ಕಾಕ್ರೋಚ್ ಜನತಾ ಪಾರ್ಟಿಯ (ಸಿಜೆಪಿ) ಸಂಸ್ಥಾಪಕ ಅಭಿಜಿತ್ ದೀಪ್ಕೆ ಅವರ ಅಜ್ಜಿ (ತಂದೆಯ ತಾಯಿ) ನಿಧನರಾದ ಸಂದರ್ಭದಲ್ಲಿ ದೀಪ್ಕೆ ಅವರು ಪೊಲೀಸ್ ವಶದಲ್ಲಿದ್ದರು.
ಆ ನಂತರ ನಡೆದ ಬೆಳವಣಿಗೆಯಲ್ಲಿ ಅಭಿಜಿತ್ ದೀಪ್ಕೆ ಅವರು ತಮ್ಮ ಅಜ್ಜಿ ನಿಧನದ ವಿಷಯ ಪೊಲೀಸ್ ಇಲಾಖೆ ತನ್ನ ಬಳಿ ಮಾಹಿತಿ ನೀಡಲಿಲ್ಲ ಎಂದು ಕಣ್ಣೀರಿಟ್ಟ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು.
ಇದೀಗ ಪೊಲೀಸ್ ಇಲಾಖೆ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ಪೊಲೀಸ್ ಠಾಣೆಯಲ್ಲಿ ಅಭಿಜಿತ್ ವಶದಲ್ಲಿರುವಾಗ ಪೊಲೀಸರು ಬಂದು ದೀಪ್ಕೆ ಅಜ್ಜಿ ನಿಧನರಾದ ಸಂಗತಿಯನ್ನು ತಿಳಿಸಿದರು. ಜೊತೆಗೆ ಅಂತ್ಯಕ್ರಿಯೆಗೆ ತೆರಳಲು ಬೇಕಾದ ವ್ಯವಸ್ಥೆಯನ್ನು ಕಲ್ಪಿಸುವುದಾಗಿಯೂ ಹೇಳಿದರು. ಆದರೆ ದೀಪ್ಕೆ ತಾನು ಅಂತ್ಯಕ್ರಿಯೆಗೆ ಹೋಗುವುದಿಲ್ಲವೆಂದು ಹೇಳುತ್ತಾರೆ. ನಾಳೆ ಅಂತ್ಯಕ್ರಿಯೆ ನಡೆಯುಯುವುದು, ಯೋಚನೆ ಮಾಡಿ ನಿರ್ಧಾರ ಕೈಗೊಳ್ಳಿ ಎಂದು ಪೊಲೀಸರು ಮತ್ತೆ ವಿನಂತಿಸಿದಾಗ, ಯಾವುದೂ ಬೇಡ ಇಂದೇ ಅಂತ್ಯಕ್ರಿಯೆ ನಡೆಸಲಿ. ತಾನು ಮಾತ್ರ ತೆರಳುವುದಿಲ್ಲವೆಂದು ಖಡಾಖಂಡಿತವಾಗಿ ಅಭಿಜಿತ್ ನಿರಾಕರಿಸುತ್ತಾರೆ.
ಇದೀಗ ಪೊಲೀಸರು ಅಧಿಕೃತವಾಗಿ ಬಿಡುಗಡೆ ಮಾಡಿರುವ ಈ ವಿಡಿಯೋ ಸಾಕಷ್ಟು ವೈರಲ್ ಆಗಿದ್ದು, ಸಾರ್ವಜನಿಕರು ಅಭಿಜಿತ್ ದೀಪ್ಕೆ ಮಾಧ್ಯಮಗಳ ಮುಂದೆ ನಾಟಕವಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಡಿಸಿದ್ದಾರೆ. ಒಟ್ಟಿನಲ್ಲಿ ಪೊಲೀಸರ ಮಾನವೀಯತೆಯ ಕುರಿತೇ ಪ್ರಶ್ನೆ ಮಾಡಿದ್ದ ಕಾಕ್ರೋಚ್ ಜನತಾ ಪಾರ್ಟಿಗೆ ಇದು ನುಂಗಲಾರದ ತುಪ್ಪವಾಗಿದೆ.












