ಮುಸ್ಲಿಂ ಅಜ್ಜಿ ನಿಧನಕ್ಕೆ ರಾಮಲೀಲಾ ಕಾರ್ಯಕ್ರಮ ರದ್ದು! ಕೋಮು ಸಾಮರಸ್ಯಕ್ಕೆ ಸಾಕ್ಷಿಯಾದ ಗ್ರಾಮಸ್ಥರು!!

ವಯಸ್ಸಾದ ಮುಸ್ಲಿಂ ಅಜ್ಜಿಯೊಬ್ಬರು ತೀರಿಕೊಂಡ ಹಿನ್ನೆಲೆಯಲ್ಲಿ ಅದೇ ಹಳ್ಳಿಯಲ್ಲಿ ಭಾನುವಾರ ದಸರಾ ಪ್ರಯುಕ್ತ ನಡೆಯುತ್ತಿದ್ದ ರಾಮಲೀಲಾ ಜಾನಪದ ಕಾರ್ಯಕ್ರಮವನ್ನು ಗ್ರಾಮಸ್ಥರು ಸ್ವಯಂ ಪ್ರೇರಿತವಾಗಿ ರದ್ದು ಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.

Advertisement

ಈ ಅಪರೂಪದ ಘಟನೆ ಉತ್ತರ ಪ್ರದೇಶದ ಬಿಜ್ನೊರ್ ಜಿಲ್ಲೆಯ ಮೊಹ್ರಾ ಎಂಬ ಹಳ್ಳಿಯಲ್ಲಿ ನಡೆದಿದೆ. ಜಾಕಿರ್ ಎಂಬ ವೈದ್ಯರ ತಾಯಿ ಗಫೂರನ್ ಎಂಬ ವೃದ್ಧೆಯು ಭಾನುವಾರ ಬೆಳಗ್ಗೆ ಅಸ್ವಸ್ಥರಾಗಿದ್ದರು. ಅವರನ್ನು ಹತ್ತಿರದ ಧಾಮ್‌ಪುರ್‌ನ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರು ಕೊನೆಯುಸಿರೆಳೆದಿದ್ದಾರೆ. ಆ ಸುದ್ದಿ ಬಂದಾಗ ಗ್ರಾಮದಲ್ಲಿ ರಾಮಲೀಲಾ ಕಾರ್ಯಕ್ರಮ ನಡೆಯುತ್ತಿತ್ತು. ಸುದ್ದಿ ತಿಳಿದ ಗ್ರಾಮಸ್ಥರು ಬೇಸರಗೊಂಡು ಕಾರ್ಯಕ್ರಮವನ್ನು ಹಠಾತ್ತಾಗಿ ಸ್ಥಗಿತಗೊಳಿಸಿದ್ದಾರೆ ಎಂದು ಮೂಲಗಳು ವರದಿಯಲ್ಲಿ ಹೇಳಿವೆ.

Advertisement
Advertisement

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page