ಪುತ್ತೂರು : ಹೆವೆಲ್ಸ್ ಕಂಪನಿಯ ಪುತ್ತೂರಿನ ಏಕೈಕ ಅಧಿಕೃತ ಡೀಲರ್ ಮೈತ್ರಿ ಎಲೆಕ್ಟ್ರಾನಿಕ್ಸ್ ಕಂಪನಿಯಲ್ಲಿ ನೂತನ ಹೆವೆಲ್ಸ್ ಎಕ್ಸ್‌ಪೀರಿಯನ್ಸ್ ಸೆಂಟರ್ ಅ.15 ರಂದು ಶುಭಾರಂಭಗೊಂಡಿದೆ. ಪುತ್ತೂರಿನ ಮುಖ್ಯರಸ್ತೆಯ ಮೊಳಹಳ್ಳಿ ಶಿವರಾಯ ರಸ್ತೆಯಲ್ಲಿರುವ ಸುಶಾ ಚೇಂಬರ್ಸ್ ಕಟ್ಟಡದಲ್ಲಿ ಈ ನೂತನ ಸೆಂಟರ್ ಆರಂಭಗೊಂಡಿದ್ದು, ಗ್ರಾಹಕರಿಗೆ ಹೆವೆಲ್ಸ್ ಕಂಪನಿಯ ವಿವಿಧ ಉತ್ಪನ್ನಗಳನ್ನು ಒಂದೇ ಸೂರಿನಡಿ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ.
ದೀಪ ಬೆಳಗಿಸುವ ಮೂಲಕ ಸೆಂಟರ್ ಉದ್ಘಾಟಿಸಿ ಮಾತನಾಡಿದ ಮಾಸ್ಟರ್ ಪ್ಲಾನರಿಯ ಪಾಲುದಾರ ಅರ್ಜುನ್, ಸಣ್ಣ ಅಂಗಡಿಯಿಂದ ಉದ್ಯಮ ಆರಂಭಿಸಿ, ಗುಣಮಟ್ಟದ ಉತ್ಪನ್ನಗಳನ್ನು ಗ್ರಾಹಕರಿಗೆ ಒದಗಿಸುವ ಮೂಲಕ ಮಾಲಕ ರವಿ ನಾರಾಯಣ ಅವರು ಇಂದು ದೊಡ್ಡ ಮಟ್ಟದಲ್ಲಿ ಬೆಳೆದಿದ್ದಾರೆ. ಅವರ ಉದ್ಯಮ ಇನ್ನಷ್ಟು ಅಭಿವೃದ್ಧಿ ಹೊಂದಲಿ ಎಂದು ಶುಭ ಹಾರೈಸಿದರು.
ಮಾಸ್ಟರ್ ಪ್ಲಾನರಿಯ ಇನ್ನೋರ್ವ ಪಾಲುದಾರ ಆಕಾಶ್ ಮಾತನಾಡಿ, ರವಿ ನಾರಾಯಣ ಅವರು ನಮ್ಮನ್ನು ಬೆಂಬಲಿಸುತ್ತಿದ್ದಾರೆ. ನಾವು ಕೂಡ ಅವರನ್ನು ಬೆಂಬಳಿಸುತ್ತಿದ್ದೇವೆ, ಪರಸ್ಪರ ಸಹಕಾರದೊಂದಿಗೆ ಉದ್ಯಮದಲ್ಲಿ ಯಶಸ್ಸು ಸಾಧಿಸಲು ಸಾದ್ಯವಾಗುತ್ತದೆ ಎಂದು ಹೇಳಿ ಶುಭಹಾರೈಸಿದರು.
ಹೆವೆಲ್ತ್ ಇಂಡಿಯಾ ಲಿಮಿಟೆಡ್ ಕರ್ನಾಟಕ ಬ್ರಾಂಚ್ ಹೆಡ್ ನವೀನ್ ಚಂದ್ರನ್ ಮಾತನಾಡಿ, ಮೈತ್ರಿ ಎಲೆಕ್ನಿಕ್ ಪುತ್ತೂರಿನ ಹೆವೆಲ್ಸ್ ಕಂಪನಿಯ ಏಕೈಕ ಅಧಿಕೃತ ಡೀಲರ್ ಆಗಿದೆ. ಗ್ರಾಹಕರು ಹೆವೆಲ್ಸ್‌ನ ವಿವಿಧ ಉತ್ಪನ್ನಗಳನ್ನು ಮೈತ್ರಿ ಎಲೆಕ್ನಿಕ್‌ನಲ್ಲಿ ಖರೀದಿಸಬಹುದು. ಮೈತ್ರಿ ಕಂಪನಿಯ ಮಾಲಕ ರವಿ ಅವರು ಸಣ್ಣ ಮಟ್ಟದಿಂದ ಉದ್ಯಮ ಆರಂಭಿಸಿ ಬೆಳೆದಂತೆ, ಹೆವೆಲ್ಸ್ ಕಂಪನಿಯೂ 10 ಸಾವಿರ ರೂ.ನಿಂದ ಆರಂಭವಾಗಿ ಇಂದು ಸುಮಾರು 25 ಸಾವಿರ ಕೋಟಿ ರೂ. ವಹಿವಾಟಿನ ಉದ್ಯಮವಾಗಿ ಬೆಳೆದಿದೆ. ಎಸಿ, ಫ್ಯಾನ್ ಗಳು, ಸ್ವಿಚ್‌ಗಳು, ಮೇನ್ ಸ್ವಿಚ್‌ಗಳು, ಲೈಟ್ ಗಳು, ಮಿಕ್ಸರ್‌ಗಳು ಸೇರಿದಂತೆ ಹಲವು ಉತ್ಪನ್ನಗಳು ಇಲ್ಲಿ ಲಭ್ಯವಿವೆ. ವಿಶೇಷವಾಗಿ ಹೆವೆಲ್ಸ್ ಕಂಪನಿಯ ಇವಿ ಚಾರ್ಜರ್ ಇಲ್ಲಿ ಖರೀದಿಸಬಹುದು ಎಂದು ತಿಳಿಸಿದರು.
ಹೆವೆಲ್ಸ್ ಕಂಪನಿಯ ವೈರ್ ವಿಭಾಗದ ಆರ್‌ಎಸ್‌ಎಂ ವಿವೇಕಾನಂದ ಭಟ್ ಮಾತನಾಡಿ, ಗ್ರಾಹಕರನ್ನು ತಲುಪುವ ನಿಟ್ಟಿನಲ್ಲಿ ಮೈತ್ರಿ ಎಲೆಕ್ನಿಕ್ ನಿರಂತರವಾಗಿ ಹೊಸ ಪ್ರಯತ್ನಗಳನ್ನು ಮಾಡುತ್ತಿದೆ. ಇದೀಗ ಹೆವೆಲ್ಸ್ ಕಂಪನಿಯೊಂದಿಗೆ ಡೀಲರ್‌ಶಿಪ್ ಹೊಂದುವ ಮೂಲಕ ತನ್ನ ಉದ್ಯಮವನ್ನು ಮತ್ತಷ್ಟು ವಿಸ್ತರಿಸಿದೆ ಎಂದು ಹೇಳಿದರು.
ಇಂಜಿನಿಯರ್ ಕಮ್ಮಾಜೆ ಕೇಶವ್ ಭಟ್, ಹೆವೆಲ್ಸ್ ಕಂಪನಿಯ ಕರ್ನಾಟಕ ಕೋಸ್ಟಲ್ ಟೆರಿಟರಿಯ ಫ್ಯಾನ್ ಮತ್ತು ಲೈಟ್ಸ್ ಮ್ಯಾನೇಜರ್ ರುದ್ರಯ್ಯ (ಮುತ್ತು), ಮಾರ್ಕೆಟಿಂಗ್ ಮ್ಯಾನೇಜರ್ ಆನಂದ್, ಬ್ರಾಂಡ್ ಸ್ಟೋರ್ ಮ್ಯಾನೇಜರ್ ಕಿಶೋರ್ ಸೇರಿದಂತೆ ಕರಾವಳಿ ಭಾಗದ ವಿವಿಧ ಉತ್ಪನ್ನ ವಿಭಾಗಗಳ ಮ್ಯಾನೇಜರ್‌ಗಳು ಉಪಸ್ಥಿತರಿದ್ದರು.
ಮೈತ್ರಿ ಇಲೆಕ್ಟಿಕ್ ಅರ್ಬನ್ ಮತ್ತು ಸಿಬ್ಬಂದಿ ವರ್ಗದವರು ಸಹಕರಿಸಿದರು. ಶೌರಿ ಪ್ರಾರ್ಥಿಸಿದರು. ಮೈತ್ರಿ ಎಲೆಕ್ನಿಕ್ ಮಾಲಕರ ಪುತ್ರ ಪ್ರಮಥ ಸ್ವಾಗತಿಸಿದರು. ಶಿವ ಸುಬ್ರಹ್ಮಣ್ಯ ಪಲ್ಲತ್ತಡ್ಕ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.














