ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದು ಹಾಗೂ ಹೆಚ್ಚುತ್ತಿರುವ ಉಗ್ರ ದಾಳಿಗಳನ್ನು ಉಲ್ಲೇಖಿಸಿ ಪಾಕಿಸ್ಥಾನದ ವಾಯವ್ಯ ಭಾಗದ ಖೈಬರ್ ಪಖ್ತುಂಖ್ವಾ ಪ್ರಾಂತದಲ್ಲಿ ಅಧ್ಯಕ್ಷ ಆಸಿಫ್ ಅಲಿ ಜುರ್ದಾರಿ ಅವರು ರವಿವಾರ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ. ಆ ಮೂಲಕ ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಿಟಿಐ ಪಕ್ಷದ ಪ್ರಾಂತೀಯ ಸರಕಾರ ಅಧಿಕೃತ ಕಳೆದುಕೊಂಡಿದೆ ಎಂದು ಪತ್ರಿಕಾ ಮೂಲಗಳು ವರದಿ ಮಾಡಿವೆ.
ಇಮ್ರಾನ್ಖಾನ್ ಬಿಡುಗಡೆಗೆ ಆಗ್ರಹಿಸಿ ಹಾಗೂ ಅವರಿಗೆ ವೈದ್ಯಕೀಯ ಚಿಕಿತ್ಸೆ ನೀಡುವಂತೆ ಒತ್ತಾಯಿಸಿ ಸಿಎಂ ಸೊಹೈಲ್ ಅಫ್ರಿದಿ ನೇತೃತ್ವದಲ್ಲಿ ಅ.4 ರಿಂದ ಪ್ರತಿಭಟನೆಗಳು ನಡೆದಿದ್ದವು. ಸರಕಾರದ ಜೊತೆಗಿನ ಮಾತುಕತೆ ವಿಫಲದ ಹಿನ್ನಲೆಯಲ್ಲಿ ಈ ಬಿಕ್ಕಟ್ಟು ತೀವ್ರಗೊಂಡಿತು.
ಸಂವಿಧಾನದ 232(1) ಮತ್ತು 234(1) ವಿಧಿಗಳ ಅಡಿಯಲ್ಲಿ ಅಧ್ಯಕ್ಷರು ತುರ್ತು ಪರಿಸ್ಥಿತಿ ಘೋಷಣೆ ಹೊರಡಿಸಿದ್ದು, ಇದರ ಬೆನ್ನಲ್ಲೇ ಪ್ರಾಂತ್ಯದ ಸಿಎಮ ಸೇರಿದಂತೆ ಎಲ್ಲ ಸಚಿವರು, ಸಲಹೆಗಾರರು ಹಾಗೂ ಅಡ್ವೋಕೆಟ್ ಜನರಲ್ ತಕ್ಷಣವೇ ತಮ್ಮ ಹುದ್ದೆಗಳನ್ನು ಕಳೆದುಕೊಂಡಿದ್ದಾರೆ. ಕೇಂದ್ರ ಸರಕಾರದ ಈ ಕ್ರಮವನ್ನು ಪಿಟಿಐ ಸಂಪೂರ್ಣವಾಗಿ ತಿರಸ್ಕರಿಸಿದೆ ಎಂದು ವರದಿಯಾಗಿದೆ.












