ಜಮ್ಮು-ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ನುಸುಳುಕೋರ ಉಗ್ರರನ್ನು ಪಾಕಿಸ್ಥಾನದ ಗಡಿಯಿಂದ ತಡೆಯಲು ಭಾರತೀಯ ಸೇನೆ ಅಳವಡಿಸಿದ್ದ ನೆಲಬಾಂಬ್ ಸ್ಫೋಟಕ್ಕೆ ಸಿಲುಕಿ ಲಷ್ಕರ್ ಕಮಾಂಡರ್ ಸೇರಿ 4 ಉಗ್ರರು ಸಾವಿಗೀಡಾಗಿದ್ದಾರೆಂದು ವರದಿಯಾಗಿದೆ.
ಈ ಸ್ಫೋಟವು ಪಾಕಿಸ್ಥಾನ ಮತ್ತು ಭಾರತದ ನಡುವಿನ ಕೃಷ್ಣಾ ಘಾಟಿ ಸೆಕ್ಷನ್ನಲ್ಲಿರುವ ಗಡಿ ನಿಯಂತ್ರಣ ರೇಖೆಯ ಬಳಿ ಸಂಭಿವಿಸಿದೆ. ಒಳನುಸುಳಲು ಉಗ್ರರು ಈ ಪ್ರದೇಶದಲ್ಲಿ ಗಡಿಯಲ್ಲಿ ಯತ್ನಿಸಿದ್ದಾರೆ. ಈ ಸಮಯದಲ್ಲಿ ನೆಲಬಾಂಬ್ ಸ್ಫೋಟಗೊಂಡಿದೆ. ಉಗ್ರರನ್ನು ಲಷ್ಕರ್ನ ಉನ್ನತ ಕಮಾಂಡರ್ ಮುಹಮ್ಮದ್ ಫೈಜಾನ್, ಮುಹಮ್ಮದ್ ಇತ್ತಿಯಾಕ್, ಮುಹಮ್ಮದ್ ವಕಾಸ್ ಮತ್ತು ಮುಹಮ್ಮದ್ ಆಸಿಮ್ ಎಂದು ಗುರುತಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾಗಿ ಮಾಧ್ಯಗಳು ಹೇಳಿವೆ.












