ಎಸ್‌ಐಟಿಯಿಂದ ಸೌಜನ್ಯ ಕೇಸ್‌ ಮರುತನಿಖೆ! ಮಂಗಳೂರಿನ ತನಿಖಾ ತಂಡದ ಕಚೇರಿಯಲ್ಲಿ ನಡೆದ ಮಹತ್ವಪೂರ್ಣ ಸಭೆ!!

ಮಂಗಳೂರು: ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆ ಎಸ್‌ಐಟಿಯಿಂದ ನಡೆಯುತ್ತಿದ್ದು, ಮಂಗಳೂರಿನಲ್ಲಿರುವ ಎಸ್‌ಐಟಿ ಕಚೇರಿಯಲ್ಲಿ ಮಹತ್ವಪೂರ್ಣ ಸಭೆ ನಡೆದಿದೆ. ಎಸ್‌ಐಟಿ ಮುಖ್ಯಸ್ಥ ಶಶಿಕುಮಾರ್‌ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೇಸ್‌ನ ಮುಂದಿನ ಹಂತಗಳ ರೂಪುರೇಷೆಗಳ ಕುರಿತು ಚರ್ಚಿಸಲಾಗಿದೆ ಎಂದು ತಿಳಿದು ಬಂದಿದೆ.

Advertisement

ಐಪಿಎಸ್‌ ಅಧಿಕಾರಿಗಳಾದ ನಿಸಾ ಜೇಮ್ಸ್‌, ಲೋಕೇಶ್‌ ಜಗಲ್ಸಾರ್‌ ಹಾಗೂ ಮಂಗಳೂರು ಪೊಲೀಸ್‌ ಆಯುಕ್ತ ಸುಧೀರ್‌ ಕುಮಾರ್‌ ರೆಡ್ಡಿ ಕಛೇರಿಲ್ಲಿದ್ದು, ಈಗಾಗಲೇ ಅಧಿಕಾರಿಗಳಿಗೆ ತನಿಖೆಯ ವಿವಿಧ ಜವಾಬ್ದಾರಿಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

Advertisement
Advertisement

ಮುಂದಿನ ದಿನಗಳಲ್ಲಿ ಈ ಕೇಸ್‌ಗೆ ಸಂಬಂಧಪಟ್ಟವರ ವಿಚಾರಣೆ ನಡೆಲಿದ್ದು ಇದಕ್ಕಾಗಿ ಎಸ್‌ಐಟಿ ಬೆಳ್ತಂಗಡಿಗೆ ತೆರಳಲಿದೆ ಎಂದು ಮಾಹಿತಿ ದೊರೆತಿದೆ. 14 ವರ್ಷಗಳ ಹಿಂದೆ ನಡೆದಿದ್ದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆ ಇದೀಗ ಮತ್ತೆ ಚುರುಕಾಗಿದ್ದು, ಮುಂದಿನ ಬೆಳವಣಿಗೆಗಳ ಕುರಿತು ಇನ್ನಷ್ಟೇ ಕಾದು ನೋಡಬೇಕಾಗಿದೆ.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page