ಸಾಲ ತೀರಿಸಲು ಅಮಿತಾಭ್ ಬಚ್ಚನ್ 18 ಗಂಟೆ ಕೆಲಸ!! ರಜನೀಕಾಂತ್‌ ನೆನಪಿನಂಗಳದಲ್ಲಿ ಕೌನ್‌ ಬನೇಗಾ ಕರೋಡ್‌ಪತಿ!!

ಬಾಲಿವುಡ್ ಹಿರಿಯ ನಟ ಬಿಗ್ ಬಿ ಅಮಿತಾಭ್ ಬಚ್ಚನ್ ಅವರು ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದಾಗ, ಸಾಲ ತೀರಿಸಲು ತಮ್ಮ 64ನೇ ವಯಸ್ಸಿನಲ್ಲೂ ದಿನಕ್ಕೆ 18 ಗಂಟೆ ದುಡಿಯುತ್ತಿದ್ದ ಎಂಬ ವಿಚಾರವನ್ನು ರಜನಿಕಾಂತ್ ಅವರು ನೆನಪಿಸಿಕೊಂಡಿದ್ದರು. 2024ರಲ್ಲಿ ವೇಟ್ಟೈಯಾನ್ ಸಿನಿಮಾದ ಆಡಿಯೊ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ರಜನಿಕಾಂತ್, ಬಿಗ್ ಬಿ ಅವರ ದೃಢಸಂಕಲ್ಪವನ್ನು ಕೊಂಡಾಡಿದ್ದರು.

Advertisement

‘ಅಮಿತಾಭ್ ಬಚ್ಚನ್ ಅವರು ಕಷ್ಟದಲ್ಲಿದ್ದಾಗ ಜಾಹೀರಾತುಗಳಲ್ಲಿ ನಟಿಸುತ್ತಿದ್ದುದನ್ನು ನೋಡಿ ಮುಂಬೈನ ಕೆಲವರು ಹಣಕ್ಕಾಗಿ ಇಳಿ ವಯಸ್ಸಿನಲ್ಲೂ ಆ್ಯಡ್ಮಾಡುತ್ತಿದ್ದಾರೆ ಎಂದು ಗೇಲಿಮಾಡಿದ್ದರು. ಆದರೆ ದೇಹದಲ್ಲಿ ಸಾವಿರ ಆರೋಗ್ಯ ಸಮಸ್ಯೆಗಳಿದ್ದರೂ, 64ನೇ ವಯಸ್ಸಿನಲ್ಲಿ ದಿನಕ್ಕೆ 18 ಗಂಟೆ ಸತತ ಮೂರು ವರ್ಷ ಕೆಲಸಮಾಡಿ, ತಮಗಿದ್ದ ಎಲ್ಲಾ ಸಾಲಗಳನ್ನು ತೀರಿಸಿದ್ದಲ್ಲದೆ, ಒಂದೇ ರಸ್ತೆಯಲ್ಲಿ ಮೂರು ಐಷಾರಾಮಿ ಮನೆಗಳನ್ನು ಖರೀದಿಸಿದರು. ಅದು ಅಮಿತಾಭ್ ಬಚ್ಚನ್ ಎಂದರೆ’ ಎಂದು ರಜನಿಕಾಂತ್ ಹೆಮ್ಮೆಯಿಂದ ಹೇಳಿದ್ದರು.
1990ರ ದಶಕದ ಕೊನೆಯಲ್ಲಿ ಅಮಿತಾಭ್ ಬಚ್ಚನ್ ಅವರ ಸ್ವಂತ ನಿರ್ಮಾಣ ಸಂಸ್ಥೆ ‘ಎಬಿಸಿಎಲ್’ ದಿವಾಳಿಯಾಗಿ ₹90 ಕೋಟಿಯಷ್ಟು ಸಾಲದ ಸುಳಿಗೆ ಸಿಲುಕಿದ್ದರು. ಜೀವಮಾನದ ಸಂಪಾದನೆಯನ್ನೆಲ್ಲ ಕಳೆದುಕೊಂಡಿದ್ದ ಬಿಗ್ ಬಿ, 2000ನೇ ಇಸವಿಯಲ್ಲಿ ಪ್ರಸಾರವಾದ ‘ಕೌನ್ ಬನೇಗಾ ಕರೋಡ್ಪತಿ’ ರಿಯಾಲಿಟಿ ಶೋ ಮೂಲಕ ಕಮ್ಬ್ಯಾಕ್‌ಮಾಡಿ, ಸಂಪೂರ್ಣ ಆರ್ಥಿಕ ಚೇತರಿಕೆ ಕಂಡಿದ್ದರು.

Advertisement
Advertisement

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page