ಕಾಸರಗೋಡು : ಕೆಲಸಕ್ಕೆಂದು ತೆರಳಿದ ತೃಕ್ಕರೀಪುರ ಬೀರಿಚ್ಚೇರಿ ನಿವಾಸಿ ಸುಮಾರು 60ರ ಹರೆಯದ ವ್ಯಕ್ತಿಯು ನೆರೆಮನೆಯ ಆರರ ಹರೆಯದ ಬಾಲಕಿಗೆ ಕಿರುಕುಳ ನೀಡಲು ಪ್ರಯತ್ನಿಸಿರುವುದಾಗಿ ದೂರು ನೀಡಲಾಗಿದೆ. ಪಡನ್ನ ಪಂಚಾಯತ್ ವ್ಯಾಪ್ತಿಯ ಪ್ರದೇಶವೊಂದರಲ್ಲಿ ಘಟನೆ ನಡೆದಿದ್ದು, ಮನೆಗೆ ಬಂದ ಬಾಲಕಿ ವಿಷಯ ತಿಳಿಸಿದ್ದಾಳೆ ಎಂದು ಹೇಳಲಾಗಿದೆ.
ಈ ಸಂಬಂಧ ಪೋಕ್ಸೋ ಪ್ರಕಾರ ಕೇಸ್ ದಾಖಲಿಸಿಕೊಂಡ ಚಂದೇರ ಠಾಣಾ ಪೊಲೀಸರು ಆರೋಪಿಯನ್ನು ಬಂದಿಸಿದ್ದಾರೆ.












