ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಹುಲ್ ಗಾಂಧಿ ಅವರಿಗೆ 2029 ರಲ್ಲಿ ಮತ್ತೊಂದು ಮಹಾ ಸೋಲಿಗೆ ಸಿದ್ಧರಾಗಿರಿ ಎಂದು ಹೇಳಿದ್ದಾರೆ.
ಚುನಾವಣಾ ಆಯೋಗ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಇಂಡಿಯಾ ಕೂಟ ನಡೆಸುತ್ತಿರುವ ಪ್ರತಿಭಟನೆಗಳ ಬೆನ್ನಲ್ಲೇ ಈ ಬಗ್ಗೆ ಮಾತನಾಡಿದ ಅಮಿತ್ ಶಾ, 2029 ರ ಲೋಕಸಭಾ ಚುನಾವಣೆಯಲ್ಲಿ ಎನ್ಡಿಎ ಭರ್ಜರಿ ಜಯ ಸಾಧಿಸಲಿದೆ ಹಾಗೂ ಕಾಂಗ್ರೆಸ್ ಸತತ 4ನೇ ಬಾರಿಗೆ ಸೋಲಿನ ರುಚಿ ನೋಡಲಿದೆ ಎಂದರು.
2024 ರ ಬಳಿಕ ಎಸ್ಐಆರ್ ನಡೆಯುತ್ತಿರುವುದು. ಆದರೆ ರಾಹುಲ್ ಗಾಂಧಿ ನೇತೃತ್ವ ವಹಿಸಿಕೊಂಡಾಗಿನಿಂದಲೂ ಕಾಂಗ್ರೆಸ್ ಸೋಲುತ್ತಲೇ ಬಂದಿದೆ. ಹಾಗಾಗಿ ಎಸ್ಐಆರ್ ಅನ್ನು ದೂಷಿಸುವುದು ಬಿಟ್ಟು, ಕಾಂಗ್ರೆಸ್ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಹೇಳಿದರು. ಈ ದೇಶದ ಜನ ನರೇಂದ್ರ ಮೋದಿ ಅವರ ಜತೆ ಇದ್ದಾರೆ, ಬಿಜೆಪಿಯ ಜತೆಗಿದ್ದಾರೆ. ಈ ಸತ್ಯವನ್ನು ನೀವು ಅಲ್ಲಗಳೆಯಲಾಗುವುದಿಲ್ಲ ಎಂದು ಹೇಳಿದ್ದಾರೆ.












