ಬೆಂಗಳೂರು : ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ರಾಜ್ಯದಲ್ಲಿ ಯಾವುದೇ ಕ್ಷಣದಲ್ಲಿ ವಿಧಾನಸಭಾ ಚುನಾವಣೆ ನಡೆದರೂ ಈಗಿನ ಕೆಲ ಸಚಿವರೂ ಸೇರಿ 25ಕ್ಕೂ ಹೆಚ್ಚು ಶಾಸಕರು ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಲು ತುದಿಗಾಲ ಮೇಲೆ ನಿಂತಿದ್ದಾರೆ ಎಂದು ಹೇಳಿದ ಬೆನ್ನಲ್ಲೇ ಇದೀಗ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ವಿಜಯೇಂದ್ರ ಕಾಂಗ್ರೆಸ್ ತೊರೆದು ಬಿಜೆಪಿ ಸೇರಲು ತುದಿಗಾಲಿನಲ್ಲಿ ನಿಂತಿರುವವರನ್ನು ಬೇಗ ಕರೆದುಕೊಳ್ಳಲಿ, ಲೇಟ್ ಮಾಡೋದು ಬೇಗ ಕುಮಾರಸ್ವಾಮಿಯ ಹಾಗೂ ವಿಜಯೇಂದ್ರ ಇಬ್ಬರಿಗೂ 12 ಜನ ಯಾರಿಗೆ ಕ್ರಾಸ್ ಓಟ್ ಮಾಡಿದ್ದಾರೆ ಅಂತ ಹೇಳಲು ಆಗಿಲ್ಲ. ಅಲ್ಲಿನವರೇ ಬಿಜೆಪಿ ಸರಿಯಿಲ್ಲ ಅಂತ ಹೇಳಿ ಕಾಂಗ್ರೆಸ್ ಪಕ್ಷಕ್ಕೆ ಅಭ್ಯರ್ಥಿ ಓಟ್ ಹಾಕಿದ್ದಾರೆ. ಅದು ಗುಪ್ತ ಮತದಾನ. ಮೊದಲು ಲೇಟ್ ಮಾಡೋದು ಬೇಡ ಸೇರಿಸಿಕೊಳ್ಳಲು ಹೇಳಿ. ವಿಜಯೇಂದ್ರ ಟೈಮ್ ವೆಸ್ಟ್ ಮಾಡೋದು ಬೇಡ ಎಂದು ವ್ಯಂಗ್ಯವಾಡಿದ್ದಾರೆ.
ಮುಂದಿನ ಬೆಳವಣಿಗೆಗಳ ಕುರಿತು ಇನ್ನಷ್ಟೇ ಕಾದು ನೋಡಬೇಕಾಗಿದೆ.












