ಸಮಾಜಮುಖಿ ಚಟುವಟಿಕೆಗಳಿಗೆ ಯು.ಜಿ. ರಾಧಾ ವಿದಾಯ! ಉಪ್ಪಿನಂಗಡಿ ಶ್ರೀರಾಮ ಶಾಲೆಯ ಶೈಕ್ಷಣಿಕ ಹರಿಕಾರ!!

ಉಪ್ಪಿನಂಗಡಿಯ ಶ್ರೀರಾಮ ಶಾಲೆ ಮತ್ತು ಇಂದ್ರಪ್ರಸ್ಥ ವಿದ್ಯಾಲಯದ ಸಂಚಾಲಕರಾಗಿ, ಸಂಚಾಲಕರಾಗಿ, ಮಾಧವ ಶಿಶುಮಂದಿರದ ಅಧ್ಯಕ್ಷರಾಗಿ, ವರ್ತಕ ಸಂಘದ ಅಧ್ಯಕ್ಷರಾಗಿ, 34ನೇ ನೆಕ್ಕಿಲಾಡಿ ಗ್ರಾಮದ ಶಾಂತಿನಗರ ಶ್ರೀ ಮಹಾವಿಷ್ಣು ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದ ಕೋಡಿಂಬಾಡಿ ಗ್ರಾಮದ ಶಾಂತಿನಗರ ಸಮೀಪದ ಕಲ್ಪನೆ ನಿವಾಸಿ ಯು.ಜಿ. ರಾಧ ಅವರು ಎಲ್ಲಾ ಸಮಾಜಮುಖಿ ಚಟುವಟಿಕೆಗಳಿಂದ ದೂರವಾಗಲು ತೀರ್ಮಾನಿಸಿದ್ದಾರೆ ಎಂದು ತಿಳಿದು ಬಂದಿದೆ.
ಉಪ್ಪಿನಂಗಡಿಯ ಬ್ಯಾಂಕ್ ರಸ್ತೆಯಲ್ಲಿರುವ ಕೈಲಾರ್ ಮೆಡಿಕಲ್‌ನ ಮಾಲಕರಾಗಿರುವ ಇವರು ತಮ್ಮ ಕೌಟುಂಬಿಕ ಜೀವನಕ್ಕೆ ಆದ್ಯತೆ ನೀಡುವ ಹಿನ್ನೆಲೆಯಲ್ಲಿ ಸಮಾಜ ಸೇವೆಯಿಂದ ದೂರವಾಗಲು ನಿರ್ಧಾರ ಕೈಗೊಂಡಿದ್ದಾರೆ. ಮೂಲತಃ ಕಾಸರಗೋಡು ಜಿಲ್ಲೆಯ ಅಡೂರು ಗ್ರಾಮದವರಾದ ಯು.ಜಿ.ರಾಧ ಅವರು ಉದ್ಯೋಗ ನಿಮಿತ್ತ 1992ನೇ ಇಸವಿಯಲ್ಲಿ ಉಪ್ಪಿನಂಗಡಿಗೆ ಆಗಮಿಸಿದ್ದರು. 2004ರಲ್ಲಿ ಶಾಂತಿನಗರ ಸಮೀಪದ ಕಲ್ಪನೆಯಲ್ಲಿ ಜಾಗ ಖರೀದಿಸಿದ್ದ ಯು.ಜಿ. ರಾಧ ಅವರು ಪತ್ನಿ ಸಾಯಿಗೀತಾ ಮತ್ತು ಪುತ್ರ ಅಚಲ್ ಗೋವಿಂದ ಅವರೊಂದಿಗೆ ಪ್ರಸ್ತುತ ಇಲ್ಲಿಯೇ ವಾಸವಿದ್ದಾರೆ.

Advertisement

ತಾನು ಸಾರಥ್ಯ ವಹಿಸಿದ್ದ ಸಂಸ್ಥೆಗಳಲ್ಲಿ ಶಿಸ್ತಿನಿಂದ ಕಾರ್ಯ ನಿರ್ವಹಿಸಿದ್ದ ಯು.ಜಿ. ರಾಧ ಅವರು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಅಲ್ಲದೆ ತನ್ನೊಂದಿಗಿರುವವರನ್ನು ಸಮಾಜಸೇವೆಗೆ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸುತ್ತಿದ್ದರು. ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಇವರು ವಿವಿಧ ದೇವಸ್ಥಾನಗಳ ಬ್ರಹ್ಮಕಲಶೋತ್ಸವದಲ್ಲಿ ಕೈ ಜೋಡಿಸಿದ್ದರಲ್ಲದೆ ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಳ್ಳಲು ಪ್ರೇರಣೆ ನೀಡುತ್ತಿದ್ದರು. ಜತೆಗೆ ಮೂಢನಂಬಿಕೆ, ಕಂದಾಚಾರಗಳ ಬಗ್ಗೆ ಜನಜಾಗೃತಿ ಮೂಡಿಸುತ್ತಿದ್ದಾರೆ. ಉತ್ತಮ ಸಂಘಟಕ, ಭಾಷಣಗಾರರಾಗಿಯೂ ಗುರುತಿಸಿಕೊಂಡಿರುವ ಯು.ಜಿ. ರಾಧ ಅವರು ಸದ್ಯಕ್ಕೆ ಸಮಾಜ ಸೇವೆಯಿಂದ ದೂರು ಸರಿಯಲು ತೀರ್ಮಾನಿಸಿದ್ದಾರೆ.

Advertisement

ಆರ್‌ಎಸ್‌ಎಸ್‌ ಹಿರಿಯ ನಾಯಕ ಡಾ. ಪ್ರಭಾಕರ ಭಟ್ ಕಲ್ಲಡ್ಕ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಯು.ಜಿ.ರಾಧ ಅವರು ಉಪ್ಪಿನಂಗಡಿಯ ಶ್ರೀರಾಮ ಶಾಲೆಯ ಬೆಳವಣಿಗೆಯಲ್ಲಿ ಸುಮಾರು 18 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಶಾಲೆಯ ಅಭಿವೃದ್ಧಿಗಾಗಿ ಸುಮಾರು ಎರಡು ಲಕ್ಷ ಕಿ.ಮೀ. ಪ್ರಯಾಣಿಸಿ ನಾಲ್ಕು ಕೋಟಿಗೂ ಅಧಿಕ ಮೊತ್ತದ ಸಂಪನ್ಮೂಲ ಸಂಗ್ರಹಕ್ಕೆ ಶ್ರಮಿಸಿದ್ದರು. ಕನ್ನಡ ಮಾಧ್ಯಮದ ಗುಣಮಟ್ಟದ ಶಿಕ್ಷಣ, ಆಧುನಿಕ ಸೌಲಭ್ಯಗಳು ಮತ್ತು ಸಂಸ್ಕಾರಯುತ ಕಲಿಕೆಗೆ ಕೊಡುಗೆ ನೀಡಿದ್ದರು. ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಶೈಕ್ಷಣಿಕ ಚಟುವಟಿಕೆಗಳನ್ನು ಉಪ್ಪಿನಂಗಡಿಯಲ್ಲಿ ವಿಸ್ತರಿಸುವ ಕಾರ್ಯದಲ್ಲಿ ಅವರು ದೀರ್ಘ ಕಾಲ ತೊಡಗಿಸಿಕೊಂಡಿದ್ದರು. ಕಾನೂನು, ಆಡಳಿತಾತ್ಮಕ ತೊಡಕು, ಹಣಕಾಸಿನ ಸವಾಲು, ಸಂಪನ್ಮೂಲಗಳ ಕೊರತೆ, ಅಪನಂಬಿಕೆ ಮತ್ತು ಟೀಕೆಗಳನ್ನು ಎದುರಿಸಿ ಶೈಕ್ಷಣಿಕ ಸೇವೆ ಮಾಡಿದ್ದರು. ಶಿಶುಮಂದಿರ ಮತ್ತು ಶ್ರೀರಾಮ ಶಾಲೆಯ ಬೆಳವಣಿಗೆಗೆ ಭದ್ರ ಬುನಾದಿ ಹಾಕಿದ್ದರು ಎಂಬುದು ಗಮನಾರ್ಹ.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page