ಪರೀಕ್ಷೆಯ ದಿನ ಸಾರ್ವಜನಿಕ ರ‍್ಯಾಲಿಗಳಿಗೆ ಅವಕಾಶ ನೀಡಬಾರದು! ಮಹತ್ವದ ನಿರ್ಧಾರ ಪ್ರಕಟಿಸಿದ ಸಂಸದೀಯ ಸ್ಥಾಯಿ ಸಮಿತಿ!!

ಪರೀಕ್ಷೆಗಳು ನಡೆಯುವ ದಿನ ಸಾರ್ವಜನಿಕ ರ‍್ಯಾಲಿಗಳಿಗೆ ಅವಕಾಶ ನೀಡಬಾರದು, ತಡವಾಗಿ ಬರುವ ವಿದ್ಯಾರ್ಥಿಗಳಿಗೂ ಅವಕಾಶ ಮಾಡಿಕೊಡಬೇಕು ಎಂಬುವುದು ಸೇರಿದಂತೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ನಡೆಸುವ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಸಂಸದೀಯ ಸ್ಥಾಯಿ ಸಮಿತಿ ಕೆಲವು ಶಿಫಾರಸಗಳನ್ನು ಸೂಚಿಸಿದೆ.

Advertisement

ಸ್ಪರ್ಧಾತ್ಮಕ ಪರೀಕ್ಷೆಗಳ ದಿನದಂದು ಸಾರ್ವಜನಿಕ ಮೆರವಣಿಗೆಗಳು, ರ‍್ಯಾಲಿಗಳು ಮತ್ತು ದೊಡ್ಡ ಸಭೆಗಳನ್ನು ನಿಷೇಧಿಸಬೇಕು. ಸಂಚಾರ ದಟ್ಟಣೆ ಕಡಿಮಡ ಮಾಡಲು ಜಿಲ್ಲಾಡಳಿತವು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಶಿಫಾರಸ್ಸು ಮಾಡಿದೆ.
ಜತೆಗೆ ಅನಿವಾರ್ಯ ಕಾರಣಗಳಿಂದ ಕೆಲವೇ ನಿಮಿಷಗಳು ತಡವಾಗಿ ಬರುವ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು. ಮೇಲ್ವಿಚಾರಕರು ಸಹಿ ಹಾಕುವುದು ಅಥವಾ ದಾಖಲೆಗಳನ್ನು ಪರಿಶೀಲಿಸಲು ಪರೀಕ್ಷೆಯ ಸಮಯದ ಹೊರತಾಗಿ ಪ್ರತ್ಯೇಕವಾಗಿ 15 ನಿಮಿಷಗಳನ್ನು ಮೀಸಲಿಡಬೇಕು ಎಂದು ತಿಳಿಸಿರುವುದಾಗಿ ಮೂಲಗಳು ವರದಿ ಮಾಡಿವೆ.

Advertisement
Advertisement

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page