತ್ತೂರಿನ ಮಂಜಲ್ಪಡ್ಪುವಿನಲ್ಲಿರುವ ಸುದಾನ ದೇವಾಲಯದ ಎಡ್ವರ್ಡ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.














