ಅಮೆರಿಕದ ರಿಫ್ಲೆಕ್ಟ್ ಆರ್ಬಿಟಲ್ ಎಂಬ ಸ್ಟಾರ್ಟಪ್ ರಾತ್ರಿಯಾಗಿರುವ ಭೂಪ್ರದೇಶಗಳಲ್ಲಿ ಬಾಹ್ಯಾಕಾಶದಿಂದ ಸೂರ್ಯನ ಬೆಳಕು ಹಾಯಿಸುವ ಸಾಹಸಕ್ಕೆ ಕೈ ಹಾಕಿದೆ. ಅದಕ್ಕಾಗಿ ಹೈದರಾಬಾದ್ ಸ್ಕೈರೂಟ್ ಏರೋಸ್ಪೇಸ್ ಜತೆ ಒಪ್ಪಂದ ಮಾಡಿಕೊಂಡಿದೆ ಎಂದು ತಿಳಿದು ಬಂದಿದೆ.
ಸೂರ್ಯನ ಸುತ್ತ ಭೂಮಿ ಸುತ್ತುವುದರಿಂದ ಭೂಮಿ ಮೇಲೆ ಯಾವಾಗಲೂ 1 ಪಾರ್ಶ್ವದಲ್ಲಿ ಹಗಲು, ಮತ್ತೊಂದು ಪಾರ್ಶ್ವದಲ್ಲಿ ರಾತ್ರಿ ಇರುತ್ತದೆ. ಬಾಹ್ಯಾಕಾಶದಲ್ಲಿ ಬೃಹತ್ ಪ್ರತಿಫಲಕಗಳನ್ನು ಹೊಂದಿರುವ ಉಪಗ್ರಹಗಳ ಮೂಲಕ ಸೂರ್ಯನ ಕಿರಣಗಳನ್ನು ಭೂಮಿಗೆ ಹರಿಸುವ ಪರಿಕಲ್ಪನೆಯಿದು ಎಂದು ಪತ್ರಿಕಾ ಮಾದಯಮಗಳು ವರದಿ ಮಾಡಿವೆ.
ಪ್ರಾಕೃತಿಕ ವಿಕೋಪದ ವೇಳೆ ರಕ್ಷಣಾ ಕಾರ್ಯಗಳಿಗೆ, ನಿರ್ಮಾಣ ಕಾರ್ಯಗಳಿಗೆ ಸೂರ್ಯನ ಬೆಳಕು ಪ್ರತಿಫಲಿಸಲಾಗುತ್ತದೆ. ಇದಕ್ಕಾಗಿ ಹಣವನ್ನೂ ಪಡೆಯಲಾಗುತ್ತದೆ. ಹೀಗೆ ಬರುವ ಬೆಳಕಿನ ಪ್ರಖರತೆಯನ್ನು ಅಗತ್ಯಕ್ಕೆ ತಕ್ಕಂತೆ ಹೆಚ್ಚುಕಡಿಮೆ ಮಾಡಿಕೊಳ್ಳಬಹುದು. ಸುಮಾರು 5 ಕಿ.ಮೀ. ವ್ಯಾಪ್ತಿಯವರೆಗೆ ಬೆಳಕನ್ನು ಹರಿಸಬಹುದಾಗಿದೆ.
ರಿಫ್ಲೆಕ್ಟ್ ಆರ್ಬಿಟಲ್ ನಿರ್ಮಿಸಲಿರುವ 2 ದೈತ್ಯ ಫಲಕ ಹೊತ್ತ ಉಪಗ್ರಹಗಳನ್ನು ಸ್ಕೈರೂಟ್ ತಾನು ನಿರ್ಮಿಸಿರುವ ವಿಕ್ರಂ 1 ಹಾಗೂ ವಿಕ್ರಂ 1ಎ ರಾಕೆಟ್ಗಳ ಮೂಲಕ ಬಾಹ್ಯಾಕಾಶ ತಲುಪಿಸುತ್ತದೆ ಎಂದು ವರದಿಯಾಗಿದೆ.














