ನನ್ನ ಕುಡಿತದ ಚಟ ಮಿತಿ ಮೀರಿತ್ತು!! ಮದ್ಯವಸನ ಪುನರ್ವಸತಿ ಕೇಂದ್ರದಲ್ಲಿ ಯಜುವೇಂದ್ರ ಚಹಲ್!

ನವದೆಹಲಿ: ಇತ್ತೀಚೆಗೆ ಪ್ರಥಮ ದರ್ಜೆ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ಸ್ಪಿನ್ನರ್ ಯಜುವೇಂದ್ರ ಚಹಲ್ ತನಗಿದ್ದ ಮದ್ಯ ವ್ಯಸನದ ಬಗ್ಗೆ ಮಾತನಾಡಿದ್ದಾರೆ. ವ್ಯಸನದಿಂದ ಹೊರಬರಲು ತನಗೆ ಪುನಶ್ಚೇತನ ಕೇಂದ್ರ ನೆರವಾಯಿತು ಎಂದವರು ಹೇಳಿಕೊಂಡಿದ್ದಾರೆ. ಕಳೆದ ಬಾರಿ ಕೌಂಟಿಯಲ್ಲಿ ಆಡುವಾಗ ನನ್ನ ಕುಡಿತದ ಚಟ ಮಿತಿ ಮೀರಿತ್ತು ಎಂದು ಚಹಲ್ ಮಾಧ್ಯಮಗಳಿಗೆ ತಿಳಿಸಿದ್ದಾರೆ

Advertisement

“ಕಳೆದ ವರ್ಷದ ಕೌಂಟಿ ಕ್ರಿಕೆಟ್‌ನ ನಂತರ, ಪರಿಸ್ಥಿತಿ ಮಿತಿಮೀರಿತ್ತು. ಹಾಗಾಗಿ ನಾನು ಪುನರ್ವಸತಿ ಕೇಂದ್ರಕ್ಕೆ ಸೇರಿಕೊಂಡೆ, ಅಲ್ಲಿ 26 ದಿನಗಳ ಕಾಲ ಇದ್ದೆ. ಈಗ, ಇದನ್ನು ಹೇಗೆ ನಿಭಾಯಿಸಬೇಕೆಂದು ನನಗೆ ತಿಳಿದಿದೆ. ಆ ನಿರ್ಧಾರವು ನನ್ನ ವೈಯಕ್ತಿಕ ಜೀವನದಲ್ಲಿ ದೊಡ್ಡ ಬದಲಾವಣೆಯನ್ನು ತಂದಿತು” ಎಂದು ಚಾಹಲ್ ಹೇಳಿದ್ದಾರೆ.
“ನನ್ನಲ್ಲಿ ಪ್ರಬುದ್ಧತೆ ಹೆಚ್ಚಿದೆ. ಈಗ ನನ್ನ ಭಾವನೆಗಳು ಸಮತೋಲನದಲ್ಲಿವೆ. ಕಳೆದ ಐಪಿಎಲ್ ವೇಳೆ, ಜಿಮ್‌ನಲ್ಲಿ ವ್ಯಾಯಾಮ ಮಾಡುವುದು, ಫೀಲ್ಡಿಂಗ್ ಅಭ್ಯಾಸಗಳು ಮತ್ತು ಸರಿಯಾದ ತರಬೇತಿಯಲ್ಲಿ ತೊಡಗಿಸಿಕೊಂಡಿದ್ದೆ” ಎಂದು ಪಂಜಾಬ್ ಕಿಂಗ್ಸ್ ತಂಡದ ಸ್ಪಿನ್ನರ್ ಹೇಳಿದರು.
ಕಳೆದ ವರ್ಷ ನಾರ್ತಾಂಪ್ಟನ್ ಶೈರ್ ಪರ ಚಾಹಲ್ ಆಡಿದ್ದರು. ಐಪಿಎಲ್‌ನಲ್ಲಿ ಗರಿಷ್ಠ ವಿಕೆಟ್ (233) ಸರದಾರ ಆಗಿರುವ ಚಾಹಲ್ ಸದ್ಯ ಭಾರತ ತಂಡದಿಂದ ನಿರ್ಲಕ್ಷಿಸಲ್ಪಡುತ್ತಿದ್ದಾರೆ.

Advertisement
Advertisement

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page