ಹೊಸ ಬೈಕ್ ಖರೀದಿಯ ಹಣಕ್ಕಾಗಿ ಸಹಪಾಠಿಯನ್ನೇ ಕೊಲೆ! ದೃಶ್ಯಂ 3 ಸಿನೆಮಾದಿಂದ ಕೃತ್ಯಕ್ಕೆ ಪ್ರೇರಣೆ!!

ಮಹಾರಾಷ್ಟ್ರ : ಗೆಳೆಯನ ಹುಟ್ಟುಹಬ್ಬದ ಪಾರ್ಟಿ ಆಚರಿಸಲು ಮತ್ತು ಹೊಸ ಬೈಕ್ ಖರೀದಿಗಾಗಿ ಸಹಪಾಠಿಯೊಬ್ಬನನ್ನೇ ಕೊಲೆಮಾಡಿ ಆತನ ಬಳಿಯಿದ್ದ ₹1 ಲಕ್ಷ ಮೌಲ್ಯದ ಚಿನ್ನದ ಸರ ದೋಚಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ಠಾಣೆಯಲ್ಲಿ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹನ್ನೆರಡನೇ ತರಗತಿಯ ಇಬ್ಬರು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

Advertisement

‘ದೃಶ್ಯಂ 3’ ಸಿನಿಮಾ ವೀಕ್ಷಿಸಿದ್ದ ಆರೋಪಿಗಳು, ಅದರಿಂದ (ಸಿನಿಮಾ) ಪ್ರೇರಣೆ ಪಡೆದು ಸಾಕ್ಷ್ಯನಾಶಪಡಿಸಲು ಹಾಗೂ ಪೊಲೀಸರ ‘ದೃಶ್ಯಂ 3’ ಸಿನಿಮಾ ವೀಕ್ಷಿಸಿದ್ದ ಆರೋಪಿಗಳು, ಅದರಿಂದ (ಸಿನಿಮಾ) ಪ್ರೇರಣೆ ಪಡೆದು ಸಾಕ್ಷ್ಯನಾಶಪಡಿಸಲು ಹಾಗೂ ಪೊಲೀಸರ ದಾರಿ ತಪ್ಪಿಸಲು ಯೋಜನೆ ರೂಪಿಸಿದ್ದರು ಎಂಬ ವಿಷಯ ತನಿಖೆಯಲ್ಲಿ ಬಯಲಾಗಿದೆ. ಸೆಪ್ಟೆಂಬರ್ 24ರ ಸಂಜೆ ಸಹಪಾಠಿಯನ್ನು (ಮೃತ ಬಾಲಕ) ಸಿಗರೇಟ್ ಸೇದುವ ನೆಪದಲ್ಲಿ ‘ಬ್ರಹ್ಮಾಂಡ್ ಫೇಸ್ 2’ ಬಳಿಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದ ಆರೋಪಿಗಳು, ಚಾಕು ಮತ್ತು ಕಲ್ಲಿನಿಂದ ಹಲ್ಲೆ ನಡೆಸಿ ಕೊಲೆಮಾಡಿದ್ದಾರೆ. ಕೃತ್ಯದ ನಂತರ ಮೃತದೇಹವನ್ನು ಪೊದೆಯಲ್ಲಿ ಅಡಗಿಸಿ, ಬೆಂಕಿ ಹಚ್ಚಿ ಸುಡಲು ಯತ್ನಿಸಿದ್ದಾರೆ. ಸಾಕ್ಷ್ಯನಾಶಕ್ಕೆ ಬಾಲಕನ ಫೋನ್ ಅನ್ನು ನಾಶಪಡಿಸಿದ್ದಾರೆ.

Advertisement
Advertisement

ಪೋಲಿಸರು ಕಟ್ಟುನಿಟ್ಟಾಗಿ ವಿಚಾರಣೆ ನಡೆಸಿದಾಗ ಒಬ್ಬ ಆರೋಪಿ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. ಆತನ ಸುಳಿವಿನ ಮೇರೆಗೆ ಪೊಲೀಸರು ಅರ್ಧ ಸುಟ್ಟ ಸ್ಥಿತಿಯಲ್ಲಿದ್ದ ಮೃತದೇಹದ ಅವಶೇಷಗಳನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸರು ಅರ್ಧ ಸುಟ್ಟ ಸ್ಥಿತಿಯಲ್ಲಿದ್ದ ಮೃತದೇಹದ ಅವಶೇಷಗಳನ್ನು ವಶಪಡಿಸಿಕೊಂಡಿದ್ದಾರೆ. ‘ದೃಶ್ಯಂ 3’ ಸಿನಿಮಾ ನೋಡಿದ್ದ ಇವರು, ಪೊಲೀಸರ ಕಣ್ಣು ತಪ್ಪಿಸಲು ಸಿನಿಮಾದ ತಂತ್ರಗಳನ್ನು ಬಳಸಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ ಎಂದು ಜಾಲತಾಣ ಮೂಲಗಳು ಹೇಳಿವೆ.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page